»   » ದುನಿಯಾ ವಿಜಿ ಅಪ್ಪ, ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಂ ಓಪನರ್!

ದುನಿಯಾ ವಿಜಿ ಅಪ್ಪ, ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಂ ಓಪನರ್!

Posted By:
Subscribe to Filmibeat Kannada

ಕರಿಚಿರತೆ ದುನಿಯಾ ವಿಜಿ 'ಜಾಕ್ಸನ್' ಚಿತ್ರದಲ್ಲಿ ಮೈಕೇಲ್ ಜಾಕ್ಸನ್ ಅವತಾರವೆತ್ತಿರುವುದನ್ನ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ. ಮೊಟ್ಟ ಮೊದಲ ಬಾರಿಗೆ ಸೂಪರ್ ಸ್ಟೈಲಿಶ್ ಆಗಿ 'ಡ್ಯಾನ್ಸಿಂಗ್ ಸೆನ್ನೇಷನ್' ರೂಪ ತಾಳಿರುವ ಬ್ಲಾಕ್ ಕೋಬ್ರಾ ಹೇಗೆ ಕಾಣ್ಬಹುದು ಅನ್ನುವುದರ ಝಲಕ್ ನೋಡಿದ್ರಿ. ಇದೀಗ ಆ ಹಾಡನ್ನ ಕಣ್ಣಾರೆ ಕಂಡು, ಕಿವಿಯಾರೆ ಕೇಳುವ ಸಮಯ ಬಂದಿದೆ.

'ಮೈಕೇಲ್ ಜಾಕ್ಸನ್' ಗೆಟಪ್ ತೊಟ್ಟು, ಅವರ ಟ್ರೇಡ್ ಮಾರ್ಕ್ 'ಮೂನ್ ವಾಕ್' ಮಾಡಿರುವ ದುನಿಯಾ ವಿಜಿ, ಬರೀ ಹೊಡಿಬಡಿಯೋಕೆ ಮಾತ್ರ ಲಾಯಕ್ಕಲ್ಲ, ಡ್ಯಾನ್ಸಿಂಗ್ ಗೂ ಸೈ ಅಂತ ''ಅವನು ಮೈಕೇಲು ಜಾಕ್ಸನ್ನು...'' ಹಾಡಿನ ಮೂಲಕ ನಿರೂಪಿಸಿದ್ದಾರೆ.

''ನಾನು ಖರಾಬು ಲೋಕಲ್ಲು...'' ಅಂತ ಸೈಕಲ್ ಏರುವ ದುನಿಯಾ ವಿಜಿ, ಬಗೆಬಗೆಯ ಗೆಟಪ್ ನಲ್ಲಿ ಭಿನ್ನವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಒಮ್ಮೆ ರಶಿಯನ್ ಹುಡುಗೀಯರ ಜೊತೆ ರೋಮ್ಯಾನ್ಸ್ ಮಾಡಿದ್ರೆ, ಇನ್ನೊಮ್ಮೆ ಅಪ್ಪಟ ಭಾರತೀಯ ಹೆಣ್ಮಕ್ಕಳ ಜೊತೆ 'ಭರತನಾಟ್ಯ' ಸ್ಟೆಪ್ ಕೂಡ ಹಾಕಿದ್ದಾರೆ.

Jackson

ದುನಿಯಾ ವಿಜಿಗೆ ಇಷ್ಟೆಲ್ಲಾ ಬಿಲ್ಡಪ್ ಸಿಗುವುದಕ್ಕೆ ಕಾರಣ, ಇದು ಜಾಕ್ಸನ್ ಚಿತ್ರದ ಇಂಟ್ರಡಕ್ಷನ್ ಸಾಂಗ್. ದುನಿಯಾ ವಿಜಿಗೆ ಸ್ಪೆಷಲ್ ಎಂಟ್ರಿ ಕೊಡಬೇಕು ಅನ್ನುವ ಕಾರಣಕ್ಕೆ ಯೋಗರಾಜ್ ಭಟ್ರು ಮತ್ತು ದುನಿಯಾ ವಿಜಿ ಪ್ಲಾನ್ ಮಾಡ್ತಿದ್ದಾಗ 'ಮೈಕೇಲ್ ಜಾಕ್ಸನ್' ಕಣ್ಮುಂದೆ ಬಂದಿದ್ದಾರೆ. ಅದರ ಪರಿಣಾಮವೇ ಈ ಹಾಡು. ['ದುನಿಯಾ ವಿಜಿ'ಯ ನಾನಾ ಮುಖಗಳು]

'ಮೈಕೇಲ್ ಜಾಕ್ಸನ್' ನಂತೆ ದುನಿಯಾ ವಿಜಿ ಕಂಗೊಳಿಸಿರುವ ಈ ಹಾಡಿಗೆ ಸಾಹಿತ್ಯ ಬರೆದಿರುವುದು ಯೋಗರಾಜ್ ಭಟ್ರು. ಹೀಗಾಗಿ ಸೈಕಲ್ಲು-ಲೋಕಲ್ಲು ಎಲ್ಲಾ ಇಲ್ಲಿ ಕಾಮನ್ನು! ಇದ್ರ ಮಧ್ಯೆ ವಿಜಿ ಕಾಲೆಳೆಯೋಕೆ ಹೋಗಿರುವ ಭಟ್ರು, ವಿಜಿ ಅಪ್ಪನನ್ನ ವೆಸ್ಟ್ ಇಂಡೀಸ್ ಕ್ರಿಕೆಟ್ ಟೀಂ ಓಪನ್ನಿಂಗ್ ಬ್ಯಾಟ್ಸ್ ಮೆನ್ ಮಾಡಿದ್ದಾರೆ. ಅಲ್ಲದೇ 'ದಯವಿಟ್ಟು ಕನ್ನಡ ಸಿನಿಮಾ ನೋಡಿ' ಅಂತ ವಿಜಿ ಮೂಲಕ ಬೇಡಿಕೊಂಡಿದ್ದಾರೆ.

ಅರ್ಜುನ್ ಜನ್ಯ ಮೂಸಿಕ್ ನೀಡಿರುವ ಪಕ್ಕಾ ಲೋಕಲ್ ಜಾಕ್ಸನ್ ಹವಾ ಹೇಗಿದೆ ಅಂತ ವೀಡಿಯೋದಲ್ಲಿ ನೋಡಿ....

ಅವನು ಮೈಕೇಲು ಜಾಕ್ಸನ್ನು, ನಾನು ಸೈಕಲ್ ಓಡ್ಸೋನು...

ಅವನು ಇಂಟರ್ ನ್ಯಾಷಿನಲ್ಲು, ನಾನು ಖರಾಬು ಲೋಕಲ್ಲು...

ಕತ್ತಲಲ್ಲಿ ನೋಡಬೇಡಿ ದಯವಿಟ್ಟು ನನನ್ನು, ನಾನಂತು ಹಗಲೊತ್ತಲ್ಲೇ ಮಾತ್ರಾನೇ ಕಾಣ್ಸೋನು,

ಒರಿಜಿನಲ್ ಕಪ್ಪು ಕರಿಯ ನಾನೊಬ್ಬನೇ ಅಲ್ವೇನು....ಕರುನಾಡಿಗೆ ನಾನೊಬ್ಬನೇ ಜಾಕ್ಸನ್ನು...

ಜಾಕ್ಸನ್ನು....ಬರೀ ಆಕ್ಷನ್ನು.. (ಫಿಲ್ಮಿಬೀಟ್ ಕನ್ನಡ)

Post by Oneindia Kannada.
English summary
Duniya Vijay's upcoming movie Jackson Title song, 'Avanu Michaelu Jacksonnu...'' is out. The song is very stylish and Duniya Vijay's performance is better than ever before. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada