For Quick Alerts
  ALLOW NOTIFICATIONS  
  For Daily Alerts

  'ಅಣ್ತಮ್ಮ' ಯಶ್ ಗಾನಬಜಾನ ಇಲ್ಲಿದೆ ನೋಡಿ

  By Harshitha
  |

  ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರಕ್ಕೆ ಯಶ್ ಗಾನಸುಧೆ ಹರಿಸಿರುವುದನ್ನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ರಿ. ಇದೀಗ ಅದನ್ನ ಕಣ್ಣಾರೆ ಕಂಡು, ಕಿವಿಯಾರೆ ಕೇಳಿ, ಕುಣಿದು ಕುಪ್ಪಳಿಸುವ ಸಮಯ ಬಂದಿದೆ.

  ಮೊಟ್ಟ ಮೊದಲ ಬಾರಿಗೆ ಮೈಕ್ ಮುಂದೆ ನಿಂತಿರುವ ಯಶ್, ಕಂಪ್ಲೀಟ್ ಮಾಸ್ ಸಾಂಗ್ ಗೆ ಗಾನಬಜಾಯಿಸಿದ್ದಾರೆ. ''ಕೇಳ್ರೋ ಅಣ್ತಮ್ಮ'' ಅಂತ ಶುರುಮಾಡುತ್ತಾ, ಪ್ಯಾಥೋ ಸಾಂಗ್ ಗೆ ಫುಲ್ ಫೀಲಿಂಗ್ ನಲ್ಲಿ ಹಾಡಿದ್ದಾರೆ. ['ಅಣ್ತಮ್ಮ'ನಿಗಾಗಿ ಗಾಯಕನಾದ ಯಶ್ ಅಸಲಿ ಕಥೆ]

  ಹಾಡಿ ಅಭ್ಯಾಸವಿಲ್ಲದೇ ಇದ್ದರೂ, 4-5 ದಿನಗಳ ಕಾಲ ಹಂಗೂ ಹಿಂಗೂ ಪ್ರ್ಯಾಕ್ಟೀಸ್ ಮಾಡಿ ಕಡೆಗೂ ಯಶ್ ಗಾಯಕನಾಗಿದ್ದಾರೆ. ಮಿಸಸ್ ಗೆ, ಮಿಸ್ಟರ್ ಆಗ್ಬೇಕಿದ್ದ ರಾಮಾಚಾರಿ ಸಿಂಗಲ್ ಆಗಿ ತಮಟೆ ಸದ್ದಲ್ಲಿ ಫುಲ್ ಬಾಟ್ಲು ಇಳಿಸಿ ಕುಣಿಯುವ ಸಾಂಗಿಗೆ, ಟೀ ಕುಡ್ಕುಕೊಂಡು ಯಶ್ ಹಾಡಿರುವ ಮಜವಾದ ಸಾಂಗ್ ಮೇಕಿಂಗ್ ಇಲ್ಲಿದೆ ನೋಡಿ.

  ವಿ.ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಯೋಗರಾಜ್ ಭಟ್ ಬರೆದಿರುವ ಸಾಹಿತ್ಯಕ್ಕೆ ಯಶ್ ಗಾಯನದ ಮೋಡಿಯನ್ನ ಕೇಳಿ.

  ಹಂಗೋ ಹಿಂಗೋ ಹೆಂಗೋ ಇದ್ದೆ...ಹಿಂಗಾಗೋದೇ ನೋಡೋ...ಅಣ್ತಮ್ಮ...ಅಣ್ತಮ್ಮ...

  ಎದೆಯ ಮ್ಯಾಲೆ ಎಳ್ಳುನೀರು ಬಿಟ್ಟು ಹೋದ್ಲು ನೋಡೋ..ಅಣ್ತಮ್ಮ...ಅಣ್ತಮ್ಮ...

  ಬೆಳಗಾಗೆದ್ದ ಕೂಡ್ಲೇ ಅವಳಿಲ್ಲ ಅನ್ನೋ ನೆನಪು...

  ರಾತ್ರಿ ಅತ್ತ ಕಣ್ಣು, ಒಂದು ವೈಟು ಒಂದು ಕೆಂಪು...

  ಹೃದಯ ಹೊಡ್ಕೊಂತ್ತಿಲ್ಲಾ..ಸತ್ಗಿತ್ತು ಹೋದ್ನಾ ನಾನು...

  English summary
  Rocking Star Yash has become singer through the movie Mr and Mrs Ramachari. The making of the song Anna Thamma is here, have a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X