»   » 'ಅದು ರೀಲು, ಇದು ರಿಯಲ್ಲು' ಕಿರುಚಿತ್ರ ನೋಡಿ ಒಮ್ಮೆ ನಕ್ಕುಬಿಡಿ

'ಅದು ರೀಲು, ಇದು ರಿಯಲ್ಲು' ಕಿರುಚಿತ್ರ ನೋಡಿ ಒಮ್ಮೆ ನಕ್ಕುಬಿಡಿ

Posted By:
Subscribe to Filmibeat Kannada

ಇತ್ತೀಚೆಗೆ ಕಿರುಚಿತ್ರಗಳನ್ನು ಮಾಡಿ ಯೂಟ್ಯೂಬ್ ಗಳಲ್ಲಿ ಅಪ್ ಲೋಡ್ ಮಾಡುವ ಮೂಲಕ ಹಲವರು ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣ ಮಾಡುತ್ತಿದ್ದಾರೆ. ಅದ್ರಲ್ಲೂ ವಿಶೇಷವಾಗಿ ಇಂತಹ ವಿಭಿನ್ನ ಪ್ರಯೋಗಗಳನ್ನು 'ನಮ್ದು-ಕೆ' ಎಂಬ ಕನ್ನಡಾಭಿಮಾನಿಗಳು ಯಾವಾಗಲೂ ಮಾಡುತ್ತಿರುತ್ತಾರೆ.

'ನಮ್ದು-ಕೆ' ಅನ್ನೋ ತಂಡ ಕಟ್ಟಿಕೊಂಡಿರುವ ಈ ಅಪ್ಪಟ ಕನ್ನಡಿಗರು ಇದೀಗ 'ಅದು ರೀಲು, ಇದು ರಿಯಲ್ಲು' ಅನ್ನೋ ವಿಭಿನ್ನ ಕಾಮಿಡಿ ಕಿರುಚಿತ್ರ ಮಾಡಿ ವೀಕ್ಷಕರ ಮನದಲ್ಲಿ ನಗು ಮೂಡಿಸಿದ್ದಾರೆ. ಈಗಾಗಲೇ ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ಈ ಕಿರುಚಿತ್ರ ಯೂಟ್ಯೂಬ್ ನಲ್ಲಿ ಸುಮಾರು ಮೂರೂವರೆ ಸಾವಿರ ಜನರ ವೀಕ್ಷಣೆಗೆ ಒಳಪಟ್ಟಿದೆ.['ಅಚ್ಚ'ಕನ್ನಡ ಹಾಡುಗಳ ಕಾಲೆಳೆದ 'ನಮ್ದುಕೆ' ವಾಹಿನಿ]

Watch Kannada Short Film 'Adu Reelu, Idu Reallu' by Namdu K

ಅನುಷಾ ವಿಶ್ವನಾಥ್, ರಮ್ಯಾ ವರ್ಣ, ಮಮತಾ ಹಿರೇಮಠ್, ಶುಭ ಟಿ.ಎಸ್, ಗೌತಮ್ ಶಶಿಧರ್, ಗೌತಮ್ ಅನೀಶ್, ಅರ್ಜುನ್, ವೀರೇಶ್ ಟಿ.ಇ, ಸಚಿನ್, ಹಾಲೇಶ್ ಡಿ.ಪಿ, ಸಂದೀಪ್ ಟಿ.ಸಿ, ಭಾರಾದ್ವಾಜ್ ಡಿ.ಜೆ, ಶ್ರವಣ್ ಮುಂತಾದ ಪ್ರತಿಭಾವಂತರು ಸೇರಿಕೊಂಡು ಮಾಡಿರುವ 'ಅದು ರೀಲು, ಇದು ರಿಯಲ್ಲು' ಅನ್ನೋ ಪಕ್ಕಾ ಕಾಮಿಡಿ ಕಿರುಚಿತ್ರ ನಿಮ್ಮ ಮುಖದಲ್ಲಿ ಖಂಡಿತ ನಗು ತರಿಸುತ್ತದೆ.[ಕನ್ನಡಾಭಿಮಾನಿಗಳೇ..ಮಿಸ್ ಮಾಡ್ದೆ ಈ ವಿಡಿಯೋ ನೋಡಿ]

ಅಂದಹಾಗೆ ಈ ಕಾಮಿಡಿ ಕಿರುಚಿತ್ರದ ಕಾನ್ಸೆಪ್ಟ್ ಏನು ಅಂತ ನಾವು ನಿಮಗೆ ಇಲ್ಲಿ ವಿವರಿಸಿ ಹೇಳುವ ಬದಲು ನೀವೇ ಈ ಕಾಮಿಡಿ ಕಿರುಚಿತ್ರ ನೋಡಿ ಆನಂದ ಪಡಬಹುದು. 'ಅದು ರೀಲು, ಇದು ರಿಯಲ್ಲು' ಕಿರುಚಿತ್ರದ ವಿಡಿಯೋ ಇಲ್ಲಿದೆ ನೀವು ನೋಡಿ ಎಂಜಾಯ್ ಮಾಡಿ.."ಅದು reelಉ, ಇದು realಉ" ಕಿರುಚಿತ್ರದ ಸ್ಕ್ರೀನ್ ಶಾಟ್ ಗಳು ಕೆಳಗಿನ ಗ್ಯಾಲರಿಯಲ್ಲಿ.[ಅಣಕು ವಿಡಿಯೋ: ಎಕ್ಸಾಂ ಹಾಲ್ ನಲ್ಲಿ ಕನ್ನಡ ಸಾಂಗ್ಸ್]

-
-
-
-
-
-
-
-
-
-
-
-
-
English summary
Kannada Short Film 'Adu Reelu, Idu Reallu' by Namdu K Team. Watch Video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada