ವಿಡಿಯೋ: ಶಿವಣ್ಣನ 'ಲೀಡರ್' ಟೀಸರ್, ಸಖತ್ ಮಾಸ್ ಗುರು!
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ 'ಲೀಡರ್' ಚಿತ್ರದ ಟೀಸರ್ ರಿಲೀಸ್ ಆಗಿದೆ. ಸಹನಾ ಮೂರ್ತಿ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಮತ್ತೆ ಮಾಸ್ ಸ್ಟೈಲ್ ನಲ್ಲಿ ಎಂಟ್ರಿ ಕೊಡುತ್ತಿದ್ದು, ಟೀಸರ್ ನಲ್ಲಿ ಸಿಂಹದ ಮರಿ ಘರ್ಜಿಸಿದೆ.['ಲೀಡರ್' ಚಿತ್ರದಲ್ಲೂ ಶಿವರಾಜ್ ಕುಮಾರ್ 'ಲಾಂಗ್' ಬಿಟ್ಟಿಲ್ಲ.!]
ಬರಿ ಪೋಸ್ಟರ್ ಗಳಿಂದ ಸಾಕಷ್ಟು ಕುತೂಹಲ ಹೆಚ್ಚಿಸಿದ್ದ 'ಲೀಡರ್', ಈಗ ಟೀಸರ್ ಮೂಲಕ ಮತ್ತೆ ಅಬ್ಬರಿಸಿದೆ. ಶಿವಣ್ಣನ ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚೇನೂ ಬಿಟ್ಟು ಕೊಟ್ಟಿಲ್ಲ. ಆದ್ರೆ, ಚಿತ್ರದ ಫಸ್ಟ್ ಲುಕ್ ಹಾಗೂ ಟೀಸರ್ ಗಮನಿಸಿದ್ರೆ, ಮತ್ತೆ ಅಂಡರ್ ವರ್ಲ್ಡ್ ಕಡೆ ಮುಖ ಮಾಡಿದ್ದಾರ ಎಂಬ ಕುತೂಹಲ ಕಾಡುತ್ತಿದೆ. ಯಾಕಂದ್ರೆ, 'ಲೀಡರ್' ಚಿತ್ರದಲ್ಲಿ ಶಿವಣ್ಣ, ಗನ್-ಲಾಂಗ್ ಗಳಿಗೆ ಕೆಲಸ ಕೊಟ್ಟಿದ್ದಾರೆ.

ಇನ್ನೂ 'ಲೀಡರ್' ಚಿತ್ರದಲ್ಲಿ ದೊಡ್ಡ ಕಲಾವಿದರ ಬಳಗವಿದೆ. ಶಿವರಾಜ್ ಕುಮಾರ್ ಜೊತೆಯಲ್ಲಿ ನಟ ವಿಜಯ್ ರಾಘವೇಂದ್ರ, ಗುರು ಜಗ್ಗೇಶ್, ವಂಶಿ ಕೃಷ್ಣ ಹಾಗೂ ಲೂಸ್ ಮಾದ ಯೋಗೇಶ್ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. 'ಪ್ರಣೀತಾ ಸುಭಾಶ್' ನಾಯಕಿಯಾಗಿದ್ದು, ಶ್ರೀನಗರ ಕಿಟ್ಟಿ-ಭಾವನಾ ದಂಪತಿಯ ಪುತ್ರಿ ಪರಿಣಿತಾ, ಶಿವಣ್ಣನ ಮಗಳ ಪಾತ್ರ ನಿರ್ವಹಿಸುತ್ತಿದ್ದಾರೆ.['ಲೀಡರ್' ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ]
'ಲೀಡರ್' ಚಿತ್ರಕ್ಕೆ 'ರೋಸ್' ಖ್ಯಾತಿಯ ನಿರ್ದೇಶಕ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಾರ್ದಿಕ್ ತರುಣ್ ಕಂಬೈನ್ಸ್ ಲಾಂಚನದಲ್ಲಿ ತರುಣ್ ಶಿವಪ್ಪ ಹಾಗೂ ಹಾರ್ದಿಕ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಮತ್ತು ಗುರು ಪ್ರಶಾಂತ್ ಛಾಯಾಗ್ರಹಣವಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಲೀಡರ್ ಚಿತ್ರತಂಡ, ಭರದಿಂದ ಶೂಟಿಂಗ್ ಮಾಡುತ್ತಿದೆ.
ಶಿವರಾಜ್ ಕುಮಾರ್ ಅಭಿನಯದ 'ಲೀಡರ್' ಚಿತ್ರದ ಟೀಸರ್ ಇಲ್ಲಿದೆ ನೋಡಿ


Click it and Unblock the Notifications











