For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಪುಟ್ ಪಾತ್ ಹುಡುಗನ ಸಾಹಸಕ್ಕೆ, ಕಿಚ್ಚನ ಮೆಚ್ಚುಗೆ..!

  By Suneetha
  |

  'ಚಂದು ಚಿತ್ರದಲ್ಲಿ ನಾನು ಇವರನ್ನು ಭೇಟಿಯಾದೆ. ಆವತ್ತಿಂದ ನಾನು ಇನ್ನು ಅಲ್ಲೇ ಇದ್ದೀನಿ. ಇವರು ಬೆಳೆದು ಇಲ್ಲಿದ್ದಾರೆ. ಅಷ್ಟು ಹೇಳೋಕೆ ನಾನು ಇಷ್ಟಪಡ್ತೀನಿ. ನನಗೆ ತುಂಬಾ ಹೆಮ್ಮೆ ಆಗ್ತಾ ಇದೆ. ನಾನು ಮನಸಾರೆ ಹೇಳಬೇಕು ಅಂದ್ರೆ. ಈ ಸಿನಿಮಾ, ಸಿನಿಮಾದಲ್ಲಿರುವ ಆಳ ಅನ್ನೋದಕ್ಕಿಂತ ಹೆಚ್ಚಾಗಿ ನಾನು ಇವರ ನಿರ್ದೇಶನದ ಮೊದಲ ಸಿನಿಮಾದಲ್ಲಿ ನಾನು ಒಂದು ಪಾತ್ರ ಮಾಡಿ ಇವರೊಂದಿಗೆ ನಟಿಸಿದ್ದೇನೆ ಅನ್ನೋ ಹೆಮ್ಮೆ ನನಗಿದೆ'.

  'ಇವತ್ತು ಇವರ ಎರಡನೇ ಸಿನಿಮಾ ನೋಡೋಕೆ ನನಗೆ ಒಂದು ಅವಕಾಶ ಸಿಕ್ತು. ಇವರು ಒಂಥರಾ ಒಂದು ವಿಕಸನ ಇದ್ದಂತೆ, ಜೊತೆಗೆ ಅದ್ಭುತ ಮಾನವ. ಯಾಕೆಂದರೆ, ಒಂದು ಸಿನಿಮಾ ಅಂತ ಮಾಡುವಾಗ ಟೆಕ್ನಿಕಲಿ ಚೆನ್ನಾಗಿ ಮಾಡಬಹುದು, ನಟನೆಯಲ್ಲೂ ಚೆನ್ನಾಗಿ ಮಾಡಬಹುದು, ಬಜೆಟ್ ಇರಬಹುದು ಇಲ್ಲದೆಯೂ ಇರಬಹುದು. ಆದರೆ ಆತ್ಮಭರಿತವಾದಂತಹ ಸಿನಿಮಾ ಮಾಡೋದು ತುಂಬಾ ಕಷ್ಟ ಇದೆ'.[ಮತ್ತೊಂದು ದಾಖಲೆ ಬರೆದ ಕಿಶನ್ ಅವರ 'ಕೇರ್ ಆಫ್ ಫುಟ್ ಪಾತ್ 2'.!]

  'ನಾವು ಹೋಗ್ತಾ ಹೋಗ್ತಾ ಆತ್ಮಭರಿತವಾದಂತಹ ಚಿತ್ರವನ್ನು ಮರ್ತೀದ್ದೀವಿ. ಎಂಗೇಜ್, ಈ ಸಾಧನೆ ಅನ್ನೋದಕ್ಕಿಂತ ಹೆಚ್ಚಾಗಿ ಒಂದು ಕಲೆಗೆ ವಯಸ್ಸು ಬೇಡ ಅನ್ನೋದಕ್ಕೆ ಮಾಸ್ಟರ್ ಕಿಶನ್ ಅವರು ಉದಾಹರಣೆ. ಒಂದು ಒಳ್ಳೆ ಆಲೋಚನೆಗೆ ಹಾಗೂ ಚಿತ್ರಕಲೆಗೂ ವಯಸ್ಸು ಅಡ್ಡಿಪಡಿಸುವುದಿಲ್ಲ. ಇವತ್ತು ಇವರನ್ನು ಈ ಸ್ಥಾನದಲ್ಲಿ, ಇಲ್ಲಿ ನೋಡಿ ನನಗೆ ತುಂಬಾ ತುಂಬಾ ಸಂತೋಷ ಆಗ್ತಾ ಇದೆ'.

  'ಸಿನಿಮಾದಲ್ಲಿ ಇವರು ಇಷ್ಟು ಪ್ರಭುದ್ಧರಾಗಿ ಬೆಳೆದಿದ್ದಾರೆ ಅನ್ನೋದಕ್ಕಿಂತ, ಸಿನಿಮಾ ನೋಡ್ತಾ ನೋಡ್ತಾ ನಾವು ಎಷ್ಟು ಇಮ್ಮೆಚ್ಯುರುಡ್ ಆಗಿ ಬೆಳೆದಿದ್ದೇವೆ ಅಂತ ನನಗೆ ಅರ್ಥ ಆಗ್ತಾ ಇದೆ. ನಾವು ಇನ್ನೂ ಬೆಳೆಯಬೇಕಿದೆ. ನನಗೆ ತುಂಬಾ ಸಂತೋಷ ಆಗಿದೆ, ನನಗೆ ಬಹಳ ಹೆಮ್ಮೆ ಆಗ್ತಾ ಇದೆ. ಈ ಹುಡುಗ ನಮ್ಮ ಕರ್ನಾಟಕಕ್ಕೆ ಕೊಡುಗೆ. ಇಂತಹ ಒಂದು ಕಲೆ ನಮ್ಮಲ್ಲಿ ಹುಟ್ಟಿ ನಮ್ಮಲ್ಲಿ ಬೆಳೀತಾ ಇದೆ. ಅಂತ ಹೇಳಿಕೊಳ್ಳಲು ಹೆಮ್ಮೆ ಆಗ್ತಾ ಇದೆ'.

  'ಎಲ್ಲರ ಆಶೀರ್ವಾದ ಇವರ ಮೇಲಿರಲಿ, ವಿಶ್ ಯೂ ಆಲ್ ದ ಬೆಸ್ಟ್ ಇವರ ಹೆತ್ತವರು ಹೆಮ್ಮೆ ಪಡಬೇಕಾದಂತಹ ವಿಷಯ ಇದು. ಯಾಕೆಂದರೆ ನಾನು ಇವತ್ತು ನೋಡಿದ್ದು, ಒಂದು ಸಾಮಾನ್ಯ ಸಿನಿಮಾ ಅಲ್ಲ. ಕೇವಲ ಒಂದು ವಿಷಯ ಅನ್ನೋದಕ್ಕಿಂತ ಹೆಚ್ಚಾಗಿ ಸಿನಿಮಾವನ್ನು ತೆಗೆದುಕೊಂಡು ಹೋಗಿರುವ ರೀತಿ ನೋಡಿದ್ರೆ, ಬಹುಶಃ ಇನ್ನುಮಂದೆ ಸಿನಿಮಾ ಮಾಡುವವರಿಗೆ ಈ ಸಿನಿಮಾ ಒಂದೊಳ್ಳೆ ಒಪನ್ನಿಂಗ್ ಅಂತ ಹೇಳಬಹುದು'.[ಆಸ್ಕರ್ ರೇಸಿನಲ್ಲಿ ಕನ್ನಡ ಚಿತ್ರ 'ಕೇರ್ ಆಫ್ ಫುಟ್ಪಾತ್'-2]

  'ನಮ್ಮ ಜನತೆಗೆ ನಾನು ಹೇಳೋದು ಇಷ್ಟೆ, ಸಿನಿಮಾ ನೋಡಿ, ಹಾರೈಸಿ, ಇಡೀ ಕನ್ನಡಿಗರೆಲ್ಲರೂ ಈ ಸಿನಿಮಾ ನೋಡಿ, ಇಂತಹ ಸಿನಿಮಾಗಳನ್ನು ನೋಡಿದರೆ ನಮ್ಮ ಕನ್ನಡ ಚಿತ್ರರಂಗ ಬೆಳೆಯಲು ಸಾಧ್ಯ ಅಂತ ಹೇಳೋಕೆ ಇಷ್ಟ ಪಡ್ತೀನಿ. ಆಲ್ ದ ಬೆಸ್ಟ್, ಗಾಡ್ ಬ್ಲೆಸ್ ಯೂ'

  ಹೀಗಂತ ನಮ್ಮ ಅಭಿನಯ ಕಿಚ್ಚ ಸುದೀಪ್ ಅವರು ಕಿರಿಯ ನಿರ್ದೇಶಕ ಮಾಸ್ಟರ್ ಕಿಶನ್ ಅವರನ್ನು ಹಾಗೂ ಅವರ ಹೊಸ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿರುವ 'ಕೇರ್ ಆಫ್ ಫುಟ್ ಪಾತ್ 2' ಚಿತ್ರ ನೋಡಿ ಶುಭ ಹಾರೈಸಿದ್ದಾರೆ. ಕಿಚ್ಚನ ಮೆಚ್ಚುಗೆಯ ಮಾತುಗಳನ್ನು ನೋಡಲು ಈ ವಿಡಿಯೋ ನೋಡಿ..

  English summary
  Watch Kiccha Sudeep Talks About Care Of Footpath 2. Starring Kishan SS, JK, Avika Gor, Esha Deol and others. Directed by Kishan SS.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X