»   » ಮೊದಲ ಪ್ರೀತಿ ನೆನಪಿಸುವ ಆರ್‌ಜೆ ರಾಜೇಶ್ 'ಫಸ್ಟ್ ಲವ್' ಟ್ರೈಲರ್..

ಮೊದಲ ಪ್ರೀತಿ ನೆನಪಿಸುವ ಆರ್‌ಜೆ ರಾಜೇಶ್ 'ಫಸ್ಟ್ ಲವ್' ಟ್ರೈಲರ್..

Posted By:
Subscribe to Filmibeat Kannada

ಎಫ್‌ಎಂ ರೇಡಿಯೋ ಮೂಲಕ ಜನಪ್ರಿಯರಾಗಿರುವ ರೇಡಿಯೋ ಜಾಕಿ ರಾಜೇಶ್ ರವರು ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಅವರ ಅಭಿನಯದ 'ಫಸ್ಟ್ ಲವ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

'ನೆನಪುಗಳ ತಾಜ್‌ ಮಹಲ್' ಎಂಬ ಅಡಿ ಶೀರ್ಷಿಕೆಯ 'ಫಸ್ಟ್ ಲವ್' ಚಿತ್ರ ಟೈಟಲ್ ನಿಂದಲೇ ಯುವ ಮನಸ್ಸುಗಳ ಗಮನ ಸೆಳೆದಿದೆ. ಅಲ್ಲದೇ ಬಿಡುಗಡೆ ಆಗಿರುವ 2 ನಿಮಿಷ 50 ಸೆಕೆಂಡ್ ನ ಟ್ರೈಲರ್ ನಲ್ಲಿ ಪ್ರತಿಯೊಬ್ಬರ ಜೀವನದಲ್ಲೂ ಒಂದು ಫಸ್ಟ್ ಲವ್ ಇರುತ್ತದೆ. ಅದು ಹೇಗಿರುತ್ತದೆ ಎಂಬುದನ್ನು ತೋರಿಸುವ ಪ್ರಯತ್ನದಲ್ಲಿ ಮೂಡಿಬಂದಿರುವುದು ಅರಿವಾಗುತ್ತದೆ. ಈ ಚಿತ್ರವನ್ನು ಕರ್ನಾಟಕದ ಸುಂದರ ತಾಣಗಳಾದ ವಿಶ್ವವಿಖ್ಯಾತ ಗೋಲ್ ಗುಂಬಜ್ ಆವರಣದಲ್ಲಿ, ಚಿಕ್ಕಮಗಳೂರಿನ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ.

watch RJ Rajesh Starrer Kannada Movie 'First Love' Trailer

ಆರ್‌ಜೆ ರಾಜೇಶ್ ಅಭಿನಯದ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಕಿರುತೆರೆ ನಟಿ ಕವಿತಾ ಮತ್ತು ಸ್ನೇಹ ನಾಯರ್ ಅಭಿನಯಿಸಿದ್ದಾರೆ. ನಟಿ ಕವಿತ ಈ ಹಿಂದೆ ಆರ್‌ಜೆ ಶ್ರೀನಿವಾಸ್ ನಿರ್ದೇಶನದ 'ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ಅಭಿನಯಿಸಿದ್ದರು. ಇನ್ನು ಚಿತ್ರದಲ್ಲಿ ವಿಶೇಷವಾಗಿ ಹಾಡುಗಳಲ್ಲಿ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ರವರು ಕಾಣಿಸಿಕೊಂಡಿದ್ದು, ಸ್ಟೆಪ್ ಸಹ ಹಾಕಿದ್ದಾರೆ.

ಟೈಟಲ್ ನಿಂದಲೇ ಗಮನ ಸೆಳೆದಿರುವ 'ಫಸ್ಟ್ ಲವ್' ಚಿತ್ರವನ್ನು ಮಲ್ಲಿ ಎಂಬುವವರು ನಿರ್ದೇಶನ ಮಾಡಿದ್ದು, ಅಶೋಕ್ ಓ ಲಮಣಿ ಎಂಬುವವರು ನಿರ್ಮಾಣ ಮಾಡಿದ್ದಾರೆ. 'ಆದಿತ್ಯ ಫಿಲ್ಮ್ ಪ್ರೊಡಕ್ಷನ್' ಅಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಈ ಚಿತ್ರಕ್ಕೆ ವಿ. ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜನೆ ನೀಡಿದ್ದಾರೆ. ಚಿತ್ರ ಆಗಸ್ಟ್ ನಲ್ಲಿ ತೆರೆಕಾಣುವ ಸಾಧ್ಯತೆ ಇದೆ. ಚಿತ್ರದ ಟ್ರೈಲರ್ ಈ ಕೆಳಗಿನಂತಿದೆ ನೋಡಿ

English summary
RJ Rajesh Starrer Kannada Movie 'First Love' Trailer released. This movie is direct by Malli, feature actress Kavitha, Sneha Nair.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada