'ಗಣಪನ ಮದುವೆ' ಕಿರುಚಿತ್ರ: ಮದುವೆಯಾಗಲು ಹುಡುಗಿ ಹುಡುಕುವ ಹುಡುಗರ ಕಥೆ-ವ್ಯಥೆ

By Harshitha

Recommended Video

ಮದುವೆಯಾಗಲು ಹುಡುಗಿ ಹುಡುಕುವ ಹುಡುಗರ ಕಥೆ-ವ್ಯಥೆ ಈ 'ಗಣಪನ ಮದುವೆ | Filmibeat Kannada

ಜನಸಾಮಾನ್ಯರ ಬದುಕಿನ ಕಥೆಯನ್ನು ತೆರೆದಿಡುವ 'ಪ್ರೆಷರ್ ಕುಕ್ಕರ್' ಎಂಬ ಕಿರುಚಿತ್ರ ನಿರ್ದೇಶನ ಮಾಡಿದ್ದ ಪತ್ರಕರ್ತ ವಿನಾಯಕ ಕೋಡ್ಸರ ಇದೀಗ 'ಗಣಪನ ಮದುವೆ' ಎಂಬ ಕಿರುಚಿತ್ರವನ್ನ ನಿಮ್ಮೆಲ್ಲರ ಮುಂದೆ ತಂದಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ರಿಲೀಸ್ ಆದ 'ಗಣಪನ ಮದುವೆ' ಕಿರುಚಿತ್ರವನ್ನ ಅದಾಗಲೇ ಹತ್ತು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಮದುವೆ ಆಗಲು ಸಿದ್ಧವಾಗಿರುವ ಹುಡುಗ 'ಗಣಪ'ನ ಸುತ್ತ ಹೆಣೆದಿರುವ ಕಥೆಯೇ 'ಗಣಪನ ಮದುವೆ'. ಮೂರ್ನಾಲ್ಕು ಹುಡುಗಿಯರನ್ನು ಭೇಟಿ ಮಾಡಿದ್ಮೇಲೆ, 'ಇನ್ಮೇಲೆ ಮದುವೆ ಆಗಲ್ಲ' ಅಂತ ಡಿಸೈಡ್ ಮಾಡುವ ಗಣಪನ ಜೀವನದಲ್ಲಿ ಮುಂದೇನಾಗುತ್ತೆ ಅನ್ನೋದೇ ಕಿರುಚಿತ್ರದ ಹೂರಣ.

Watch Kannada short movie Ganapana Maduve

ಪ್ರಶಾಂತ್ ದೇಸಾಯಿ, ನವಿತಾ ಜೈನ್, ವನಿತಾ ಜೈನ್, ಸುಚೇತಾ ಭಟ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಸಂದೀಪ್.ಎ.ಥಾಮಸ್ - ಜೈಬಿನ್.ಟಿ ಛಾಯಾಗ್ರಹಣ, ಹರ್ಷ ಕೊಗೊದ್ - ವಿಶ್ವಪ್ರೇಮಿ ವಿಜಯ್ ಸಂಗೀತ, ವಿಶಾಲ್ ರಾಜ್ ಸಂಕಲನವಿದೆ.

ರಂಜನಾ ಹೆಗ್ಡೆ, ಅನಿಲ್ ಭಾರದ್ವಾಜ್ ನಿರ್ಮಾಣ ಮಾಡಿರುವ 'ಗಣಪನ ಮದುವೆ' ಕಿರುಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವವರು ವಿನಾಯಕ್ ಕೋಡ್ಸರ.

'ಗಣಪನ ಮದುವೆ' ಕಥೆಯನ್ನ ನೀವೂ ಒಮ್ಮೆ ನೋಡಿ, ಹೇಗಿದೆ ಅಂತ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಅಭಿಪ್ರಾಯ ತಿಳಿಸಿ..

More from Filmibeat

English summary
'Ganapana Maduve', Kannada Short Movie Directed by Vinayaka.K.S is released in Youtube. Ganapana Maduve features Prashanth Desai, Navitha Jain, Vanitha Jain and others.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X