ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ 'ಕಿರಿಕ್ ಪಾರ್ಟಿ' ಸಿನಿಮಾ
ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಸಿನಿಮಾ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿತ್ತು. ಚಿತ್ರಮಂದಿರದಲ್ಲಿ 200 ದಿನ ಪೂರೈಸಿದ್ದ ಈ ಸಿನಿಮಾ ಈಗ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರದರ್ಶನವಾಗುತ್ತಿದೆ.
'ಕಿರಿಕ್ ಪಾರ್ಟಿ' ಸಿನಿಮಾ ಮುಂದಿನ ವಾರ ಅಂದರೆ ಆಗಸ್ಟ್ 19 ಮತ್ತು 20 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ. ಶನಿವಾರ ರಾತ್ರಿ 8 ಗಂಟೆಗೆ ಹಾಗೂ ಭಾನುವಾರ ಸಂಜೆ 4 ಗಂಟೆಗೆ ಸಿನಿಮಾ ಪ್ರಸಾರವಾಗಲಿದೆ.

ರಿಶಬ್ ಶೆಟ್ಟಿ ನಿರ್ದೇಶನ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ನಾಯಕರಾಗಿದ್ದು, ಸಂಯುಕ್ತ ಹೆಗಡೆ ಮತ್ತು ರಶ್ಮಿಕಾ ಮಂದಣ್ಣ ಇಬ್ಬರು ನಾಯಕಿಯರಿದ್ದರು. 2017ನೇ ಸಾಲಿನಲ್ಲಿ ಅತ್ಯುತ್ತಮ ಮನರಂಜನ ಚಿತ್ರವಾಗಿ ರಾಜ್ಯ ಪ್ರಶಸ್ತಿ ಪಡೆದುಕೊಂಡ 'ಕಿರಿಕ್ ಪಾರ್ಟಿ', ಫಿಲ್ಮ್ ಫೇರ್ ಪ್ರಶಸ್ತಿ, ಐಫಾ ಪ್ರಶಸ್ತಿ, ಸೈಮಾ ಪ್ರಶಸ್ತಿಗಳನ್ನ ಕೂಡ ಬಾಚಿಕೊಂಡಿದೆ.
More from Filmibeat
English summary
Watch Kannada Movie 'Kirik Party' in Colors Kannada on august 19 at 8 pm.
kirik party rakshith shetty rashmika mandanna sandalwood ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್


Click it and Unblock the Notifications











