»   » ದುನಿಯಾ ಸೂರಿ ಬಗ್ಗೆ ಯೋಗರಾಜ್ ಭಟ್ ಹೇಳಿದ್ದೇನು?

ದುನಿಯಾ ಸೂರಿ ಬಗ್ಗೆ ಯೋಗರಾಜ್ ಭಟ್ ಹೇಳಿದ್ದೇನು?

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಎಲ್ಲರದ್ದೂ ಒಂದು ಸ್ಟೈಲ್ ಆದ್ರೆ, ಯೋಗರಾಜ್ ಭಟ್ ರದ್ದೇ ಸ್ಪೆಷಲ್ ಸ್ಟೈಲ್. ನೋಡೋಕೆ ಸೈಲೆಂಟ್ ಆಗಿ ಕಂಡರೂ, ಭಟ್ರು ಎಂಥ ಪ್ರಚಂಡರು ಅಂತ ಗೊತ್ತಾಗೋದು ಅವರು ಬಾಯಿ ಬಿಟ್ಟ ನಂತರವಷ್ಟೆ.

ಭಟ್ರು ಬಾಯಿ ಬಿಡ್ಲಿ..ಇಲ್ಲ ಪೆನ್ ಹಿಡಿಲಿ..ಅವರು ಹೇಳೋದು-ಬರೆಯೋದು ತಲೆಯಲ್ಲಿ ಸಾಮಾನು ಇರುವವರಿಗೆ ಮಾತ್ರ. ಹೀಗಿರುವಾಗ ಭಟ್ರು, ದುನಿಯಾ ಸೂರಿ ಬಗ್ಗೆ ಏನನ್ನೋ ಒದರಿದ್ದಾರೆ. [ಸೂರಿ ಕಾರು ಚಾಲಕ 'ಕೆಂಡಸಂಪಿಗೆ' ಹೀರೋ ಆದ ಕಥೆ]

Watch the video; Yogaraj Bhat speaks about Kendasampige

ಸೂರಿ ಬಗ್ಗೆ ಭಟ್ರು ಏನು ಹೇಳಿದ್ದಾರೆ ಕೇಳೋಣ ಅಂದ್ರೆ ದೇವ್ರಾಣೆ ನಮ್ಗಂತೂ ಅರ್ಥ ಆಗ್ಲಿಲ್ಲ. ಅದು ಕನ್ನಡ ಭಾಷೆಯೋ? ಇಲ್ಲ 'ವಾಸ್ತುಪ್ರಕಾರ' ಆಡಿರುವ ಮಾತುಗಳೋ ಗೊತ್ತಿಲ್ಲ. ಸೂರಿ ನಿರ್ದೇಶನದ ಹೊಸಬರೇ ಅಭಿನಯಿಸಿರುವ 'ಕೆಂಡಸಂಪಿಗೆ' ಚಿತ್ರದ ಬಗ್ಗೆ ಮಾತಾಡಿ ಸಾರ್ ಅಂತ ಕೂರಿಸಿದರೆ 'ಜೈ ವಾಸ್ಕೊಡಗಾಮ' ಅಂದ್ಬುಟ್ರು ಭಟ್ರು. [ದುನಿಯಾ ಸೂರಿ 'ಕೆಂಡಸಂಪಿಗೆ'ಯಲ್ಲಿ ಅಂಥದ್ದೇನಿದೆ..?]

ಭಟ್ರ ಪದವನ್ನ ನಾವ್ ಹೇಳೋದಕ್ಕಿಂತ ನೀವೇ ನಿಮ್ಮ ಕಣ್ಣಾರೆ ನೋಡಿ, ಕಿವಿಯಾರೆ ಕೇಳಿದರೆ ಅದರ ಮಜಾನೇ ಬೇರೆ. ಅದಕ್ಕೆ ಅಲ್ಲಿ-ಇಲ್ಲಿ ಕತ್ರಿ ಹಾಕಿ ದುನಿಯಾ ಸೂರಿ 'ಕೆಂಡಸಂಪಿಗೆ' ಬಗ್ಗೆ ಭಟ್ರ ಮಾತು ಅಂತ ಹೊಸ ವಿಡಿಯೋ ರಿಲೀಸ್ ಮಾಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ....

Watch the video; Yogaraj Bhat speaks about Kendasampige

ಕೇಳಿದ್ರಲ್ಲ ಭಟ್ರ ಪಿಟೀಲು ಹೇಗಿತ್ತು ಅಂತ. ಇಂತಹ ಇನ್ನಷ್ಟು ತರಹೇವಾರಿ ವಾದ್ಯ ಗೋಷ್ಠಿ 'ಕೆಂಡಸಂಪಿಗೆ' ಅಡ್ಡದಿಂದ ಹೊರ ಬರಲಿದೆ. ಅಲ್ಲಿಗೆ ಒಂದಂತೂ ಸ್ಪಷ್ಟ, 'ಕೆಂಡಸಂಪಿಗೆ ಪಾರ್ಟ್ 2 ಗಿಣಿಮರಿ ಕೇಸ್' ಗಾಂಧಿನಗರದಲ್ಲಿ ತಮಟೆ ಬಾರಿಸೋಕೆ ಶುರುಮಾಡಿದೆ. (ಫಿಲ್ಮಿಬೀಟ್ ಕನ್ನಡ)

English summary
Director Duniya Soori is back with the new movie called 'Kendasampige'. Director Yogaraj Bhat has spoken about 'Kendasampige' and Duniya Soori. Watch the video.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada