»   » ಭಟ್ರಿಗೆ ನೀಲಿ ರಾಣಿ ಸನ್ನಿ ಲಿಯೋನೇ ಬೆಸ್ಟು ಕಣ್ರೀ!

ಭಟ್ರಿಗೆ ನೀಲಿ ರಾಣಿ ಸನ್ನಿ ಲಿಯೋನೇ ಬೆಸ್ಟು ಕಣ್ರೀ!

Posted By:
Subscribe to Filmibeat Kannada

ಖಾಲಿ ಬುಡ್ ಬುಡ್ಕೆ ಆದರೂ ಸರಿ, ಆ ಸದ್ದಿಗೆ ಎಲ್ಲರೂ ಒಮ್ಮೆ ತಿರುಗಿ ನೋಡ್ಬೇಕು ಅನ್ನುವ ಜಾಯಮಾನ ನಮ್ಮ ಯೋಗರಾಜ್ ಭಟ್ರದ್ದು. ಕತ್ತಲಲ್ಲಿ ಕರಡಿಗೆ ಜಾಮೂನು ತಿನಿಸುವ ಭಟ್ರು 'ಯಬಡ ತಬಡ' ಸಾಹಿತ್ಯದಿಂದಲೇ ಅಲ್ವೇ ಫೇಮಸ್ ಆಗಿದ್ದು.

ಇಂತಹ 'ಮಾಡರ್ನ್ ಸಾಹಿತ್ಯ ಬ್ರಹ್ಮ'ನಿಗೆ ಇದ್ದಕ್ಕಿದ್ದ ಹಾಗೆ ಸನ್ನಿ ಲಿಯೋನ್ ಮೇಲೆ ಮನಸ್ಸಾಗ್ಬಿಟಿದೆ. ಯಾರ್ ಏನೇ ಅಂದ್ರೂ, ''ಸನ್ನಿ ಲಿಯೋನ್ನೇ ಬೆಸ್ಟು ಬಿಡ್ರೀ'' ಅಂತಿದ್ದಾರೆ ಭಟ್ರು. ಸನ್ನಿ ಲಿಯೋನ್ ನ ಹಾಡಿ ಹೊಗಳುವುದರ ಜೊತೆಗೆ ದಿನಕ್ಕೊಂದು ಬ್ರೇಕಿಂಗ್ ನ್ಯೂಸ್ ಕೊಡ್ತಿದ್ದ ನಟಿ ''ಮೈತ್ರಿಯಾ ಗೌಡ ಯಾಕ್ಹಿಂಗ್ ಆಗ್ಬುಟ್ರು?'' ಅಂತ ಭಟ್ರು ಗೊಳೋ ಅಂತಾವ್ರೆ.

Yogaraj Bhat1

ಅಷ್ಟಕ್ಕೂ ಭಟ್ರು ಸನ್ನಿ, ಮೈತ್ರಿಯಾ ಬಗ್ಗೆ ಕನವರಿಸಿದ್ದಕ್ಕೆ ಕಾರಣ, ''2014 ರ ಫ್ಲ್ಯಾಶ್ ಬ್ಯಾಕ್ ಹಾಡು''. ಹೊಸ ವರ್ಷದ ಸಂಭ್ರಮಕ್ಕೆ ಚಾಲನೆ ಕೊಡುವ ಮುನ್ನ ಹಳೆಯದ್ದನ್ನೆಲ್ಲಾ ಕೆದಕಿರುವ ಭಟ್ರು 2014ರಲ್ಲಿ ಏನೇನಾಯ್ತು ಅನ್ನೋದನ್ನ ''2015 ನ್ಯೂ ಇಯರ್ ಸಾಂಗ್'' ಅನ್ನುವ ಒಂದೇ ಹಾಡಲ್ಲಿ ಹೇಳಿ ಮುಗಿಸಿದ್ದಾರೆ.

ಯಡ್ಡಿ ಅರ್ಕಾವತಿ ಪ್ರಕರಣ, ಸಿದ್ದು ಶಾದಿ ಭಾಗ್ಯ, ಜಯಲಲಿತಾ ಜೈಲಿಗೋಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ರೇಪ್ ಆಗಿದ್ದು ಸೇರಿದ್ದಂತೆ ಇಡೀ ವರ್ಷ ಸದ್ದು ಮಾಡಿದ ಎಲ್ಲಾ ಸುದ್ದಿಗಳನ್ನಿಟ್ಟುಕೊಂಡು ಮಜವಾದ ಹಾಡೊಂದನ್ನ ರೆಡಿಮಾಡಿದ್ದಾರೆ ಯೋಗರಾಜ್ ಭಟ್.

Yogaraj Bhat2

ನಿತ್ಯಾನಂದ ಮತ್ತು ರಾಘವೇಶ್ವರ ಶ್ರೀಗಳ ಕೇಸು ಮತ್ತು ಇತ್ತೀಚಿನ ಚರ್ಚ್ ಸ್ಟ್ರೀಟ್ ಬಾಂಬು ಸೇರಿದಂತೆ, ಗಾಂಧಿನಗರದ ಗಲ್ಲಿಗಲ್ಲಿ ಗಾಸಿಪ್ ವರೆಗೂ ಎಲ್ಲಾ ವಿವಾದಗಳು ಭಟ್ರ ಬಾಯಿಂದ ಹೊರಬಂದಿದೆ.

ಅದ್ರಲ್ಲಿ, ''ಎಲ್ರಿಗಿಂತ ಸನ್ನಿನೇ ಬೆಸ್ಟು, ದುನಿಯಾ ವಿಜಿ ಮತ್ತು ಹೆಂಡತಿ ಮಿಲನ ಆಗೋದ್ರು, ಮೈತ್ರಿಯಾ ಗೌಡ ಮಾತ್ರ ಹಿಂಗಾಗ್ಬುಟ್ರು'', ಅಂತ ತಮ್ಮದೇ ಶೈಲಿಯಲ್ಲಿ ಭಟ್ರು ಹಾಡಿರುವ ಹಾಡು ಕೇಳುವುದಕ್ಕೆ ಮಜವಾಗಿದೆ. [ಆಸ್ತ್ರದುಲಯಕೋ ಮಿನಸೋಮಾ ಕಾಯಮಿಕ ಮುನಾಸೋ!]

ಕೇಳ್ರಪ್ಪೋ...ಕೇಳಿ 2014 ಫ್ಲ್ಯಾಶ್ ಬ್ಯಾಕ್ ಹೇಳ್ತೀನಿ ಅಂತ ರೀಮೇಕ್, ಡಬ್ಬಿಂಗ್ ಕ್ಯಾತೆನೂ ತೆಗ್ದು, ''ವರ್ಷದಲ್ಲಿ ಸಿಕ್ಕಿದ್ದು ಎಂಟೇ ಹಿಟ್ಟು, ಮಿಕ್ಕಿದ್ದೆಲ್ಲಾ ಗುಳುಂ ಶಿವಾಯ'', ಅಂತ ನಿರ್ಮಾಪಕರ ಮಂಡೆ ಬಿಸಿಯಾದ ಕಥೆಯನ್ನೂ ಸೂಗಸಾಗಿ ಹೇಳಿದ್ದಾರೆ.

sunny

ಕಳೆದ ವರ್ಷದಿಂದ ವಾಸ್ತು ಪ್ರಕಾರ ಸಿನಿಮಾದಲ್ಲೇ ಬಿಜಿಯಾಗಿರುವ ಭಟ್ರು, ಎಲೆಕ್ಷನ್ ಸಮಯದಲ್ಲೂ ಇಂತದ್ದೇ ಹಾಡು ರಿಲೀಸ್ ಮಾಡಿ ಭರ್ಜರಿ ಪ್ರಚಾರ ಗಿಟ್ಟಿಸಿದ್ದರು. ಇದೀಗ, ಹೊಸ ವರ್ಷ 'ವಾಸ್ತು ಪ್ರಕಾರ' ಹೇಗಿರ್ಬೇಕು ಅಂತ ಭಟ್ರ ಪ್ರಕಾರದಲ್ಲಿರುವ ಹಾಡನ್ನ ಹೊರಬಿಟ್ಟಿದ್ದಾರೆ. [ಭಟ್ಟರ 'ವಾಸ್ತು ಪ್ರಕಾರ' ಸಾಂಗು ಹೆಂಗೈತೆ ಹೇಳ್ರಪಾ]

ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ವಿ.ಹರಿಕೃಷ್ಣ ಮತ್ತು ಯೋಗರಾಜ್ ಭಟ್ರು ಹಾಡಿರುವ ಹಾಡು ಇಲ್ಲಿದೆ. ಕಿವಿ ಕ್ಲೀನ್ ಮಾಡಿಕೊಂಡು ಕೇಳಿ....(ಫಿಲ್ಮಿಬೀಟ್ ಕನ್ನಡ)

English summary
Yogaraj Bhat, known for his unique style of lyrics, has come up with New year-2015 song, which tells the Flash Back of 2014. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada