»   » ಶಿವಣ್ಣನ ಡ್ಯಾನ್ಸ್ ಲೈವ್ ಆಗಿ ನೋಡಬೇಕಾ? ಈ ವಿಡಿಯೋ ನೋಡಿ

ಶಿವಣ್ಣನ ಡ್ಯಾನ್ಸ್ ಲೈವ್ ಆಗಿ ನೋಡಬೇಕಾ? ಈ ವಿಡಿಯೋ ನೋಡಿ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಒಬ್ಬ ಎನರ್ಜಿಟಿಕ್ ನಟ ಮಾತ್ರವಲ್ಲದೆ, ಉತ್ತಮ ಡ್ಯಾನ್ಸರ್ ಅನ್ನೋದು ನಿಮಗೆಲ್ಲರಿಗೂ ಗೊತ್ತೇ ಇದೆ. ಈಗಲೂ 25ರ ಹರೆಯದ ಯುವಕರನ್ನು ನಾಚಿಸುವಂತೆ ಸಿನಿಮಾಗಳಲ್ಲಿ ನಟಿಸುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲೂ ಅಭಿಮಾನಿಗಳಿದ್ದಾರೆ.

ಇನ್ನು ಇತ್ತೀಚೆಗೆ ಹೈದ್ರಾಬಾದ್ ನಲ್ಲಿ ನಡೆದ ಐಐಎಫ್ಎ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಶಿವಣ್ಣ ಅವರು ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿ ನೆರೆದಿದ್ದವರನ್ನು ನಿಬ್ಬೆರಗಾಗುವಂತೆ ಮಾಡಿದ್ದಾರೆ.[ಚಿತ್ರಗಳು: 'ಮಜಾ ಟಾಕೀಸ್'ನಲ್ಲಿ ಮಸ್ತ್ ಮಜಾ ಮಾಡಿದ ಶಿವಣ್ಣ]

Watch Shiva Rajkumar Live Dance Performance at IIFA Utsavam

ಅಂದಹಾಗೆ ಶಿವಣ್ಣ ಅವರು ಚೆನ್ನೈನಲ್ಲಿರುವಾಗ ಕೂಚುಪುಡಿ ನೃತ್ಯಭ್ಯಾಸ ಮಾಡಿದ್ದರಂತೆ, ಜೊತೆಗೆ ಶಿವಣ್ಣ ಅವರ ಸಹೋದರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಒಬ್ಬ ಉತ್ತಮ ನೃತ್ಯಪಟು ಆಗಿರುವುದರಿಂದ ಸಾಮಾನ್ಯವಾಗಿ ಶಿವಣ್ಣ ಅವರು ನೃತ್ಯವನ್ನು ತಮ್ಮೊಳಗೆ ಮೈಗೂಡಿಸಿಕೊಂಡಿದ್ದಾರೆ.

ಸಿನಿಮಾದಲ್ಲಿ ಶಿವಣ್ಣ ಅವರು ಡ್ಯಾನ್ಸ್ ಮಾಡಿರೋದನ್ನ ನೀವು ಎಲ್ಲರೂ ನೋಡಿರುತ್ತೀರಿ. ಆದರೆ ಅವರ ಲೈವ್ ಡ್ಯಾನ್ಸ್ ಪರ್ಫಾಮೆನ್ಸ್ ನೀವು ನೋಡಿದ್ದೀರಾ?, ಇಲ್ವಾ ಹಾಗಿದ್ರೆ ಈ ವಿಡಿಯೋ ನೋಡಿ.[ಚಿತ್ರಗಳು: ಐಐಎಫ್ಎ ಪ್ರಶಸ್ತಿ ಸಮಾರಂಭದಲ್ಲಿ ರಂಗೇರಿದ 'ರಂಗಿತರಂಗ']

ಹೈದ್ರಾಬಾದ್ ನಲ್ಲಿ ನಡೆದ ಐಐಎಫ್ಎ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಅವರ ಡ್ಯಾನ್ಸ್ ಪ್ರಾಕ್ಟೀಸ್ ಮಾಡುವ ವಿಡಿಯೋದ ಝಲಕ್ ಇಲ್ಲಿದೆ ನೋಡಿ..

Watch Shiva Rajkumar Live Dance Performance at IIFA Utsavam
    English summary
    Watch Shiva Rajkumar Live Dance Performance at IIFA Utsavam - Behind The Scenes - IIFA Utsavam 2016.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada