»   » ಪುನೀತ್ 'ರಾಜಕುಮಾರ' ಹೈ ವೋಲ್ಟೇಜ್ ಟೀಸರ್ ಔಟ್

ಪುನೀತ್ 'ರಾಜಕುಮಾರ' ಹೈ ವೋಲ್ಟೇಜ್ ಟೀಸರ್ ಔಟ್

Posted By:
Subscribe to Filmibeat Kannada

ಈ ವರ್ಷದ ಬಹು ನಿರೀಕ್ಷಿತ ಚಿತ್ರ 'ದೊಡ್ಮನೆ ಹುಡ್ಗ' ಕಣ್ತುಂಬಿಕೊಳ್ಳುವಾಗಲೇ, ಇಂಟರ್ ವಲ್ ನಲ್ಲಿ 'ರಾಜಕುಮಾರ' ಚಿತ್ರದ ಮೊಟ್ಟ ಮೊದಲ ಟೀಸರ್ ನೋಡುವ ಭಾಗ್ಯ ಪ್ರೇಕ್ಷಕರಿಗೆ ಸಿಕ್ತು.

ಇವತ್ತಷ್ಟೇ ಬಿಡುಗಡೆ ಆಗಿರುವ ಪುನೀತ್ ರಾಜ್ ಕುಮಾರ್ ಅಭಿನಯದ ಹೊಸ ಸಿನಿಮಾ 'ರಾಜಕುಮಾರ' ಟೀಸರ್ ನ ನೀವಿನ್ನೂ ನೋಡಿಲ್ಲ ಅಂದ್ರೆ, ಈಗ ಮಿಸ್ ಮಾಡ್ಬೇಡಿ....

Watch Puneeth Rajkumar starrer 'Rajakumara' teaser


''ಏಯ್...ನೀವೆಲ್ಲ ಅಣ್ಣ, ಬಾಸು ಅಂತ ಬೇರೆಯವರ ಹೆಸರು ಹೇಳ್ಕೊಂಡು ಪವರ್ ಗೆ ಬಂದಿರೋದು. ಆದರೆ 'ಅವರ' ಹೆಸರು ಜೊತೇಲೆ ಪವರ್ ಇರೋದು'' ಅಂತ ಚಿಕ್ಕಣ್ಣ ಹೊಡೆಯುವ ಎಂಬ ಪವರ್ ಪಫ್ ಡೈಲಾಗ್ ಮತ್ತು ಸೂಪರ್ ಸ್ಟಂಟ್ ಮೂಲಕ ಪುನೀತ್ ಎಂಟ್ರಿ ಕೊಡುವ 'ರಾಜಕುಮಾರ' ಟೀಸರ್ ಅಪ್ಪು ಅಭಿಮಾನಿಗಳ ಮನೆ ಗೆದ್ದಿದೆ. ['ರಾಜಕುಮಾರ' ಪುನೀತ್ ರವರ ಯುವರಾಣಿ 'ಇವರೇ'..!]

ಹೇಳಿ ಕೇಳಿ ಚಿತ್ರದ ಹೆಸರೇ 'ರಾಜಕುಮಾರ', ಇನ್ನೂ ಈ ಟೀಸರ್ ಮೂಲಕ ಹೈ ವೋಲ್ಟೇಜ್ ಕರೆಂಟ್ ಪಾಸ್ ಆಗಿರುವುದರಿಂದ ಪವರ್ ಸ್ಟಾರ್ ಫ್ಯಾನ್ಸ್ ಮುಖದಲ್ಲಿ ಥೌಸೆಂಡ್ ವೋಲ್ಟ್ ಬಲ್ಬ್ ಆನ್ ಆದ ಹಾಗಾಗಿದೆ. [ಪುನೀತ್ ರಾಜ್ ಕುಮಾರ್ ಬಗ್ಗೆ ಸ್ಫೋಟಗೊಂಡ ರೋಚಕ ಸುದ್ದಿ ನಿಜ.?]

ಸದ್ಯಕ್ಕಿನ್ನೂ ಚಿತ್ರೀಕರಣ ಹಂತದಲ್ಲಿ ಇರುವ 'ರಾಜಕುಮಾರ' ಬಿಡುಗಡೆ ಆಗಲು ಇನ್ನೂ ಟೈಮ್ ಇದೆ. ಅಲ್ಲಿಯವರೆಗೂ 'ದೊಡ್ಮನೆ ಹುಡ್ಗ' ಮಾಡಿರುವ 'ಮಸಾಲೆ' ಬಿರಿಯಾನಿ ಸವಿಯುತ್ತಿರಿ...

English summary
Kannada Actor Puneeth Rajkumar starrer Kannada Movie 'Rajakumara' teaser is out. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada