»   » ತೆರೆ ಹಿಂದಿನ 'ರಾಜಕುಮಾರ'ನಲ್ಲಿ ಕಾಣುತ್ತಾರೆ 'ಡಾ.ರಾಜ್ ಕುಮಾರ್'!

ತೆರೆ ಹಿಂದಿನ 'ರಾಜಕುಮಾರ'ನಲ್ಲಿ ಕಾಣುತ್ತಾರೆ 'ಡಾ.ರಾಜ್ ಕುಮಾರ್'!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಟ್ರೈಲರ್, ಹಾಡುಗಳನ್ನ ನೋಡಿ ಎಂಜಾಯ್ ಮಾಡ್ತಿದ್ದೀರಾ. ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಕೊಂಡು ಚಿತ್ರಮಂದಿರದಲ್ಲಿ ಸಿನಿಮಾ ನೋಡೊದಕ್ಕೆ ಕಾಯ್ತಿದ್ದೀರಾ...! ನಿಮ್ಮ ಈ ಕುತೂಹಲವನ್ನ ಮತ್ತಷ್ಟು ಹೆಚ್ಚಾಗುವಂತಹ ಮಾಡಲಿದೆ ಈಗ ಬಿಡುಗಡೆಯಾಗಿರುವ ಮೇಕಿಂಗ್ ವಿಡಿಯೋ.[ವಿಡಿಯೋ: 'ರಾಜಕುಮಾರ'ನ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ]

ಹೌದು, 'ರಾಜಕುಮಾರ' ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಿದ್ದು, ಸಖತ್ ಇಂಟ್ರೆಸ್ಟಿಂಗ್ ಆಗಿದೆ. ತೆರೆ ಮೇಲೆ ನೀವು ನೋಡುವ ಅಬ್ಬರದ 'ರಾಜಕುಮಾರ'ನಿಗಿಂತ, ತೆರೆ ಹಿಂದಿನ ಸರಳ ಸಜ್ಜನ 'ರಾಜಕುಮಾರ' ಇಲ್ಲಿ ಹೆಚ್ಚು ಇಷ್ಟವಾಗುತ್ತಾರೆ. 'ರಾಜಕುಮಾರ' ಚಿತ್ರದ ಶೂಟಿಂಗ್ ಸೆಟ್ ಗೆ ರಾಕಿಂಗ್ ಸ್ಟಾರ್ ಯಶ್, ಪುನೀತ್ ರಾಜ್ ಕುಮಾರ್ ತಾಯಿ, ಪಾರ್ವತಮ್ಮ ರಾಜ್ ಕುಮಾರ್ ಸೇರಿದಂತೆ ಹಲವರು ಬಂದು ಹೋಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಚಿತ್ರೀಕರಣದ ವೇಳೆ ಅತ್ಯಂತ ಸರಳವಾಗಿರುತ್ತಾರೆ ಎಂಬುದಕ್ಕೆ ಈ ವಿಡಿಯೋ ಮತ್ತೊಂದು ಸಾಕ್ಷಿ. 'ದೊಡ್ಡವರು-ಚಿಕ್ಕವರು' ಎಂಬ ಗೌರವದ ಮನೋಭಾವ, ಅಣ್ಣಾವ್ರಂತೆ ಎಲ್ಲರನ್ನ ಕೂಡಿಸಿ ಸಿನಿಮಾ ಮಾಡುವ ಪರಿ, ಒಂದು ಕ್ಷಣ ಪುನೀತ್ ಅವರಲ್ಲಿ ಡಾ.ರಾಜ್ ಕುಮಾರ್ ಅವರನ್ನೆ ಕಾಣುವ ಭಾವನೆ ಮೂಡಿಸುತ್ತೆ.['ಯ್ಯೂಟ್ಯೂಬ್'ನಲ್ಲಿ 'ರಾಜಕುಮಾರ' ನಂಬರ್-1]

ಮತ್ತೊಂದು ವಿಶೇಷ ಅಂದ್ರೆ, ಇಂದಿಗೆ 'ರಾಜಕುಮಾರ' ಸಿನಿಮಾ ಶುರುವಾಗಿ ಒಂದು ವರ್ಷದ ಕಳೆದಿದೆ. ಅರ್ಥಾಥ್ ರಾಜಕುಮಾರನಿಗೆ ಒಂದು ವರ್ಷದ ಸಂಭ್ರಮ.

Watch Puneeth Rajkumar Starrer 'Rajakumara' Making Video

ಅಂದ್ಹಾಗೆ, 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಖ್ಯಾತಿಯ ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಬಹುಭಾಷಾ ನಟಿ ಪ್ರಿಯಾ ಆನಂದ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ತಮಿಳು ನಟ ಶರತ್ ಕುಮಾರ್, ಪ್ರಕಾಶ್ ರೈ, ಅನಂತ್ ನಾಗ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ದತ್ತಣ್ಣರ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿದೆ.[ಪರಭಾಷೆಯಲ್ಲಿ 'ರಾಜಕುಮಾರ'ನ ಹವಾ ಹೇಗಿದೆ ನೋಡಿ ಸ್ವಾಮಿ!]

ಹರಿಕೃಷ್ಣ ಸಂಗೀತವಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ್ದು, ಈಗಾಗಲೇ, ಹಾಡುಗಳು ಮತ್ತು ಟ್ರೈಲರ್ ಮೂಲಕ ಅಬ್ಬರಿಸುತ್ತಿರುವ 'ರಾಜಕುಮಾರ', ಮಾರ್ಚ್ 24 ರಂದು ತೆರೆಗೆ ಬರುವ ಯೋಚನೆಯಲ್ಲಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ಈ ಬಾರಿಯ ಯುಗಾದಿ ಹಬ್ಬವನ್ನ 'ರಾಜಕುಮಾರ'ನ ಜೊತೆ ಆಚರಣೆ ಮಾಡಬಹುದು.

English summary
Kannada Actor Puneeth Rajkumar starrer Kannada Movie 'Rajakumara' Making Video release. Watch the video here.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X