»   » 'ಅಪ್ಪಂದಿರ ದಿನ'ದ ವಿಶೇಷ: ವಿನಾಯಕ್ ಜೋಷಿ ವಿನೂತನ ಪ್ರಯತ್ನ

'ಅಪ್ಪಂದಿರ ದಿನ'ದ ವಿಶೇಷ: ವಿನಾಯಕ್ ಜೋಷಿ ವಿನೂತನ ಪ್ರಯತ್ನ

Posted By:
Subscribe to Filmibeat Kannada

ಅಪ್ಪ ಅಂದ್ರೆ ಆಕಾಶ ಅಂತಾರೆ. ಕೆಲವೊಬ್ಬರಿಗೆ ಅಪ್ಪ ಅಂದ್ರೆ ಪ್ರಾಣ ಆಗಿರುತ್ತೆ. ಇನ್ನೂ ಕೆಲವರು ಅಪ್ಪನನ್ನು ಬರೀ ಅಪ್ಪಂದಿರ ದಿನದಂದು ಮಾತ್ರ ನೆನಪಿಸಿಕೊಳ್ಳುತ್ತಾರೆ. ಅಲ್ಲದೇ ಕೆಲವರಿಗೆ ಅಪ್ಪನ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಅದನ್ನು ತೋರ್ಪಡಿಸಲು ತೋಚದೆ ಮನಸ್ಸಲ್ಲೇ ಇಟ್ಟುಕೊಂಡಿರುವವರು ಇರುತ್ತಾರೆ.

ಪ್ರತಿಯೊಬ್ಬರು ಅಪ್ಪಂದಿರಿಗೆ ತಮ್ಮ ಜೀವನದಲ್ಲಿ ಮಹತ್ತರ ಸ್ಥಾನ ಕೊಟ್ಟಿರುತ್ತಾರೆ. ಇದೀಗ ಅಪ್ಪನ ಪ್ರೀತಿಯನ್ನು ಸಾರುವ ಹಾಗೂ ಅಪ್ಪನ ಮಹತ್ವವನ್ನು ತಿಳಿಸುವ ವಿಭಿನ್ನ ಪ್ರಯತ್ನ ಮಾಡಿದ್ದಾರೆ ಕನ್ನಡ ಚಿತ್ರರಂಗದ ಚಿರಪರಿಚಿತ ಪ್ರತಿಭೆ ನಟ ವಿನಾಯಕ್ ಜೋಷಿ ಅವರು.[ನಿನ್ನಂಥ ಅಪ್ಪ ಇಲ್ಲ...ಬಾಳಲ್ಲಿ ನೀನೇ ಎಲ್ಲಾ...]

Watch 'Thank You Appa' Kannada Audio film by Actor Vinayak Joshi

ಹೌದು 'ಥ್ಯಾಂಕ್ಯೂ ಅಪ್ಪ' ಅನ್ನೋ ಮೊಟ್ಟ ಮೊದಲ ಆಡಿಯೋ ಫಿಲ್ಮ್ ಒಂದನ್ನು ತಯಾರು ಮಾಡಿರುವ ನಟ ವಿನಾಯಕ್ ಜೋಷಿ 'ಅಪ್ಪಂದಿರ ದಿನ'ವಾದ ಜೂನ್ 19, ರಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಎಲ್ಲಾ ಅಪ್ಪಂದಿರಿಗೆ ಗೌರವ ಸೂಚಕವಾಗಿ ಈ ವಿಭಿನ್ನ ಪ್ರಯತ್ನ ಪ್ರಯತ್ನ ಮಾಡಿದ್ದಾಗಿ ನಟ ವಿನಾಯಕ್ ಜೋಷಿ ಅವರು ತಿಳಿಸಿದ್ದು, ಈ ವಿನೂತನ ಪ್ರಯತ್ನಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡ ಭೇಷ್ ಎಂದಿದ್ದಾರೆ.[ಅಪ್ಪನ್ನ ಒಂದೇ ದಿನ ನೆನೆಯುವ ದೊಡ್ಡು ಸ್ಟುಪಿಡ್ಡುಗಳು!]

Watch 'Thank You Appa' Kannada Audio film by Actor Vinayak Joshi

ಕಿರಣ್ ರವೀಂದ್ರನಾಥ್ ಸಂಗೀತ ನೀಡಿರೋ ಈ ಆಡಿಯೋ ಮೂವಿಯಲ್ಲಿ ರಾಘವೇಂದ್ರ ಹೆಗಡೆ ಅವರ ಮರಳು ಕಲೆಯ ಕೈ ಚಳಕವಿದೆ. ವಿನಾಯಕ್ ಜೋಷಿ ಅವರು ಅಕಾಲಿಕವಾಗಿ ತಮ್ಮ ಮುದ್ದು ಅಪ್ಪನನ್ನು ಕಳೆದುಕೊಂಡಿದ್ದು, ಈ ಕಿರುಚಿತ್ರದ ಮೂಲಕ ಎಲ್ಲರ ಮನಮುಟ್ಟುವಂತೆ ತಮ್ಮ ತಂದೆಗೆ 'THANK YOU' ಹೇಳಿದ್ದಾರೆ.[ಅಪ್ಪ ನೀನೆ ನನ್ನ ಹೀರೋ: ಹ್ಯಾಪಿ ಫಾದರ್ಸ್ ಡೇ]

Watch 'Thank You Appa' Kannada Audio film by Actor Vinayak Joshi

'ಬಿಗ್ ಬಾಸ್' ಖ್ಯಾತಿಯ ನಟ ವಿನಾಯಕ್ ಜೋಷಿ ಅವರ ವಿಭಿನ್ನ ಪ್ರಯತ್ನವನ್ನು ನೀವೂ ಈ ವಿಡಿಯೋ ಮೂಲಕ ನೋಡಿ ಕಣ್ತುಂಬಿಕೊಳ್ಳಿ....

English summary
'Thank You Appa' Kannada Audio film by Actor Vinayak Joshi. Watch Video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada