ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಹೊಸ ಟ್ರೈಲರ್
ರಿಲೀಸ್ ಗೆ ರೆಡಿಯಾಗಿದೆ ಪ್ರಿಯಾಂಕ ಉಪೇಂದ್ರ ಅಭಿನಯದ 'ಮಮ್ಮಿ ಸೇವ್ ಮಿ'. ಈಗ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು, ಭಯ, ಕುತೂಹಲ, ಮತ್ತಷ್ಟು ಹೆಚ್ಚಾಗಿದೆ.
ಇತ್ತೀಚೆಗೆ ಸ್ಯಾಂಡಲ್ ವುಡ್ ನಲ್ಲಿ ಹಾರರ್ ಸಿನಿಮಾಗಳ ಅಬ್ಬರ ಜಾಸ್ತಿಯಾಗಿದೆ. ಈ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಲಿರುವ ಚಿತ್ರ 'ಮಮ್ಮಿ-ಸೇವ್ ಮಿ'.
ನಟಿ ಪ್ರಿಯಾಂಕ ಉಪೇಂದ್ರ ಅಭಿನಯದ 'ಮಮ್ಮಿ-ಸೇವ್ ಮಿ' ಚಿತ್ರ, ಬಿಡುಗಡೆಗೆ ಮುಂಚೆ ಹೆಚ್ಚು ಸದ್ದು ಮಾಡುತ್ತಿದೆ. ಈಗಾಗಲೇ ಮೊದಲ ಟ್ರೈಲರ್ ನಿಂದ ಸಖತ್ ಥ್ರಿಲ್ಲಿಂಗ್ ಎನಿಸಿರುವ 'ಮಮ್ಮಿ' ಈಗ ಎರಡನೇ ಟ್ರೈಲರ್ ರಿಲೀಸ್ ಮಾಡಿ ಮತ್ತಷ್ಟು ಭಯ ಹುಟ್ಟಿಸಿದೆ.[ಸಖತ್ ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಟ್ರೈಲರ್]
ಗಂಡನನ್ನು ಕಳೆದುಕೊಂಡಿರುವ ಏಳು ತಿಂಗಳ ಗರ್ಭಿಣಿ ಹಾಗೂ ಪುಟ್ಟ ಮಗು ಅಗೋಚರ ಶಕ್ತಿಗಳ ನಡುವೆ ನಡುಗುವ ಕಥೆ 'ಮಮ್ಮಿ...ಸೇವ್ ಮಿ'. ಸದ್ಯ ಈ ಚಿತ್ರದ ಟ್ರೈಲರ್ ನೋಡಿ, ಅಕ್ಷರಶಃ ಗಾಂಧಿನಗರ ಬೆಚ್ಚಿಬಿದ್ದಿದೆ. ಸಿನಿ ಪ್ರಿಯರಂತೂ ಚಪ್ಪಾಳೆ ಹೊಡೆಯುತ್ತಿದ್ದಾರೆ. ಮುಂದೆ ಓದಿ....

ನೈಜ ಘಟನೆ ಆಧಾರಿತ ಚಿತ್ರ
'ಮಮ್ಮಿ-ಸೇವ್ ಮಿ' ನೈಜಕಥೆಯನ್ನ ಆಧರಿಸಿದ ಸಿನಿಮಾ. ವಿದೇಶದಲ್ಲಿ ನಡೆದ ಒಂದು ರಿಯಲ್ ಘಟನೆಯನ್ನ ರೋಮಾಂಚನವಾಗಿ ಬೆಳ್ಳಿತೆರೆ ಮೇಲೆ ತರಲಾಗಿದೆ.

ಗರ್ಭಿಣಿ ಪಾತ್ರದಲ್ಲಿ ಪ್ರಿಯಾಂಕ
ಎಲ್ಲರಿಗೂ ಗೊತ್ತಿರುವಾಗೆ 'ಮಮ್ಮಿ ಸೇವ್ ಮಿ' ನಾಯಕಿ ಪ್ರಧಾನ ಚಿತ್ರವಾಗಿದ್ದು, ಚಿತ್ರದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರು 7 ತಿಂಗಳ ಗರ್ಭಿಣಿ ಪಾತ್ರವನ್ನ ನಿರ್ವಹಿಸಿದ್ದಾರೆ. ಇವರ ಪಾತ್ರಕ್ಕೆ ಈಗಾಗಲೆ ಎಲ್ಲ ಕಡೆಯಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

ಬೇಬಿ ಯುವಿನಾ ಸಾಥ್
ತುಂಬಾ ಭಯ ಮೂಡಿಸುವ ಜೊತೆಗೆ ಸಾಕಷ್ಟು ಕುತೂಹಲ ಕೆರಳಿಸುವ 'ಮಮ್ಮಿ-ಸೇವ್ ಮಿ' ಚಿತ್ರದಲ್ಲಿ, ಖ್ಯಾತ ಬಾಲನಟಿ ಯುವಿನಾ ಪಾರ್ಥವಿ ಅಭಿನಯಿಸಿದ್ದಾರೆ. ಪ್ರಿಯಾಂಕ ಉಪೇಂದ್ರ ಅವರ ಮಗಳ ಪಾತ್ರದಲ್ಲಿ ಯುವಿನಾ ಕಾಣಿಸಿಕೊಂಡಿದ್ದಾರೆ.

ಯುವ ನಿರ್ದೇಶಕನ ಕೈಚಳಕ
ಅಂದಾಗೆ, 'ಮಮ್ಮಿ-ಸೇವ್ ಮಿ' ಚಿತ್ರಕ್ಕೆ ನಿರ್ದೇಶಕ ಲೋಹಿತ್ ಅವರು ಆಕ್ಷನ್-ಕಟ್ ಹೇಳಿದ್ದು, ಕೆ ರವಿಕುಮಾರ್ ಅವರು ಬಂಡವಾಳ ಹೂಡಿದ್ದಾರೆ.[ಯುವ ನಿರ್ದೇಶಕನ ಪ್ರಯೋಗಕ್ಕೆ ಬೆಚ್ಚಿಬಿದ್ದ ಗಾಂಧಿನಗರ.!]

ಹಾಲಿವುಡ್ ಮಾದರಿ ಮೇಕಿಂಗ್
ಫ್ರೇಮ್ ಟು ಫ್ರೇಮ್ ಬೆಚ್ಚಿ ಬೀಳುವ ರೀತಿಯಲ್ಲಿ ದೃಶ್ಯಗಳನ್ನ ಚಿತ್ರೀಕರಣ ಮಾಡಿದ್ದು, ವೇಣು ಕ್ಯಾಮೆರಾ ವರ್ಕ್ ಸಖತ್ ಇಂಟ್ರಸ್ಟಿಂಗ್ ಎನಿಸಿದೆ. ಚಿತ್ರದ ರೀ-ರೆಕಾರ್ಡಿಂಗ್ ಅನ್ನು ಬಹಳ ವಿಶೇಷವಾಗಿ ಮಾಡಲಾಗಿದೆ. ಇನ್ನೂ ರವಿಚಂದ್ರನ್ ಅವರ ಸಂಕಲನ ಚಿತ್ರವನ್ನ ಮತ್ತಷ್ಟು ರೋಮಾಂಚನವಾಗಿಸುವಂತೆ ಮಾಡಿದೆ.[]ಹಾಲಿವುಡ್ ಶೈಲಿಯಲ್ಲಿ 'ಮಮ್ಮಿ'ಗೆ ರೀ-ರೆಕಾರ್ಡಿಂಗ್

ಹಿನ್ನಲೆ ಸಂಗೀತ ಪ್ಲಸ್ ಪಾಯಿಂಟ್
ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಯೋಜನೆ ಮಾಡಿದ್ದಾರೆ. 10 ಥೀಮ್ಸ್ ಮತ್ತು 35 ಸಂಗೀತ ಪರಿಕರಗಳಿಂದ ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಲಾಗಿದೆ. ಒಂದೊಂದು ಥೀಮ್ ಗೂ ಒಂದೊಂದು ರೀತಿಯ ಸಂಗೀತ ನೀಡಿರೋದು ಈ ಚಿತ್ರದ ವಿಶೇಷ. ಸತತ 5 ಬಾರಿ ಲೈವ್ ಆಗಿ ರೀ-ರೆಕಾರ್ಡಿಂಗ್ ಮಾಡಲಾಗಿದೆ. ಇಡೀ ಚಿತ್ರಕ್ಕೆ ಹಾರರ್ ಎಫೆಕ್ಟ್ ಅನ್ನು ಸಂಗೀತದಲ್ಲಿ ನೀಡಿದ್ದು, ಹಾಲಿವುಡ್ ಮಾದರಿಯಲ್ಲಿ 'ಮಮ್ಮಿ' ಚಿತ್ರಕ್ಕೆ ಹಿನ್ನಲೆ ಸಂಗೀತ ಮೂಡಿಬಂದಿದೆ.

ಇದೇ ತಿಂಗಳು ರಿಲೀಸ್
ಎಲ್ಲ ಅಂದುಕೊಂಡತೆ ಆಗಿದ್ರೆ, ಇಷ್ಟೋತ್ತಿಗಾಗಲೇ 'ಮಮ್ಮಿ-ಸೇವ್ ಮಿ' ಬಿಡುಗಡೆಯಾಗಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದ ಚಿತ್ರತಂಡ, ಇದೇ ತಿಂಗಳಿನಲ್ಲಿ ತೆರೆಗೆ ಬರಲು ಸಿದ್ದವಾಗಿದೆ.
'ಮಮ್ಮಿ-ಸೇವ್ ಮಿ' ಚಿತ್ರದ ಹೊಸ ಟ್ರೈಲರ್ ಹೇಗಿದೆ ಅಂತ ನೋಡಿದ್ದೀರಾ?(ಇಲ್ಲಿದೆ ನೋಡಿ)


Click it and Unblock the Notifications











