»   » ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!

ಪುನೀತ್ 'ರಾಜಕುಮಾರ' ಟೀಸರ್ ನಲ್ಲಿವೆ ಹಲವು 'ಸರ್ಪ್ರೈಸ್'!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಈ ವರ್ಷದ ಬಹುನಿರೀಕ್ಷೆಯ ಚಿತ್ರ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೊದಲ ಟೀಸರ್ ಮೂಲಕ ಸಖತ್ ಕ್ರೇಜ್ ಹೆಚ್ಚಿಸಿದೆ.

ಬಹುತೇಕ ಚಿತ್ರೀಕರಣ ಮುಗಿಸಿರುವ 'ರಾಜಕುಮಾರ', ಈಗ ಚಿತ್ರಮಂದಿರಕ್ಕೆ ಬರಲು ಸಜ್ಜಾಗುತ್ತಿದೆ. ಈ ಮಧ್ಯೆ 'ರಾಜಕುಮಾರ' ಚಿತ್ರತಂಡದಿಂದ ಕನ್ನಡ ಕಲಾಭಿಮಾನಿಗಳಿಗೆ ಹೊಸ ಟೀಸರ್ ಉಡುಗೊರೆಯಾಗಿ ಸಿಕ್ಕಿದ್ದು, ಎಕ್ಸ್ ಪೆಕ್ಟೇಶನ್ ಜಾಸ್ತಿಯಾಗಿದೆ.[ಪುನೀತ್ 'ರಾಜಕುಮಾರ' ಹೈ ವೋಲ್ಟೇಜ್ ಟೀಸರ್ ಔಟ್]

ಈ ಹಿಂದೆ ಡೈಲಾಗ್, ಆಕ್ಷನ್ ನಿಂದ ಅಬ್ಬರಿಸಿದ್ದ ಮೊದಲ ಟೀಸರ್ ಗಿಂತ, ಎರಡನೇ ಟೀಸರ್ ವಿಶೇಷವಾಗಿದ್ದು, ಸಖತ್ ಕಲರ್ ಫುಲ್ ನಿಂದ ಕೂಡಿದೆ.

'ರಾಜಕುಮಾರ'ನಿಂದ ಹೊಸ ವರ್ಷದ ಗಿಫ್ಟ್!

ಪುನೀತ್ ರಾಜ್ ಕುಮಾರ್ ಅಭಿನಯದ ಹೈ ವೋಲ್ಟೇಜ್ ಚಿತ್ರ 'ರಾಜಕುಮಾರ', ತನ್ನ ಎರಡನೇ ಟೀಸರ್ ಬಿಡುಗಡೆ ಮಾಡಿದೆ. ಹೊಸ ವರ್ಷದ ಸಂಭ್ರಮದಲ್ಲಿದ್ದ ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ಪವರ್ ಸ್ಟಾರ್ ಹೊಸ ಚಿತ್ರ ಭರ್ಜರಿ ಉಡುಗೊರೆ ನೀಡಿದ್ದಾರೆ.

ಕ್ಲಾಸ್ ಅಂಡ್ ಮಾಸ್ 'ರಾಜಕುಮಾರ'!

ಮೊದಲ ಟೀಸರ್ ನಲ್ಲಿ ಪುನೀತ್ ಅವರ ಮಾಸ್ ಲುಕ್ ಹೈಲೈಟ್ ಆಗಿತ್ತು. ಇದೀಗ ಎರಡನೇ ಟೀಸರ್ ನಲ್ಲಿ ಕ್ಲಾಸ್ ಲುಕ್ ನಲ್ಲಿ ಸ್ಟೈಲಿಶ್ ಗೆಟಪ್ ನಲ್ಲಿ ಅಪ್ಪು ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಚಿತ್ರದಲ್ಲಿ ಮಾಸ್ ಮತ್ತು ಕ್ಲಾಸ್ ಎಲಿಮೆಂಟ್ಸ್ ಜೋರಾಗಿರಲಿವೆ ಎನ್ನುವುದರಲ್ಲಿ ಅನುಮಾನವಿಲ್ಲ.

ಪಾತ್ರಗಳ ಅನಾವರಣ!

'ರಾಜಕುಮಾರ' ಚಿತ್ರದಲ್ಲಿ ಬಹುದೊಡ್ಡ ಕಲಾವಿದರ ಬಳಗವಿದೆ. ಹೊಸ ಟೀಸರ್ ನಲ್ಲಿ ಈ ಎಲ್ಲ ಪಾತ್ರಗಳ ಪರಿಚಯವಾಗಿದೆ. ಅನಂತ್ ನಾಗ್, ಅಚ್ಯುತ್ ಕುಮಾರ್, ಅವಿನಾಶ್, ಅಶೋಕ್, ವಿಜಯಲಕ್ಷ್ಮಿ ಸಿಂಗ್, ಚಿತ್ರ ಶಣೈ, ಭಾರ್ಗವಿ ನಾರಾಯಣ್, ಅರುಣ ಬಾಲರಾಜ್, ಹೊನ್ನಾವಳ್ಳಿ ಕೃಷ್ಣ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಕಾಮಿಡಿ 'ಕಿಂಗ್'ಗಳ ಜುಗಲ್ ಬಂದಿ!

'ರಾಜಕುಮಾರ' ಚಿತ್ರದಲ್ಲಿ ಕಾಮಿಡಿ 'ಕಿಂಗ್'ಗಳ ಅಪರೂಪದ ಸಮ್ಮಿಲನವಾಗಿದೆ. ಸ್ಯಾಂಡಲ್ ವುಡ್ ನ ಟಾಪ್ ಹಾಸ್ಯ ನಟರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ದತ್ತಣ್ಣರ ಹಾಸ್ಯ ಚಟಾಕಿ ಈ ಚಿತ್ರದಲ್ಲಿದೆ.

ಪ್ರಿಯಾ ಆನಂದ್ ನಾಯಕಿ!

ಸೌತ್ ಸುಂದರಿ ಪ್ರಿಯಾ ಆನಂದ್, ಇದೇ ಮೊದಲ ಭಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚೊಚ್ಚಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಕಾಶ್ ರೈ ಎಂಟ್ರಿ!

ಇನ್ನೂ ರಾಜಕುಮಾರ ಚಿತ್ರದಲ್ಲಿ ಬಹುಭಾಷ ನಟ ಪ್ರಕಾಶ್ ರೈ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

'ಮಾಸ್ತಿಗುಡಿ' ವಿಲನ್ ಅನಿಲ್!

ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ದುರಂತದಲ್ಲಿ ಸಾವುಗೀಡಾಗಿದ್ದ ಖಳನಟ ಅನಿಲ್, 'ರಾಜಕುಮಾರ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

ತಮಿಳು ನಟ ಶರತ್ ಕುಮಾರ್!

ತಮಿಳು ನಟ ಶರತ್ ಕುಮಾರ್ ರಾಜಕುಮಾರ ಚಿತ್ರದಲ್ಲಿ ವಿಶೆಷ ಪಾತ್ರವನ್ನ ನಿರ್ವಹಿಸಿದ್ದಾರೆ. ಚಿತ್ರದ ನಾಯಕಿ ಪ್ರಿಯಾ ಆನಂದ್ ಅವರ ತಂದೆ ಪಾತ್ರದಲ್ಲಿ ಶರತ್ ಕುಮಾರ್ ಅಭಿನಯಿಸಿದ್ದಾರೆ.

ಸಂತೋಷ್ ಆನಂದ್ ರಾಮ್ ನಿರ್ದೇಶನ!

ಯಶ್ ಅಭಿನಯದ ಮಿಸ್ಟರ್ ಅಂಡ್ ಮಿಸಸ್ ರಾಮಾಚರಿ ಚಿತ್ರದ ಮೂಲಕ ಗಾಂಧಿನಗರದಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಪುನೀತ್ ಅವರ ರಾಜಕುಮಾರ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಹರಿಕೃಷ್ಣ ಸಂಗೀತವಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ್ದಾರೆ.

'ಕನ್ನಡದ ರಾಜರತ್ನ'

ಅಭಿಮಾನಿಗಳಿಂದ ಪವರ್ ಸ್ಟಾರ್, ಅಪ್ಪು, ಅಂತ ಕರೆಸಿಕೊಳ್ಳುವ ಪುನೀತ್ ರಾಜ್ ಕುಮಾರ್ ಅವರಿಗೆ 'ರಾಜಕುಮಾರ' ಚಿತ್ರದ ಮೂಲಕ 'ಕನ್ನಡ ರಾಜರತ್ನ' ಆಗಿ ಬರುತ್ತಿದ್ದಾರೆ.

ಆಡಿಯೋ ರಿಲೀಸ್!

ಸದ್ಯ ಚಿತ್ರೀಕರಣ ಮುಗಿಸಿರುವ 'ರಾಜಕುಮಾರ', ಚಿತ್ರದ ಆಡಿಯೋ ಬಿಡುಗಡೆಗೆ ಸಿದ್ದವಾಗುತ್ತಿದೆ. ಅದಾದ ಬಳಿಕ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ.[ರಾಜಕುಮಾರ ಹೊಸ ಟೀಸರ್ ಇಲ್ಲಿದೆ ನೋಡಿ]

English summary
Kannada Actor Puneeth Rajkumar starrer Kannada Movie 'Rajakumara' Second teaser release for New Year Specail. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada