'ಓ ಮೈ ಡಿಯರ್' -ಪರಿಸರ ಮತ್ತು ಮನುಷ್ಯರ ಬೇಟೆ ತೀಟೆ

By Suneetha

ಬೇಟೆಯಾಡೋದು ಮಾನವನಿಗೆ ವಂಶಪಾರಂಪರ್ಯವಾಗಿ ಬಂದ ಬಳುವಳಿಗಳಲ್ಲಿ ಒಂದು, ಆದರೆ ನಾಗರೀಕತೆಯ ತೊಟ್ಟಿಲಿಗೆ ಬಿದ್ದ ಮನುಷ್ಯ ತನ್ನ ಸುತ್ತಲಿನ ಪ್ರದೇಶವನ್ನು ತಾನು ಹಿಡಿತಕ್ಕೆ ಪಡೆದು ಅದನ್ನು ನಿಯಂತ್ರಿಸುವುದನ್ನು ಕಲಿತ.

ಆದರೆ ತದನಂತರದ ಬೆಳವಣಿಗೆಯಲ್ಲಿ ಈ ಕಲಿಕೆ ವ್ಯತಿರಿಕ್ತ ವಿಚಾರಗಳಿಗೆ ನಾಂದಿ ಹಾಡಿತು. ಮುಂದೆ ಪರಿಸರವನ್ನೇ ನಾಶಗೊಳಿಸಿ ತಾನು ಬದುಕಬಲ್ಲೆ ಎಂಬ ಗೊಡ್ಡು ಪ್ರತಿಷ್ಠೆಯೊಂದಿಗೆ ತನ್ನನ್ನು ತಾನು ಹೊಗಳಿಕೊಳ್ಳುತ್ತಿದ್ದಾನೆ.

ಅಂದಹಾಗೆ ನಾವು ಈ ಥರ ಪೀಠಿಕೆ ಹಾಕಲು ಮುಖ್ಯ ಕಾರಣ ಏನಪ್ಪಾ ಅಂದ್ರೆ 'ಬೇಟೆ'ಗೆ ಸಂಬಂಧಿಸಿದಂತೆ ಇದೀಗ ಹೊಸ ಪ್ರತಿಭೆಗಳೇ ಸೇರಿಕೊಂಡು ಮಾಡಿರುವ 'ಓ ಮೈ ಡಿಯರ್' 'ಡೊಂಟ್' ಎನ್ನುವ ಅಡಿಬರಹದಲ್ಲಿ ಮೂಡಿ ಬಂದಿರುವ ಕಿರು ಚಿತ್ರವೊಂದು ಯೂಟ್ಯೂಬ್ ನಲ್ಲಿ ಹರಿದಾಡುತ್ತಿದ್ದು, ಸಖತ್ ರೆಸ್ಪಾನ್ಸ್ ಗಳಿಸುತ್ತಿದೆ.

Watch: 'O My Dear'-Don't Short Film

ಆದರೆ 'ಬೇಟೆ' ಅನ್ನೋ ಮೋಜಿನ ಸೆಳೆತಕ್ಕೆ ಸಿಲುಕುವ ಮೂವರು ಸ್ನೇಹಿತರು ಹೇಗೆ ತಮ್ಮ ಬಾಳಿನಲ್ಲಿ ಸಹಿಸಲಸಾಧ್ಯವಾದ ದುರಂತ ಕಾಣುತ್ತಾರೆಂಬುದನ್ನು ಈ ಕಿರು ಚಿತ್ರ ಹೇಳಲು ಹೊರಟಿದೆ.

ಕಿರು ಚಿತ್ರದಲ್ಲಿ ಯುವ ಪತ್ರಕರ್ತ ಮಾಲತೇಶ್ ರಚಿಸಿರುವ ಕವನದ ಸಾಲುಗಳು ಪ್ರಸ್ತುತ ನಿಸರ್ಗದ ಮೇಲೆ ನಡೆಯುತ್ತಿರುವ ಇಂತಹ ದೌರ್ಜನ್ಯದ ಪರಿಸ್ಥಿತಿಯನ್ನು ಭಾವನಾತ್ಮಕವಾಗಿ ತೆರೆದಿಡುವ ಪ್ರಯತ್ನ ಮಾಡಿದೆ, ಜೊತೆಗೆ ಚಿತ್ರಕ್ಕೆ ಕಥೆಗಾರರು ಇವರೇ.

ಯುವಕರೆ ಒಗ್ಗೂಡಿ ರಚಿಸಿರುವ 'ಮೈಕ್ರೋ ಬಜೆಟ್ ಮೂವಿ ಮೇಕರ್ಸ್'ನ ಈ ಕಿರುಚಿತ್ರದ ನಿರ್ದೇಶಕ ಗುರುರಾಜ್ ಎಸ್.ಎಂ.ಜಿ. ನಟರಾಗಿ ಸುನೀಲ್, ಪುನೀತ್ ಶೆಟ್ಟಿ, ಕಾರ್ತಿಕ್, ಸಿದ್ದರಾಜು ಅಭಿನಯಿಸಿದ್ದಾರೆ.

ಚಿತ್ರದ ಕ್ಯಾಮರಾ ವರ್ಕ್ ಸೇರಿದಂತೆ ಎಡಿಟಿಂಗ್ ಸಖತ್ ಆಗಿದ್ದು, ಹೊಸಬರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬಹುದು. ಈ ಕಿರು ಚಿತ್ರದಲ್ಲಿ 'ಡಿಯರ್' ಎನ್ನುವ ಪದಕ್ಕೆ 2 ಅರ್ಥಗಳು ಬರುತ್ತಿದ್ದು, ಅದೇನೆಂಬುದನ್ನು ನೋಡಲು ಈ ಚಿತ್ರ ವೀಕ್ಷಿಸಿ

"ಹೇ ಹುಂಬನೆ ನೀನ್ಯಾರೋ ನಿಸರ್ಗದೊರತು,
ಅನ್ಯತೆಗೆ ಬೆಲೆಯಿಟ್ಟ ನಿನ್ನ ಮೌಲ್ಯಗಳದೆಲ್ಲಿ ಬಿಕರಿಯಾದವೋ,
ನೀನಿನ್ನು ಜಡದ ಕೂಸು, ನಿರ್ಜೀವ ತತ್ವಗಳಾಧಾರದಿ...

ಸತ್ಯವನು ಮರೆಮಾಚಿ ಸೂರೆಗೈದೆ ಎಲ್ಲವ,
ನಿನ್ನ ಸೂರಿಗಾಗಿ ಬಲಿಯಾದ ಮರಕದೇಕೆ ಕೊಡಲಿ,
ಇನ್ನೆಲ್ಲೋ ಬದುಕು, ಪರಾವಲಂಬಿಯೇ ವಿಮರ್ಶಿಸು ನಿನ್ನಾತ್ಮವ"...

More from Filmibeat

English summary
Here is our film about the hunter for the fun. and about the EARTH where we Living, also Adhering part. The star cast - Sunil, Punith Shetty, Kathik. Co-Artist - Siddaraju, Kulla Swamy, Editor - Aravind. J P Story - Malathesh. M, The movie is Directed by Guru Raj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X