»   » ಮಮತೆಯ ಹುಡುಗನ 'ಕಹಿ'ಯಾದ ಚಿತ್ರದ ಟ್ರೈಲರ್ ನೋಡಿ

ಮಮತೆಯ ಹುಡುಗನ 'ಕಹಿ'ಯಾದ ಚಿತ್ರದ ಟ್ರೈಲರ್ ನೋಡಿ

Posted By:
Subscribe to Filmibeat Kannada

'ಮದುವೆಯ ಮಮತೆಯ ಕರೆಯೋಲೆ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಸುಂದರಾಂಗ ನಟ ಸೂರಜ್ ಗೌಡ, ಇದೀಗ 'ಕಹಿ' ಎಂಬ ಮಗದೊಂದು ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.

ವಿಭಿನ್ನ ಟೈಟಲ್, ವಿಭಿನ್ನ ಪೋಸ್ಟರ್ಸ್ ಮತ್ತು ವಿಭಿನ್ನ ಟ್ರೈಲರ್ ಮೂಲಕ 'ಕಹಿ' ಸಿನಿಮಾ ಸಾಕಷ್ಟು ಕುತೂಹಲ ಮೂಡಿಸುತ್ತಿದೆ. ಎಲ್ಲಾ ಹೊಸಬರೇ ಸೇರಿಕೊಂಡು ಈ ಸಿನಿಮಾ ಮಾಡಿದ್ದಾರೆ ಅನ್ನೋದು ಇನ್ನೊಂದು ವಿಶೇಷ.


Watch Kannada cinema 'Kahi' official Trailer

ಸಾಹಿತ್ಯ ಬರಹಗಾರ ಕವಿರಾಜ್ ನಿರ್ದೇಶನದ 'ಮದುವೆಯ ಮಮತೆಯ ಕರೆಯೋಲೆ' ಚಿತ್ರದಲ್ಲಿ ನಟಿ ಅಮೂಲ್ಯ ಅವರ ಜೊತೆ ನಾಯಕನಾಗಿ ಮಿಂಚಿ, ಭರವಸೆ ಮೂಡಿಸಿದ್ದ ಸೂರಜ್ ಗೌಡ ಅವರು 'ಕಹಿ' ಸಿನಿಮಾದಲ್ಲಿ ಇನ್ನಷ್ಟು ವಿಭಿನ್ನವಾಗಿ ಮಿಂಚಿದ್ದಾರೆ.[ವಿಮರ್ಶೆ: ಕವಿರಾಜರ ಕಲ್ಪನೆಯ ಮದುವೆ ಹೇಗಿದೆ ಗೊತ್ತಾ?]


Watch Kannada cinema 'Kahi' official Trailer

ಸದ್ಯಕ್ಕೆ ಬಿಡುಗಡೆ ಆಗಿರುವ 'ಕಹಿ' ಚಿತ್ರದ ಟ್ರೈ;ಲರ್ ತುಂಬಾನೇ ಕುತೂಹಲ ಮೂಡಿಸುತ್ತಿದೆ. 'ಅಕಿರ' ಚಿತ್ರದಲ್ಲಿ ನಟಿಸಿದ್ದ ನಟಿ ಕೃಷಿ ತಾಪಂಡ ಅವರು 'ಕಹಿ' ಚಿತ್ರದಲ್ಲಿ ಸೂರಜ್ ಅವರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.


Watch Kannada cinema 'Kahi' official Trailer

ಬಾಯಿಲ್ಡ್ ಬೀನ್ಸ್ ಪಿಕ್ಚರ್ಸ್ ಪ್ರೊಡಕ್ಷನ್ಸ್ ಅರ್ಪಿಸುವ 'ಕಹಿ' ಚಿತ್ರಕ್ಕೆ ಅರವಿಂದ್ ಶಾಸ್ತ್ರಿ ಅವರು ನಿರ್ದೇಶನ ಮಾಡಿದ್ದಾರೆ. 'ರಂಗಿತರಂಗ' ಚಿತ್ರದ ನಂತರ ಮತ್ತೊಂದು ವಿಭಿನ್ನ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದು, ಟ್ರೈಲರ್ ನೋಡುತ್ತಿದ್ದರೆ ಸಿನಿಮಾ ಗೆಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.


Watch Kannada cinema 'Kahi' official Trailer

ಸದ್ಯಕ್ಕೆ ಬಿಡುಗಡೆ ಆಗಿರುವ 'ಕಹಿ' ಚಿತ್ರದ ಬಿಡುಗಡೆ ಆಗಿರುವ ಟ್ರೈಲರ್ ಒಮ್ಮೆ ನೋಡಿ ಬಿಡಿ....


English summary
Watch Kannada movie 'Kahi' official Trailer. Kannada Actor Suraj Gowda, Kannada Actress Krishi Thapanda in the lead role. The movie is directed by Arvind Sastry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada