For Quick Alerts
  ALLOW NOTIFICATIONS  
  For Daily Alerts

  'ಒಡೆಯ' ನೋಡಿ, ಸ್ಟೈಲಿಶ್ ಬೈಕ್ ಗೆಲ್ಲಿ: ಆದ್ರೆ, ಒಂದು ಕಂಡಿಷನ್!

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಒಡೆಯ' ಸಿನಿಮಾ ಡಿಸೆಂಬರ್ 12 ರಂದು ಬಿಡುಗಡೆಯಾಗುತ್ತಿದೆ. ಡಿ ಬಾಸ್ ಅಭಿನಯದ ಮೂರನೇ ಸಿನಿಮಾ ಈ ವರ್ಷದಲ್ಲಿ ತೆರೆಕಾಣುತ್ತಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

  ಚಿತ್ರಮಂದಿರದಲ್ಲಿ ಒಡೆಯನ ದರ್ಶನಕ್ಕೆ ಕೆಲವೇ ದಿನಗಳು ಮಾತ್ರ ಬಾಕಿಯಿದ್ದು, ಈಗಾಗಲೇ ಬಹುತೇಕ ಥಿಯೇಟರ್ ಬಳಿ ಹಬ್ಬದ ವಾತಾವರಣ ಉಂಟಾಗಿದೆ. ದರ್ಶನ್ ಅವರ ಕಟೌಟ್ ಗಳನ್ನು ನಿಲ್ಲಿಸಿ ಒಡೆಯನ ಸ್ವಾಗತಕ್ಕೆ ಸಜ್ಜಾಗಿದ್ದಾರೆ.

  ದರ್ಶನ್ ಲಕ್ಕಿ ಚಿತ್ರಮಂದಿರದಲ್ಲಿ 'ಒಡೆಯ' ಚಿತ್ರ ಬಿಡುಗಡೆದರ್ಶನ್ ಲಕ್ಕಿ ಚಿತ್ರಮಂದಿರದಲ್ಲಿ 'ಒಡೆಯ' ಚಿತ್ರ ಬಿಡುಗಡೆ

  ಇದೀಗ, ಒಡೆಯ ಚಿತ್ರತಂಡದಿಂದ ಸಿನಿಪ್ರಿಯರಿಗೆ ಭರ್ಜರಿ ಸುದ್ದಿಯೊಂದನ್ನು ನೀಡಿದ್ದಾರೆ. ಒಡೆಯ ಸಿನಿಮಾ ನೋಡಿ ಸ್ಟೈಲಿಶ್ ಬೈಕ್ ಗೆಲ್ಲಿ ಎಂಬ ಆಫರ್ ನೀಡಿದ್ದಾರೆ. ಷರತ್ತು ಕಡ್ಡಾಯ? ಮುಂದೆ ಓದಿ...

  ಮಾಡಬೇಕಿರುವುದು ಇಷ್ಟೆ...

  ಮಾಡಬೇಕಿರುವುದು ಇಷ್ಟೆ...

  ಒಡೆಯ ಸಿನಿಮಾ ನೋಡಿ ಈ ಬೈಕ್ ಗೆಲ್ಲಬೇಕಾದರೆ ನೀವು ಮಾಡಬೇಕಾಗಿರುವುದು ಇಷ್ಟೆ. ಪ್ರಮುಖ ಚಿತ್ರಮಂದಿರಗಳಲ್ಲಿ ಒಡೆಯ ಚಿತ್ರ ವೀಕ್ಷಿಸಬೇಕು. ನೀವು ಪಡೆದ ಟಿಕೆಟ್ ಅನ್ನು ಭರ್ತಿ ಮಾಡಿ ಚಿತ್ರಮಂದಿರಗಳಲ್ಲಿ ಇಟ್ಟಿರುವ ಲಕ್ಕಿ ಡಿಪ್ ಬಾಕ್ಸ್ ಒಳಗೆ ಹಾಕಬೇಕು. ಲಕ್ಕಿ ಡ್ರಾ ಮೂಲಕ ಗೆದ್ದವರಿಗೆ ಬೈಕ್ ಸಿಗುತ್ತೆ.

  ಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿಮಕ್ಕಳಿಗೂ ಕೇಳಿರದ ಸಹಾಯವನ್ನು 'ಒಡೆಯ' ನಿರ್ಮಾಪಕರಿಗೆ ಕೇಳಿದರು ದರ್ಶನ್ ತಾಯಿ

  ಪ್ರಮುಖ ಚಿತ್ರಮಂದಿರ ಯಾವುದು?

  ಪ್ರಮುಖ ಚಿತ್ರಮಂದಿರ ಯಾವುದು?

  ಕೆಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರಲ್ಲಿ ಒಡೆಯ ಸಿನಿಮಾ ತೆರೆಕಾಣುತ್ತಿದೆ. ಇದು ಡಿ ಬಾಸ್ ಪಾಲಿಗೆ ಲಕ್ಕಿ ಚಿತ್ರಮಂದಿರ. ದರ್ಶನ್ ನಟನೆಯ ಬಹುತೇಕ ಚಿತ್ರಗಳು ಈ ಥಿಯೇಟರ್ ನಲ್ಲಿ ಪ್ರದರ್ಶನ ಕಂಡು, ಶತದಿನ ಆಚರಿಸಿರುವ ಉದಾಹರಣೆ ಇದೆ.

  ಬೈಕ್ ಅನಾವರಣಗೊಳಿಸಿದ ನಿರ್ಮಾಪಕ

  ಬೈಕ್ ಅನಾವರಣಗೊಳಿಸಿದ ನಿರ್ಮಾಪಕ

  ಒಡೆಯ ಸಿನಿಮಾ ನೋಡಿ ಬೈಕ್ ಗೆಲ್ಲಿ ಸ್ಫರ್ಧೆಗೆ ನಿರ್ಮಾಪಕ ಸಂದೇಶ್ ನಾಗರಾಜ್ ಚಾಲನೆ ನೀಡಿದ್ದಾರೆ. ಖುದ್ದು ಬೈಕ್ ಯಾವುದು ಎಂದು ನಿರ್ಮಾಪಕರೇ ಅನಾವರಣ ಮಾಡಿದ್ದಾರೆ. ಸಂದೇಶ್ ಅವರ ಸಮ್ಮುಖದಲ್ಲಿ ಕೆಂಪು ಬಣ್ಣದ ಬೈಕ್ ಮತ್ತು ಲಕ್ಕಿ ಡಿಪ್ ಬಾಕ್ಸ್ ಬಹಿರಂಗಗೊಂಡಿದೆ.

  ಡಿ-ಬಾಸ್ ಅವರ ಈ ಗುಣ ಎಲ್ಲರಲ್ಲೂ ಇರಬೇಕು: 'ಒಡೆಯ'ನ ಬಗ್ಗೆ ಪಂಕಜ್ ಮಾತುಡಿ-ಬಾಸ್ ಅವರ ಈ ಗುಣ ಎಲ್ಲರಲ್ಲೂ ಇರಬೇಕು: 'ಒಡೆಯ'ನ ಬಗ್ಗೆ ಪಂಕಜ್ ಮಾತು

  ಯಾವುದು ಆ ಬೈಕ್?

  ಯಾವುದು ಆ ಬೈಕ್?

  ನೋಡಲು ಬಹಳ ಸ್ಟೈಲಿಶ್ ಆಗಿರುವ ಈ ಬೈಕ್ ಎಲೆಕ್ಟ್ರಿಕ್ ವಾಹನ. BENLG ಮಾಡೆಲ್ ಆಗಿರುವ ಈ ಬೈಕ್ ಬೆಲೆ ಸುಮಾರು 90 ಸಾವಿರದವರೆಗೂ ಇದೆ. ಒಂದೇ ಒಂದು ಬೈಕ್ ಮಾತ್ರ ಬಹುಮಾನವಾಗಿ ಇರಿಸಲಾಗಿದೆ. ಹಾಗಿದ್ರೆ, ನರ್ತಕಿ ಚಿತ್ರಮಂದಿರದಲ್ಲಿ ಒಡೆಯ ಸಿನಿಮಾ ನೋಡಿ ಈ ಬೈಕ್ ಯಾರು ಗೆಲ್ಲಬಹುದು? ಕಾದು ನೋಡೋಣ.

  English summary
  Watch Challenging star darshan's Odeya movie in main theater at december 12th and win Stylish Bike.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X