Don't Miss!
- News
Breaking: ಭಯೋತ್ಪಾದಕ ದಾಳಿ: ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರು ಹುತಾತ್ಮ
- Automobiles
ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ
- Technology
ರೈಲ್ವೆ 'ಗ್ರೂಪ್ ಡಿ' ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ 'ವಿ ಟೆಲಿಕಾಂ'ನಿಂದ ಸಿಹಿಸುದ್ದಿ!
- Sports
ಆ ಇಬ್ಬರು ಸ್ಟಾರ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಜಯವರ್ಧನೆ ಕಳವಳ
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಮೇಷ, ಮೀನ ರಾಶಿಯವರು ವಾದಗಳಿಂದ ದೂರವಿರಿ
- Finance
ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ: ಬುಧವಾರ ವಹಿವಾಟಿನ ಅಂತ್ಯ ಹೀಗಿದೆ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಪ್ರೀತಿಯ ಮುಂದೆ ನಾನು ಹನಿ, ಎದುರಾಳಿ ಮುಂದೆ ನಾನು 'ಪುಲಿ'
ಕನ್ನಡದ 'ರನ್ನ' ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್, ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ 'ಈಗ' ಹಾಗು ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರ 'ಬಾಹುಬಲಿ' ಯಲ್ಲಿ ಕಾಣಿಸಿಕೊಂಡಿದ್ದು, ನಿಮಗೆ ಗೊತ್ತೆ ಇದೆ.
ಅಂದಹಾಗೆ ಕಿಚ್ಚ ಸುದೀಪ್ ಕಾಲಿವುಡ್ ನಲ್ಲಿ ತಮಿಳು ಸ್ಟಾರ್ 'ಇಳೆಯದಳಪತಿ' ವಿಜಯ್ ಜೊತೆ 'ಪುಲಿ' ಚಿತ್ರದಲ್ಲಿ ನಟಿಸುತ್ತಿರುವ ವಿಚಾರವನ್ನು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ.
ಇದೀಗ ಐತಿಹಾಸಿಕ ಆಧಾರಿತವಾದ ಈ ವರ್ಷದ ಬಹುನಿರೀಕ್ಷಿತ ತಮಿಳು ಚಿತ್ರ 'ಪುಲಿ' ಯಲ್ಲಿ ನಮ್ಮ ಕನ್ನಡದ ಕಿಚ್ಚ ಸುದೀಪ್ ಅವರಿಗೂ ಮುಖ್ಯ ಪಾತ್ರವಿದೆ. ಎಸ್ ಎಸ್ ರಾಜಮೌಳಿ ಅವರ 'ಈಗ' ಚಿತ್ರದ ನಂತರ ಇದೀಗ ಮತ್ತೊಮ್ಮೆ 'ಪುಲಿ' ಮೂಲಕ ವಿಲನ್ ರೋಲ್ ನಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ. [ತಮಿಳು 'ಪುಲಿ' ಬಾಲ ಹಿಡಿದು ನಿಂತ ಕಲಾ ಸಾಮ್ರಾಟ್]
ಬಾಲಿವುಡ್ ಬೆಡಗಿ ಶ್ರೀದೇವಿ, ಇಳೆಯದಳಪತಿ ವಿಜಯ್, ಕಿಚ್ಚ ಸುದೀಪ್, ಗ್ಲಾಮರ್ ಬೊಂಬೆ ಶ್ರುತಿ ಹಾಸನ್, ಹನ್ಸಿಕಾ ಮೋಟ್ವಾನಿ ಮೊದಲಾದವರು ಲೀಡ್ ರೋಲ್ ನಲ್ಲಿ ಮಿಂಚಿರುವ 'ಪುಲಿ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ.
ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಖಡಕ್ ಲುಕ್ ಹಾಗೂ ಭರ್ಜರಿ ವಿಲನ್ ಪಾತ್ರದ ಝಲಕ್ ಜೊತೆಗೆ ವಿಜಯ್ ಪವರ್ ಫುಲ್ ಡೈಲಾಗ್ ನ ಟ್ರೈಲರ್ ನ ಫಿಲ್ಮಿಬೀಟ್ ನಿಮಗಾಗಿ ತಂದಿದೆ. ನೀವೇ ನೋಡಿ....
ಎಸ್.ಕೆ.ಟಿ ಸ್ಟುಡಿಯೋ ಅರ್ಪಿಸುವ 'ಪುಲಿ' ಚಿತ್ರದಲ್ಲಿ 'ಬಾಹುಬಲಿ' ಚಿತ್ರದಂತೆ ಐತಿಹಾಸಿಕವಾಗಿ ಅದ್ಧೂರಿ ಮೇಕಿಂಗ್ ಮಾಡಿರುವುದು ಟ್ರೈಲರ್ ನಲ್ಲಿ ಹೈಲೈಟ್ ಆಗುತ್ತಿದೆ.[ವಿಜಯ್ ಹುಟ್ಟುಹಬ್ಬಕ್ಕೆ 'ಪುಲಿ' ಟೀಸರ್ ಗಿಫ್ಟ್]
ಸುಮಾರು ಎರಡು ದಶಕಗಳ ನಂತರ ಶ್ರೀದೇವಿ ಅವರು ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಜೊತೆಗೆ ಸುರ ಸುಂದರಿ ಶ್ರೀದೇವಿ ಅವರು 'ಪುಲಿ' ಚಿತ್ರದಲ್ಲಿ ಮಹಾರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಉಡುಗೆ-ತೊಡುಗೆ ಹಾಗೂ ನಟನಾ ಶೈಲಿ ಟ್ರೈಲರ್ ನ ಮತ್ತೊಂದು ಹೈಲೈಟ್.
'ಪಾಸತ್ತ್ ಗ್ ಮುನ್ನಾಡಿದ ನಾ ಪನಿ, ಪಗೈಕ್ ಮುನ್ನಾಡಿ ನಾ 'ಪುಲಿ' ಅನ್ನುವ ಇಳೆಯದಳಪತಿ ಅವರ ಪವರ್ ಫುಲ್ ಡೈಲಾಗ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡೋದು ಗ್ಯಾರಂಟಿ.[ವಾವ್..! ಕಾಲಿವುಡ್ ನಲ್ಲಿ ಸುದೀಪ್ 'ಪುಲಿ' ಆರ್ಭಟ]
ಚಿಂಬುದೇವನ್ ಆಕ್ಷನ್-ಕಟ್ ಹೇಳಿರುವ 'ಪುಲಿ' ಚಿತ್ರದಲ್ಲಿ ಸುಂದರವಾದ ಕಲರ್ ಫುಲ್ ಹಾಡು ಡಾನ್ಸ್ ಜೊತೆಗೆ ಸಖತ್ ಫೈಟ್, ಖಡಕ್ ಲುಕ್, ಪವರ್ ಫುಲ್ ಡೈಲಾಗ್ ಮುಂತಾದವು ಇರುವುದರಿಂದ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಚಿತ್ರಕ್ಕೆ ರಾಕ್ ಸ್ಟಾರ್ ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಶಿಬು ತಮೀನ್ಸ್ ಹಾಗೂ ಪಿ.ಟಿ ಸೆಲ್ವಕುಮಾರ್ ಬಂಡವಾಳ ಹಾಕಿದ್ದಾರೆ.
ಮೊದಲ ನೋಟಕ್ಕೆ ಆಕ್ಷನ್-ಅಡ್ವೆಂಚರ್-ಫ್ಯಾಂಟಸಿ ಸಿನಿಮಾದಂತೆ ಕಾಣುವ 'ಪುಲಿ' ಚಿತ್ರ ಸದ್ಯದಲ್ಲೇ ತೆರೆ ಮೇಲೆ ಅಪ್ಪಳಿಸಲಿದೆ,
ಈಗಾಗಲೇ ಭರ್ಜರಿಯಾಗಿ ಬಿಡುಗಡೆಗೊಂಡ 'ಬಾಹುಬಲಿ' ಚಿತ್ರ ಪ್ರೇಕ್ಷಕರನ್ನು ಕಾಯಿಸಿದಂತೆ 'ಪುಲಿ' ಕೂಡ ಕನ್ನಡ ಹಾಗೂ ತಮಿಳು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ, ಅಂತೂ ಚಿತ್ರ ಬಿಡುಗಡೆಯಾಗುವವರೆಗೂ ಅಭಿಮಾನಿಗಳು ಕಾಯಲೇಬೇಕು.