For Quick Alerts
ALLOW NOTIFICATIONS  
For Daily Alerts

ಧೀರ ರಣ ವಿಕ್ರಮ ಟೀಸರ್ 'ಪವರ್ ಫುಲ್'

By ಜೇಮ್ಸ್ ಮಾರ್ಟಿನ್
|

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕ್ಲಾಪ್ ಮಾಡುವ ಮೂಲಕ 'ಧೀರ ರಣ ವಿಕ್ರಮ' ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಪವನ್ ಒಡೆಯರ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಟೀಸರ್ ನೋಡಿದ ಅಭಿಮಾನಿಗಳು 'ಪವರ್ ಫುಲ್' ಗುರೂ ಎಂದು ಹಾಡಿ ಹೊಗಳಿದ್ದಾರೆ. ರಣ ವಿಕ್ರಮ ಟೀಸರ್ ಬಗ್ಗೆ ಒಂದಿಷ್ಟು ಅನಿಸಿಕೆ ಇಲ್ಲಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಮೂವತ್ತೊಂಬ್ಬತ್ತನೇ ಹುಟ್ಟುಹಬ್ಬದ ಸಂಭ್ರಮದ ದಿನವಾದ ಇಂದು (ಮಾ.17) ಹೊಸ ಚಿತ್ರದ ಟೀಸರ್ ಕೂಡಾ ಬಿಡುಗಡೆಗೊಂಡಿದೆ. ಹಾಸ್ಯದ ಹೊನಲು ಹರಿಸುವ ಚಿತ್ರಗಳನ್ನು ನೀಡಿದ ಪವನ್ ಒಡೆಯರ್ ಅವರು ಪ್ರಪ್ರಥಮ ಬಾರಿಗೆ ಸಂಪೂರ್ಣ ಸಾಹಸಭರಿತ, ರೋಮಾಂಚನಕಾರಿ ಚಿತ್ರವನ್ನು ನೀಡಲು ಮುಂದಾಗಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿನ ಡಾ.ರಾಜ್ ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಪುನೀತ್ ಬಳಿಕ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ಇದೇ ಸಂಭ್ರಮ ವೆಬ್ ತಾಣಗಳಲ್ಲೂ ಕಂಡು ಬಂದಿದ್ದು ಶಿವು ಅಡ್ಡಾ ಸೇರಿದಂತೆ ಹಲವಾರು ಉತ್ಸಾಹಿ ಸಿನಿ ರಸಿಕರು ಪುನೀತ್ ಹುಟ್ಟುಹಬ್ಬವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಆಚರಿಸಿದ್ದಾರೆ. ಧೀರ ರಣ ವಿಕ್ರಮ ಚಿತ್ರದ ಟೀಸರ್ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ...

ಚಿತ್ರದಲ್ಲಿ ಪುನೀತ್ ಸೂಪರ್ ಕಾಪ್

ಚಿತ್ರದಲ್ಲಿ ಪುನೀತ್ ಸೂಪರ್ ಕಾಪ್

ಸುಮಾರು 54 ಸೆಕೆಂಡುಗಳಷ್ಟಿರುವ ಮೊದಲ ಟೀಸರ್ ನಲ್ಲಿ ವಿಶೇಷವಾದ ಸೆಟ್ ಬಳಸಲಾಗಿದ್ದು, ಎಲ್ಲೆಡೆ ಬೆಂಕಿ ಉಗುವ ಸಾಮಾಗ್ರಿಗಳ ನಡುವೆ ಸೂಪರ್ ಆಗಿ ಗುಂಡು ಹಾರಿಸುತ್ತಾ ಪುನೀತ್ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದಲ್ಲಿ ಪುನೀತ್ ಅವರು ಸೂಪರ್ ಕಾಪ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಡಬ್ಬಲ್ ರೋಲ್ ಇಲ್ಲ ಡಬ್ಬಲ್ ಹೀರೋಯಿನ್

ಡಬ್ಬಲ್ ರೋಲ್ ಇಲ್ಲ ಡಬ್ಬಲ್ ಹೀರೋಯಿನ್

ಪುನೀತ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ. ಆದರೆ, ಡಬ್ಬಲ್ ಹೀರೋಯಿನ್ ಜತೆ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ. ಮಿಲನ, ಪೃಥ್ವಿ ಚಿತ್ರದ ನಾಯಕಿ ಪಾರ್ವತಿ ಮೆನನ್ ಮತ್ತೊಮ್ಮೆ ಪುನೀತ್ ಗೆ ಜೋಡಿಯಾಗಿದ್ದಾರೆ. ಮತ್ತೊಬ್ಬ ನಾಯಕಿಯ ಹುಡುಕಾಟ ಜಾರಿಯಲ್ಲಿದೆ.

ವಿಡಿಯೋ ಗೇಮ್ಸ್ ಪ್ರೇರಿತ?

ವಿಡಿಯೋ ಗೇಮ್ಸ್ ಪ್ರೇರಿತ?

ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲೂ ಹೆಸರು ಗಳಿಸಿರುವ ವಿದ್ಯುತ್ ಜಾನ್ವಲ್ ಅವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಟೀಸರ್ ಮೊದಲ ನೋಟಕ್ಕೆ ಗಮನ ಸೆಳೆಯುತ್ತದೆ. ಆದರೆ, ಈ ಮುಂಚೆ ರಿಲೀಸ್ ಆದ ಪೋಸ್ಟರ್ ಗಳನ್ನು ಸೂಕ್ಷ್ಮವಾಗಿ ನೋಡಿದರೆ ಎಲ್ಲವೂ ವಿಡಿಯೋ ಗೇಮ್ಸ್ ಪ್ರೇರಿತ ಎಂದು ಕಂಡು ಬರುತ್ತದೆ.

ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ

ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ

ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡುತ್ತೇವೆ. ಪುನೀತ್ ಅವರಿಗೆ ಈ ಚಿತ್ರ ಹೊಸ ಇಮೇಜ್ ತಂದುಕೊಡಲಿದೆ ಎಂಬ ವಿಶ್ವಾಸವನ್ನು ಪವನ್ ಒಡೆಯರ್ ವ್ಯಕ್ತಪಡಿಸಿದ್ದಾರೆ.

ಪವರ್ ಪ್ಯಾಕ್ ತಾಂತ್ರಿಕ ವರ್ಗ

ಪವರ್ ಪ್ಯಾಕ್ ತಾಂತ್ರಿಕ ವರ್ಗ

ರಣ ವಿಕ್ರಮ ಚಿತ್ರವನ್ನು ಜಯಣ್ಣ ಕಂಬೈನ್ಸ್ ಬ್ಯಾನರ್ ನಲ್ಲಿ ಜಯಣ್ಣ ಭೋಗೇಂದ್ರ ನಿರ್ಮಿಸುತ್ತಿದ್ದಾರೆ. ವೈದಿ ಎಸ್ ಅವರ ಛಾಯಾಗ್ರಹಣ, ಸಂಗೀತ ವಿ ಹರಿಕೃಷ್ಣ, ರವಿವರ್ಮ ಅವರ ಸ್ಟಂಟ್ಸ್, ಮುರಳಿ ಅವರ ನೃತ್ಯ ನಿರ್ದೇಶನ ಇದೆ. ಮಿಕ್ಕಂತೆ ಚಿತ್ರ ತಂಡ ಹೀಗಿದೆ:

* Movie: Dheera Ranavikrama

* Banner : jayanna Combines

* Producer : jayanna Bhogendra

* Director : Pavan Wadeyar

* Cinematography : Vaidy. S

* Music : V. Harikrishna

* Editor : Suresh .S.A

* Assistant Directors : Kumar S Raj, Manohar, Keshav, Naveen, Chethan

* Designs : Devi

* Art : Guna

* Stunts : Ravi varma

* Choreographer : Murli

* Manager : suresh Mysore , Sudhir

* Stills : karunakaran

* Colors : Muttu

* P.R.O : Deepak

ಪವರ್ ಫುಲ್ ಟೀಸರ್ ನೋಡಿ ಆನಂದಿಸಿ

ಧೀರ ರಣ ವಿಕ್ರಮ ಟೀಸರ್ 'ಪವರ್ ಫುಲ್' ಚಿತ್ರದ ಟೀಸರ್ ನೋಡಿ

English summary
Power Star Puneet Rajkumar, who is celebrating his 39th birthday today, March 17, has got a biggest feast. The makers of Sandalwood's forthcoming movie Ranavikrama have released the first thrilling teaser of the movie.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more