ಗುಂಡಿಗೆ ಗಟ್ಟಿಮಾಡಿಕೊಂಡು ನೋಡಿ 'ರಣವಿಕ್ರಮ' ಟೀಸರ್

By Harshitha

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳೆಂದ್ರೇನೇ ಹಾಗೆ. ಗಾಂಧಿನಗರದ ಹೈವೋಲ್ಟೇಜ್ ಕರೆಂಟ್ ಇದ್ಹಾಗೆ. ಪವರ್ ಫುಲ್ ಆಕ್ಷನ್ನು, ಜಬರ್ದಸ್ತ್ ಸ್ಟಂಟ್ಸ್ ನೊಂದಿಗೆ ತೆರೆಗೆ ಬರುವ ಅಪ್ಪು ಸಿನಿಮಾ, ಸ್ಯಾಂಡಲ್ ವುಡ್ ನಲ್ಲಿ ಮಿಂಚಿನ ಸಂಚಲನ ಮೂಡಿಸದೇ ಇರುವುದಿಲ್ಲ.

ಈಗ ಇಡೀ ಗಾಂಧಿನಗರದ ನೆಲ ನಡುಗಿಸುವುದಕ್ಕೆ ಬರುತ್ತಿರುವ ಅಪ್ಪು ಅಭಿನಯದ ಸಿನಿಮಾ 'ಧೀರ ರಣವಿಕ್ರಮ'. ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ಧೀರ ರಣವಿಕ್ರಮ' ಚಿತ್ರದ ಎರಡನೇ ಟೀಸರ್ ಹೊರಬಂದಿದೆ.

Dheera Ranavikrama1

ಅದಾಗಲೇ, ಖಾಕಿ ತೊಟ್ಟು ಬುಲ್ಲೆಟ್ ಹಾರಿಸಿ ಸ್ಟಂಟ್ ಮಾಡಿದ್ದ ಪುನೀತ್ ಪವರ್, 'ಧೀರ ರಣವಿಕ್ರಮ' ಚಿತ್ರದಲ್ಲಿ ಹೇಗಿದೆ ಅನ್ನುವುದಕ್ಕೆ ಈ ಹೊಸ ಟೀಸರ್ ಸಾಕ್ಷಿ. [ಪುನೀತ್ 'ರಣ ವಿಕ್ರಮ'ಕ್ಕೆ ಕೊನೆಗೂ ಗ್ರೀನ್ ಸಿಗ್ನಲ್]

ವೀರ ಕಲಿಯಂತೆ ವೈರಿಗಳ ಗುಂಡಿಗೆಗೆ, ಒಂದೊಂದೇ ಗುಂಡು ಹಾರಿಸುವ ಪುನೀತ್ ಭರ್ಜರಿ ಸ್ಟಂಟ್ ನೋಡ್ತಿದ್ರೆ, ಅವರ ಅಭಿಮಾನಿಗಳ ಎದೆಯಲ್ಲಿ ಕರೆಂಟ್ ಪಾಸ್ ಆದ ಅನುಭವವಾಗುತ್ತೆ. ಅಷ್ಟು ಖಡಕ್ ಆಗಿದೆ 'ಧೀರ ರಣವಿಕ್ರಮ' ಚಿತ್ರದ ಎರಡನೇ ಟೀಸರ್. [ವಿಕ್ರಮ..ರಣವಿಕ್ರಮ ಐಪಿಎಸ್ ಪವರ್ ಫುಲ್ ಸ್ಟಾರ್ಟ್]

ಅಪ್ಪು ಆಕ್ಷನ್ ಜೊತೆಗೆ ಟೀಸರ್ ನಲ್ಲಿ ಮೈನವಿರೇಳಿಸುವುದು ವಿ.ಹರಿಕೃಷ್ಣ ಹಿನ್ನಲೆ ಸಂಗೀತ. ಖಾಕಿ ಯೂನಿಫಾರ್ಮ್ ನ ಕಳಚಿಟ್ಟು ದುಷ್ಟರೊಂದಿಗೆ ಸೆಣಸಾಡಿರುವ ಪುನೀತ್, ಚಿತ್ರದಲ್ಲಿ ತರಹೇವಾರಿ ಲುಕ್ ನಲ್ಲಿ ಕಾಣಿಸಿಕೊಳ್ಳುವುದು ಖಚಿತ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Dheera Ranavikrama3

ತಂದೆ-ತಾಯಿಯ ಮುದ್ದಿನ ಮಗನಾಗಿ, ಕಾಲೇಜಿನಲ್ಲಿ ಅತ್ಯುನ್ನತ ವಿದ್ಯಾರ್ಥಿಯಾಗಿ ನಂತ್ರ ದಷ್ಟ ಪೊಲೀಸ್ ಅಧಿಕಾರಿಯಾಗಿ ಎರಡು ಬೇರೆಬೇರೆ ಶೇಡ್ ಗಳನ್ನ ಪುನೀತ್ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಜೋಡಿಯಾಗಿ ಟಾಲಿವುಡ್ ನ ಅಂಜಲಿ ಮತ್ತು ಅದಾ ಶರ್ಮಾ ಇದ್ದಾರೆ. ಹೀಗಾಗಿ 'ಧೀರ ರಣವಿಕ್ರಮ'ದಲ್ಲಿ ತ್ರಿಕೋನ ಪ್ರೇಮಕಾವ್ಯಕ್ಕೂ ಜಾಗವಿದೆ. ['ರಣವಿಕ್ರಮ' ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್]

ಟೀಸರ್ ನಲ್ಲಿ ಸದ್ಯಕ್ಕೆ ಪುನೀತ್ ಅಬ್ಬರ ಬಿಟ್ಟರೆ, ಚಿತ್ರದ ನಾಯಕಿಯರ ಬಗ್ಗೆ ಎಲ್ಲೂ ಸುಳಿವು ಸಿಕ್ಕಿಲ್ಲ. ಲವ್ ಕಮ್ ಕಾಮಿಡಿ ಟ್ರ್ಯಾಕ್ ನಲ್ಲೇ 'ಗೂಗ್ಲಿ', 'ಗೋವಿಂದಾಯ ನಮಃ' ಚಿತ್ರಗಳನ್ನ ನಿರ್ದೇಶಿಸಿದ್ದ ಪವನ್ ಒಡೆಯರ್, ಮೊದಲ ಬಾರಿಗೆ ಅಪ್ಪು ಜೊತೆ ಭರಪೂರ ಆಕ್ಷನ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಪುನೀತ್ ಇಮೇಜ್ ಗೆ ತಕ್ಕಂತೆ 'ಧೀರ ರಣವಿಕ್ರಮ' ರೆಡಿಯಾಗಿದೆ. ಹಂಪಿ, ಸಂಡೂರು, ಬೆಂಗಳೂರು ಸೇರಿದಂತೆ ಹಲವೆಡೆ ಚಿತ್ರದ ಶೂಟಿಂಗ್ ನಡೆದಿದ್ದಾಗಿದೆ. ಅದನ್ನೆಲ್ಲಾ ನೀವು ತೆರೆಮೇಲೆ ನೋಡಬೇಕು ಅಂದ್ರೆ ಫೆಬ್ರವರಿ ವರೆಗೂ ಕಾಯಲೇಬೇಕು. ಅಲ್ಲಿವರೆಗೂ ಈ ಟೀಸರ್ ನೋಡಿ ಮಜಾ ಮಾಡಿ..(ಫಿಲ್ಮಿಬೀಟ್ ಕನ್ನಡ)

More from Filmibeat

English summary
Power Star Puneeth Rajkumar starrer Dheera Ranavikrama 2nd teaser is out and looks dashing. Tollywood actress Anjali and Adah Sharma is paired opposite Puneeth Rajkumar in Dheera Ranavikrama, which is directed by Pawan Wadeyar of Googly fame. Watch the video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X