»   » ವಿಡಿಯೋ: 'ರಾಜಕುಮಾರ'ನ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ

ವಿಡಿಯೋ: 'ರಾಜಕುಮಾರ'ನ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ, ಬಹುನಿರೀಕ್ಷಿತ 'ರಾಜಕುಮಾರ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಎರಡು ವಿಭಿನ್ನ ಟೀಸರ್ ಗಳ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ 'ರಾಜಕುಮಾರ' ಈಗ 2 ನಿಮಿಷದ ಟ್ರೈಲರ್ ರಿಲೀಸ್ ಮಾಡಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

'ರಾಜಕುಮಾರ' ಹೆಸರಿಗೆ ತಕ್ಕಂತೆ ಸಿನಿಮಾ ಇದಾಗಿದೆ ಎಂಬುದು ಈಗ ಬಿಡುಗಡೆಯಾಗಿರುವ ಟ್ರೈಲರ್ ನಿಂದ ಸಾಬೀತಾಗಿದೆ. ಮಾಸ್, ಕ್ಲಾಸ್, ಕಾಮಿಡಿ, ಲವ್, ಫ್ಯಾಮಿಲಿ ಹೀಗೆ ಎಲ್ಲ ಅಂಶಗಳಿಂದಲೂ ಪ್ರೇಕ್ಷಕರನ್ನ ಥಿಯೇಟರ್ ನತ್ತ ಸೆಳೆಯುವ ತಾಕತ್ 'ರಾಜಕುಮಾರ' ಟ್ರೈಲರ್ ಗೆ ಇದೆ ಅಂದ್ರೆ ತಪ್ಪಾಗಲಾರದು.['ರಾಜಕುಮಾರ'ನ ಇಂಟರ್ ವಲ್ ದೃಶ್ಯ ನೋಡಿ ರೋಮಾಂಚನಗೊಂಡ ಜಗ್ಗೇಶ್!]


ಹಾಗಾದ್ರೆ, ಪುನೀತ್ ರಾಜ್ ಕುಮಾರ್ ಹಾಗೂ ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ 'ರಾಜಕುಮಾರ'ನ ಟ್ರೈಲರ್ ಹೇಗಿದೆ ಅಂತ ಮುಂದೆ ನೋಡಿ.....


ಕ್ಲಾಸ್ ಅಂಡ್ ಮಾಸ್ 'ರಾಜಕುಮಾರ'!

'ರಾಜಕುಮಾರ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಕ್ಲಾಸ್ ಮತ್ತು ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಚಿತ್ರದಲ್ಲಿ ಮಸ್ತ್ ಆಕ್ಷನ್ ಜೊತೆಗೆ ಜಬರ್ ದಸ್ತ್ ಎಂಟರ್ ಟೈನ್ಮೆಂಟ್ ಪಕ್ಕಾ ಎನ್ನುವುದು ಟ್ರೈಲರ್ ನಲ್ಲಿ ಪ್ರೂವ್ ಆಗಿದೆ.['ರಾಜಕುಮಾರ' ಚಿತ್ರದ ಕಡೆಯಿಂದ ಬಂದ ಸಿಹಿ ಸುದ್ದಿ ಇದು..]


ಫ್ಯಾಮಿಲಿ ಪ್ಯಾಕೇಜ್!

ಅಂದ್ಹಾಗೆ, 'ರಾಜಕುಮಾರ' ಚಿತ್ರದಲ್ಲಿ ಬಹುದೊಡ್ಡ ಕಲಾವಿದರ ಬಳಗವಿದೆ. ಅನಂತ್ ನಾಗ್, ಅಚ್ಯುತ್ ಕುಮಾರ್, ಅವಿನಾಶ್, ಅಶೋಕ್, ವಿಜಯಲಕ್ಷ್ಮಿ ಸಿಂಗ್, ಚಿತ್ರ ಶಣೈ, ಭಾರ್ಗವಿ ನಾರಾಯಣ್, ಅರುಣ ಬಾಲರಾಜ್, ಹೊನ್ನಾವಳ್ಳಿ ಕೃಷ್ಣ ಸೇರಿದಂತೆ ಹಲವು ಸ್ಟಾರ್ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇಷ್ಟು ಕಲಾವಿದರನ್ನ ಒಂದೇ ತೆರೆಮೇಲೆ ತರಲು ಕಾರಣ ಈ ಚಿತ್ರದಲ್ಲಿ ಒಂದು ಫ್ಯಾಮಿಲಿ ಪ್ಯಾಕೇಜ್ ಇದೆ ಎಂಬ ಕಾರಣಕ್ಕೆ.['ರಾಜಕುಮಾರ' ಚಿತ್ರದ ಚಿತ್ರೀಕರಣ ಮುಕ್ತಾಯ!]


ಕಾಮಿಡಿಗೆ ಕೊರತೆಯಿರಲ್ಲ!

'ರಾಜಕುಮಾರ' ಚಿತ್ರದಲ್ಲಿ ಕಾಮಿಡಿ 'ಕಿಂಗ್'ಗಳ ಅಪರೂಪದ ಸಮ್ಮಿಲನವಾಗಿದೆ. ಸ್ಯಾಂಡಲ್ ವುಡ್ ನ ಟಾಪ್ ಹಾಸ್ಯ ನಟರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ದತ್ತಣ್ಣರ ಹಾಸ್ಯ ಚಟಾಕಿ ಈ ಚಿತ್ರದಲ್ಲಿದೆ.


ರಾಜಕುಮಾರನ ಲವ್ ಕಹಾನಿ!

ಸೌತ್ ಸುಂದರಿ ಪ್ರಿಯಾ ಆನಂದ್, ಇದೇ ಮೊದಲ ಭಾರಿಗೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚೊಚ್ಚಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ರೊಮ್ಯಾಂಟಿಕ್ ಲವ್ ಅಪ್ಪು ಅಭಿಮಾನಿಗಳಿಗೆ ಇಷ್ಟವಾಗುತ್ತೆ.


ಅಪ್ಪು ಡ್ಯಾನ್ಸ್!

ಪುನೀತ್ ಸಿನಿಮಾಗಳಲ್ಲಿ ಡ್ಯಾನ್ಸ್ ಬಹುದೊಡ್ಡ ಶಕ್ತಿ. ಅದು ಈ ಚಿತ್ರದಲ್ಲೂ ಮುಂದುವರೆದಿದೆ. ಟ್ರೈಲರ್ ನಲ್ಲಿ ಪುನೀತ್ ಅವರ ಮಸ್ತ್ ಡ್ಯಾನ್ಸ್ ಝಲಕ್ ತೋರಿಸಿದ್ದು, ಕುತೂಹಲ ಹೆಚ್ಚಾಗಿದೆ.[ಬಿಡುಗಡೆಯಾದ ಮೊದಲ ದಿನವೇ ದಾಖಲೆ ಬರೆದ 'ರಾಜಕುಮಾರ' ಹಾಡು!]


ಆಡಿಯೋ ರಿಲೀಸ್!

ಚಿತ್ರದ ಟೈಟಲ್ ಹಾಡಿನ ಮೂಲಕ ಪವರ್ ಸ್ಟಾರ್ ಫ್ಯಾನ್ಸ್ ಗೆ ಹಬ್ಬವನ್ನುಂಟು ಮಾಡಿದ್ದ 'ರಾಜಕುಮಾರ' ಕೊನೆಗೂ ಚಿತ್ರದ ಹಾಡುಗಳನ್ನ ಅಧೀಕೃತವಾಗಿ ಬಿಡುಗಡೆ ಮಾಡಿದೆ. (ಹಾಡುಗಳನ್ನ ಕೇಳಲು ಈ ಲಿಂಕ್ ಕ್ಲಿಕ್ ಮಾಡಿ)


ಸಂತೋಷ್ ಆನಂದ್ ರಾಮ್ ನಿರ್ದೇಶನ!

ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರದ ಮೂಲಕ ಗಾಂಧಿನಗರದಲ್ಲಿ ಟ್ರೆಂಡ್ ಕ್ರಿಯೆಟ್ ಮಾಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್, ಪುನೀತ್ ಅವರ 'ರಾಜಕುಮಾರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಹರಿಕೃಷ್ಣ ಸಂಗೀತವಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದ್ದಾರೆ.[ರಾಜಕುಮಾರ ಟ್ರೈಲರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ]


English summary
Kannada Actor Puneeth Rajkumar starrer Kannada Movie 'Rajakumara' Trailer release. Watch the video here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada