ವಿಡಿಯೋ ಲೀಕ್: 'ಬೆಲ್ಲಿ' ಬಾಲೆಯರ ಮಧ್ಯೆ ವರ್ಮಾ, ಪುರಿ ಜಗನ್ನಾಥ್

By ಹರಾ

ನಿರ್ದೇಶಕ ರಾಮ್ ಗೋಪಾಲ್ ವರ್ಮಾಗೂ ವಿವಾದಗಳಿಗೂ ಬಿಡಿಸಲಾರದ ನಂಟು. ವಿವಾದಗಳೇ ಇವರನ್ನ ಹುಡುಕಿಕೊಂಡು ಬರುತ್ತೋ, ಇಲ್ಲ ಇವರೇ ವಿವಾದಗಳ ಹಿಂದೆ ಬೀಳುತ್ತಾರೋ ಗೊತ್ತಿಲ್ಲ. ಒಟ್ನಲ್ಲಿ ಒಂದಲ್ಲಾ ಒಂದು ಎಡವಟ್ಟು ಮಾಡಿಕೊಂಡು ವರ್ಮಾ ಸಾಹೇಬ್ರು ಸದಾ ಸುದ್ದಿ ಮಾಡುತ್ತಲೇ ಇರುತ್ತಾರೆ.

ಈಗ ರಾಮ್ ಗೋಪಾಲ್ ವರ್ಮಾ ಹೆಡ್ ಲೈನ್ಸ್ ಮಾಡಿರುವುದು ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಬರ್ತಡೆ ಪಾರ್ಟಿಯಿಂದ. ಎರಡು ದಿನಗಳ ಹಿಂದೆಯಷ್ಟೆ (ಸೆಪ್ಟೆಂಬರ್ 28) ಪುರಿ ಜಗನ್ನಾಥ್ ತಮ್ಮ 49 ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು.

Watch the video: Puri Jagannadh, Ram Gopal Varma enjoy Belly Dance

ಸಿನಿಮಾ ಇಂಡಸ್ಟ್ರಿ ಫ್ರೆಂಡ್ಸ್ ಗಾಗಿ ಪುರಿ ಜಗನ್ನಾಥ್ ಸ್ಪೆಷಲ್ ಪಾರ್ಟಿ ಅರೇಂಜ್ ಮಾಡಿದ್ದರು. ಪಾರ್ಟಿ ಅಂದ್ಮೇಲೆ ಗುಂಡು, ತುಂಡು, ಧಮ್ಮು ಇದ್ದೇ ಇರುತ್ತೆ. ಬರೀ ಇಷ್ಟೆ ಇದ್ದಿದ್ರೆ ಪರ್ವಾಗಿಲ್ಲ. ಪಾರ್ಟಿಯಲ್ಲಿ ವಿದೇಶಿ ಬಾಲೆಯರ ಬೆಲ್ಲಿ ಡ್ಯಾನ್ಸ್ ಕೂಡ ಇತ್ತು. [ಜೂ.NTR-ಪ್ರಿನ್ಸ್ ಮಹೇಶ್ ಮಧ್ಯೆ ಬತ್ತಿಯಿಟ್ಟ ವರ್ಮಾ!]

ಬಳಕುವ ಬಾಲೆಯರ ಮಧ್ಯೆ ಧಮ್ ಹೊಡೆಯುತ್ತಾ ರಾಮ್ ಗೋಪಾಲ್ ಬೆಲ್ಲಿ ಡ್ಯಾನ್ಸ್ ಎಂಜಾಯ್ ಮಾಡಿದರು. ವರ್ಮಾ ಸಾಹೇಬ್ರಿಗೆ ಪುರಿ ಜಗನ್ನಾಥ್ ಕಂಪನಿ ನೀಡಿದರು. ಈ ವಿಡಿಯೋ ಇದೀಗ ಜಗಜ್ಜಾಹೀರಾಗಿದೆ. ಅಷ್ಟೇ ವಿವಾದ ಸೃಷ್ಟಿಸಿದೆ. ತೆಲುಗು ವಾಹಿನಿಗಳು ಇಬ್ಬರು ನಿರ್ದೇಶಕರುಗಳನ್ನ ಟೀಕೆ ಮಾಡುತ್ತಿವೆ. [ವರ್ಮಾ ಸಾಹೇಬ್ರೇ ಇದೆಲ್ಲಾ ನಿಮ್ಗೆ ಬೇಕಾ?]

ರಾಮ್ ಗೋಪಾಲ್ ವರ್ಮಾ ಮತ್ತು ಪುರಿ ಜಗನ್ನಾಥ್ ಎಂಜಾಯ್ ಮಾಡುತ್ತಿರುವ ಬೆಲ್ಲಿ ಡ್ಯಾನ್ಸ್ ವಿಡಿಯೋ ಇಲ್ಲಿದೆ ನೋಡಿ....

Video Courtesy : Sakshi TV

More from Filmibeat

English summary
Director Ram Gopal Varma is in news again. A leaked video from Puri Jagannadh Birthday Party is now going viral on Social Networking sites. RGV and Puri Jagannadh enjoying Belly Dance is spotted in the video.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X