»   » ಶಿವರಾಜ್ ಕುಮಾರ್ ಮಗಳ ಅದ್ದೂರಿ ರಿಸೆಪ್ಷನ್ ನೋಡಿ

ಶಿವರಾಜ್ ಕುಮಾರ್ ಮಗಳ ಅದ್ದೂರಿ ರಿಸೆಪ್ಷನ್ ನೋಡಿ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪುತ್ರಿ ಡಾ.ನಿರುಪಮ ಅವರ ವಿವಾಹ ಮಹೋತ್ಸವ ಇಂದು (ಆಗಸ್ಟ್ 31) ಬೆಳಗ್ಗೆ ಅದ್ದೂರಿಯಾಗಿ ನೆರವೇರಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಡಾ.ನಿರುಪಮ-ಡಾ.ದಿಲೀಪ್ ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ. ['ದೊಡ್ಮನೆ ಅಳಿಯ' ದಿಲೀಪ್ ಗೆ ವೈಭವದ ವರಪೂಜೆ]

ನವ ವಧು-ವರರಿಗೆ ಶುಭ ಕೋರುವುದಕ್ಕೆ ಮುಹೂರ್ತ ಸಮಾರಂಭಕ್ಕೆ ಟಾಲಿವುಡ್, ಕಾಲಿವುಡ್ ಮತ್ತು ಸ್ಯಾಂಡಲ್ ವುಡ್ ಅಂಗಳದಿಂದ ಅನೇಕ ಸೆಲೆಬ್ರಿಟಿಗಳು ಹಾಜರಾಗಿದ್ದರು. [ಡಾ.ಶಿವರಾಜ್ ಕುಮಾರ್ ಅಳಿಯ ಡಾ.ದಿಲೀಪ್ ಕುರಿತು...]

shivarajkumar

ಈಗ ಎಲ್ಲಾ ಅಭಿಮಾನಿಗಳು ಕಾಯುತ್ತಿದ್ದ ಘಳಿಗೆ ಬಂದೇ ಬಿಟ್ಟಿದೆ. ಡಾ.ನಿರುಪಮ-ಡಾ.ದಿಲೀಪ್ ಅವರ ಆರತಕ್ಷತೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯುತ್ತಿದೆ. [ದೊಡ್ಮನೆ ಮೊಮ್ಮಗಳ ಮದುವೆ ಸಂಭ್ರಮದ ಚಿತ್ರಗಳು]

ರಿಸೆಪ್ಷನ್ ಗಾಗಿ ಗ್ರ್ಯಾಂಡ್ ಸೆಟ್ ತಯಾರಾಗಿದ್ದು, ವಿದೇಶಗಳಿಂದ ಆಮದು ಮಾಡಿಕೊಂಡಿರುವ ಹೂವುಗಳಿಂದ ವೇದಿಕೆ ಕಂಗೊಳಿಸುತ್ತಿದೆ. ತಿಳಿ ಕೆಂಪು ಬಣ್ಣದ ರೇಶ್ಮೆ ಸೀರೆಯಲ್ಲಿ ಡಾ.ನಿರುಪಮ ಮಿಂಚುತ್ತಿದ್ದರೆ, ವರ ಡಾ.ದಿಲೀಪ್ ಸೂಟ್ ತೊಟ್ಟಿದ್ದಾರೆ. [ದೊಡ್ಮನೆ ಮೊಮ್ಮಗಳಿಗೆ ಬಳೆ ತೊಡಿಸುವ ಶಾಸ್ತ್ರದ ಚಿತ್ರಗಳು]

ಕೆಂಪು ಬಣ್ಣದ ಸೂಟ್ ತೊಟ್ಟು ಶಿವರಾಜ್ ಕುಮಾರ್ ಸಂಭ್ರಮದಿಂದ ಓಡಾಡುತ್ತಿದ್ದಾರೆ. ಆರತಕ್ಷತೆಯಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ, ನಿರ್ದೇಶಕ ಎಸ್.ಎಸ್.ರಾಜಮೌಳಿ, ಮಾಜಿ ಮುಖ್ಯಮಂತ್ರಿಗಳಾದ ಧರಂ ಸಿಂಗ್, ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿ, ವಧು-ವರರಿಗೆ ಶುಭಕೋರಿದರು. ಡಾ.ನಿರುಪಮ ವೆಡ್ಸ್ ಡಾ.ದಿಲೀಪ್ ಅವರ ರಿಸೆಪ್ಷನ್ ನೇರ ಪ್ರಸಾರವನ್ನ shivannamagalamaduve.com ಕಲ್ಪಿಸಿದೆ.

ಈಗಾಗಲೇ ಬೆಳಗ್ಗೆ ನಡೆದ ಮುಹೂರ್ತವನ್ನ ನೀವು ಇದೇ ಪುಟದಲ್ಲಿ ಕಣ್ತುಂಬಿಕೊಂಡಿದ್ದೀರಾ. ಈಗಲೂ ಆರತಕ್ಷತೆಯ ನೇರಪ್ರಸಾರವನ್ನ ಇಲ್ಲೇ ವೀಕ್ಷಿಸಿ........

Live: Shivanna Magala Maduve
    English summary
    Kannada Actor Shivarajkumar Daughter Dr.Nirupama has tied knot with Dr.Dileep today (August 31st) in Palace Grounds, Bengaluru. Watch Nirupama-Dileep wedding reception live.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada