»   » ವಿದ್ಯಾರ್ಥಿಗಳಿಗೆ ಪುನೀತ್ ಕುಡಿಯಲು ಹೇಳಿದ್ದೇನು?

ವಿದ್ಯಾರ್ಥಿಗಳಿಗೆ ಪುನೀತ್ ಕುಡಿಯಲು ಹೇಳಿದ್ದೇನು?

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹದಿನೈದು ವರ್ಷ ಚಿಕ್ಕವರಾಗಿದ್ದಾರೆ! ಹಿಂದೆಂದಿಗಿಂತಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಲೇಜ್ ನಿಂದ ಪದವಿ ಪಡೆಯುತ್ತಿದ್ದಾರೆ ಅಪ್ಪು. ಇದೇನಪ್ಪಾ..! ಅಂತ ಬಾಯಿ ಮೇಲೆ ಬೆರಳಿಡುವ ಮುನ್ನ ಪೂರಾ ಮ್ಯಾಟರ್ ನ ಕೇಳಿ.

ಹಾಗೆ, ಅಪ್ಪು ಕಾಲೇಜ್ ಹುಡುಗನಾಗಿರುವುದು ನೂತನ 7UP ಆಡ್ ನಲ್ಲಿ. 'ಕಾಲೇಜು ಕೊನೆಯ ದಿನ ಅಂತ ದುಃಖ ಪಡದೆ ನೀನು ನೀನಾಗಿರು' ಅಂತ ಅತ್ಯುತ್ಸಾಹದಿಂದ ಪುನೀತ್ ಸ್ಪೆಪ್ ಹಾಕಿರುವ 7UP ಆಡ್ ಉತ್ಸಾಹ ಭರಿತವಾಗಿದೆ.

Watch Puneeth Rajkumar's 7UP I Feel Up Add

ಥೇಟ್ ಕಾಲೇಜು ಯುವಕನಾಗಿ ಪುನೀತ್ ಕಾಣಿಸಿಕೊಂಡಿರುವ ರೀತಿ, ಅದಕ್ಕೆ ತಕ್ಕ ಹಾಗೆ ಸಂಯೋಜಿಸಿರುವ ಹಾಡು ಎಲ್ಲರ ಮನಸ್ಸಿಗೆ ಹೊಸ ಹುಮ್ಮಸ್ಸು ನೀಡುತ್ತದೆ. ಹಾಗೆ ನೋಡಿದ್ರೆ, 7UP ಆಡ್ ನಲ್ಲಿ ಅಪ್ಪು ಕುಣಿದು ಕುಪ್ಪಳಿಸುತ್ತಿರುವುದು ಇದೇ ಮೊದಲೇನಲ್ಲ. [ಪವರ್ ಸ್ಟಾರ್ ಪುನೀತ್ ಹೊಸ ಚಿತ್ರ 'ಜೇಮ್ಸ್']

ವರ್ಷಗಳಿಂದಲೂ 7UP ಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಅಪ್ಪು, ಅನೇಕ ಆಡ್ ಗಳಲ್ಲಿ ಮಿಂಚಿದ್ದಾರೆ. 7UP ಜೊತೆಗೆ ಮಣಪ್ಪುರಂ, ಮಲಬಾರ್ ಗೋಲ್ಡ್, ನಂದಿನಿ ಹಾಲು ಉತ್ಪನ್ನಗಳಿಗೂ ಅಪ್ಪು ರಾಯಭಾರಿಯಾಗಿದ್ದಾರೆ.

Watch Puneeth Rajkumar's 7UP I Feel Up Add

ಅಪ್ಪು ಹೇಳಿದಂತೆ 7UP ಕುಡಿದು 'ನೀವು ನೀವಾಗಿ' ಎಂಜಾಯ್ ಮಾಡಿ.

    Read more about: puneeth rajkumar sandalwood
    English summary
    Puneeth Rajkumar being a Brand Ambassador for 7UP, has shot a new add. Watch 7UP I Feel UP add here.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada