ಪವರ್ ಫುಲ್ 'ರಣವಿಕ್ರಮ' ಟೀಸರ್ ಬಂದಿದೆ ನೋಡಿ
'ಪವರ್ ಹೌಸ್' ಅಭಿಮಾನಿಗಳಿಗೆ ಇವತ್ತು ಸಂಭ್ರಮವೋ ಸಂಭ್ರಮ. ಯಾಕಂದ್ರೆ, ಪವರ್ ಸ್ಟಾರ್ ಗಿಂದು ಹುಟ್ಟುಹಬ್ಬದ ಸಡಗರ. 40 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ಪುನೀತ್ ರಾಜ್ ಕುಮಾರ್.
ಮಧ್ಯರಾತ್ರಿಯಿಂದಲೇ ಪುನೀತ್ ಹುಟ್ಟುಹಬ್ಬವನ್ನ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಹಾಗ್ನೋಡಿದ್ರೆ, ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಈ ವಾರ ಅವರ 'ರಣವಿಕ್ರಮ' ಸಿನಿಮಾ ತೆರೆಗೆ ಅಪ್ಪಳಿಸಬೇಕಿತ್ತು. [ಬೇವು-ಬೆಲ್ಲ ಹಂಚಲು ಬರುತ್ತಿದ್ದಾನೆ 'ರಣವಿಕ್ರಮ']
ಆದ್ರೆ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಇನ್ನೂ ಬಿಜಿಯಿರುವ 'ರಣವಿಕ್ರಮ' ಚಿತ್ರದ ಸ್ಪೆಷಲ್ ಬರ್ತಡೆ ಟೀಸರ್ ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಇಂದು ರಿಲೀಸ್ ಆಗಿದೆ. 'ಫಿಲ್ಮಿಬೀಟ್'ಗೆ ನಿರ್ದೇಶಕ ಪವನ್ ಒಡೆಯರ್ ನೀಡಿದ ಸಂದರ್ಶನದಲ್ಲಿ ಅಪ್ಪು ಹುಟ್ಟುಹಬ್ಬಕ್ಕೆ ಸ್ಪೆಷಲ್ ಸರ್ಪ್ರೈಸ್ ಇದೆ ಅಂತ ಹೇಳಿದ್ರು. ಆ ಸ್ಪೆಷಲ್ ಟೀಸರ್ ಇಲ್ಲಿದೆ ನೋಡಿ.....
ಸೂಪರ್ ಸ್ಟೈಲಿಶ್ ಲುಕ್ ನಲ್ಲಿ ಕೂಲ್ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ಖಾಕಿ ಖದರ್ ನಲ್ಲಿ ಪುನೀತ್ ರಾಜ್ ಕುಮಾರ್ ಮಿಂಚಿದ್ದಾರೆ. ಕೈಲಿ ಗನ್ ಹಿಡಿದು ವಿಲನ್ ಗಳಿಗೆ ಗುನ್ನ ನೀಡಿರುವ ಪವರ್ ಪಫ್ ಟೀಸರ್ ಅಪ್ಪು ಬರ್ತಡೆ ಪ್ರಯುಕ್ತ ಹೊರಬಂದಿದೆ. ['ಫಿಲ್ಮಿಬೀಟ್' ಜೊತೆ ಪವನ್ 'ರಣವಿಕ್ರಮ' ವಿಶೇಷಗಳು ]
ರವಿವರ್ಮ ಸಂಯೋಜಿಸಿರುವ ಮೈನವಿರೇಳಿಸುವ ಸಾಹಸ ದೃಶ್ಯಗಳ ಝಲಕ್ ಇರುವ ಈ ಟೀಸರ್ ಅಪ್ಪು ಅಭಿಮಾನಿಗಳಿಗೆ ರಸದೌತಣ. ಖಾಕಿ ತೊಟ್ಟು ಖೇಡಿಗಳನ್ನ ಮಣ್ಣುಮುಕ್ಕಿಸುವ ಅಪ್ಪು, ''ಕೊನೆಯಲ್ಲಿ ನಾನ್ ಪೊಲೀಸಾ...?'' ಅಂತ ಡೈಲಾಗ್ ಕೂಡ ಹೊಡೆಯುತ್ತಾರೆ.
ಇನ್ನೂ ಇದೇ ಚಿತ್ರದ ಮೂಲಕ ಕನ್ನಡಕ್ಕೆ ಖತರ್ನಾಕ್ ಖೇಡಿಯಾಗಿ ಪರಿಚಯವಾಗುತ್ತಿರುವುದು ಬಾಲಿವುಡ್ ವಿಲನ್ ವಿಕ್ರಂ ಸಿಂಗ್. ಅಪ್ಪು ಪರಾಕ್ರಮ ಬಿಟ್ಟರೆ, ಟೀಸರ್ ನಲ್ಲಿ ನಾಯಕರಾದ ಅದಾ ಶರ್ಮಾ, ಅಂಜಲಿ ಸುಳಿವಿಲ್ಲ. [ಪುನೀತ್ ಕೋಗಿಲೆ ಕಂಠದಲ್ಲಿ 'ರಣವಿಕ್ರಮ' ಪ್ರೇಮಗೀತೆ]
ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್ 20 ರಂದು 'ರಣವಿಕ್ರಮ' ಆಡಿಯೋ ರಿಲೀಸ್ ಆಗುತ್ತಿದೆ. ಅಲ್ಲಿಗೆ ಈ ವಾರ ಪವರ್ ಫ್ಯಾನ್ಸ್ ಗೆ ಡಬಲ್ ಧಮಾಕಾ. ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಇದಕ್ಕಿಂತ ಬೇರೇನು ಬೇಕು ಹೇಳಿ...? (ಫಿಲ್ಮಿಬೀಟ್ ಕನ್ನಡ)


Click it and Unblock the Notifications












