»   » ಪಕ್ಕಾ ಕಮರ್ಷಿಯಲ್ ಆಗಿರುವ 'ವಾಸು' ಟೀಸರ್ ಇಲ್ಲಿದೆ ನೋಡಿ...

ಪಕ್ಕಾ ಕಮರ್ಷಿಯಲ್ ಆಗಿರುವ 'ವಾಸು' ಟೀಸರ್ ಇಲ್ಲಿದೆ ನೋಡಿ...

Posted By:
Subscribe to Filmibeat Kannada

'ಅಕಿರ' ಸಿನಿಮಾ ಬಳಿಕ 'ನಮ್ ಏರಿಯಾಲ್ ಒಂದಿನ' ಸಿನಿಮಾ ಖ್ಯಾತಿಯ ನಟ ಅನೀಶ್ ತೇಜೇಶ್ವರ್ ಅಭಿನಯಿಸಿರುವ ಹೊಚ್ಚ ಹೊಸ ಸಿನಿಮಾ 'ವಾಸು ನಾನ್ ಪಕ್ಕಾ ಕಮರ್ಷಿಯಲ್'.

ವಿಭಿನ್ನ ಟೈಟಲ್ ಮೂಲಕ ಗಮನ ಸೆಳೆದಿರುವ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಎಣ್ಣೆ ಹೊಡೆಯುತ್ತಾ ''ಆಸ್ತಿಯೆಲ್ಲ ನಾಯಿಗೆ ಬರೀತಾನಂತೆ ನಮ್ಮ ಅಪ್ಪ'' ಎಂಬ ಡೈಲಾಗ್ ನಿಂದ ಆರಂಭ ಆಗುವ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದ ಟೀಸರ್ ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದ ಹಾಗಿದೆ.

Watch Kannada Movie 'Vaasu Naan Pakka Commercial' teaser

ನಾಲ್ಕು ತಿಂಗಳಲ್ಲಿ ನಾಲ್ಕೇ ಸಲ ಊಟ ಮಾಡಿದ್ರಂತೆ ಅನಿಶ್

ಪಕ್ಕಾ ಲೋಕಲ್ ಹುಡುಗ 'ವಾಸು' ಸುತ್ತ ಹೆಣೆದಿರುವ ಕಥೆ ಈ 'ವಾಸು ನಾನ್ ಪಕ್ಕಾ ಕಮರ್ಷಿಯಲ್'. ಶೀರ್ಷಿಕೆಗೆ ತಕ್ಕ ಹಾಗೆ ಕಮರ್ಷಿಯಲ್ ಅಂಶಗಳು ಹಾಗೂ ಖಡಕ್ ಡೈಲಾಗ್ ಗಳು ಸಿನಿಮಾದಲ್ಲಿ ಇವೆ ಅನ್ನೋದಕ್ಕೆ ಈಗಷ್ಟೇ ಬಿಡುಗಡೆ ಅಗಿರುವ ಈ ಟೀಸರ್ ಸಾಕ್ಷಿ.

ಅಜಿತ್ ವಾಸನ್ ನಿರ್ದೇಶನ ಮಾಡಿರುವ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾ ಇನ್ನೂ ಶೂಟಿಂಗ್ ಹಂತದಲ್ಲಿದೆ. ಸಿನಿಮಾದಲ್ಲಿ ಅನೀಶ್ ಗೆ ನಿಶ್ವಿಕಾ ನಾಯ್ಡು ಹೀರೋಯಿನ್. ಟೀಸರ್ ನಲ್ಲಿ 'ವಾಸು' ಪರಿಚಯ ಇರೋದ್ರಿಂದ ನಾಯಕಿಯ ಸುಳಿವು ಸಿಕ್ಕಿಲ್ಲ.

'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಇದೆ. ಸದ್ಯ ಚಿತ್ರೀಕರಣದ ಹಂತದಲ್ಲಿ ಇರುವ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ಟೀಸರ್ ಇಲ್ಲಿದೆ. ನೋಡ್ಕೊಂಡ್ ಬನ್ನಿ....

English summary
Kannada Movie 'Vaasu Naan Pakka Commercial' teaser is out. Watch video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada