»   » ವಿಡಿಯೋ ; ಮದುವೆ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಚಿರು ಪುತ್ರಿ ಶ್ರೀಜಾ

ವಿಡಿಯೋ ; ಮದುವೆ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಚಿರು ಪುತ್ರಿ ಶ್ರೀಜಾ

Posted By:
Subscribe to Filmibeat Kannada

ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಎರಡನೇ ಪುತ್ರಿ ಶ್ರೀಜಾ ರವರ ಎರಡನೇ ಮದುವೆ ನಿನ್ನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ಇರುವ ಪ್ರಕೃತಿ ರೆಸಾರ್ಟ್ ನಲ್ಲಿ ಗ್ರ್ಯಾಂಡ್ ಆಗಿ ನೆರವೇರಿತು. ರಾತ್ರಿ 9.18 ರ ಶುಭ ಮುಹೂರ್ತದಲ್ಲಿ ಶ್ರೀಜಾ-ಕಲ್ಯಾಣ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.[ಬಿಪಾಶಾ ಬಸು ಮದುವೆ ಫಿಕ್ಸ್ ಆಯ್ತಂತೆ, ಜೋಡಿ ಹಕ್ಕಿ ನೋಡಿ]

ಅದಕ್ಕೂ ಮುನ್ನ ನಡೆದ ಸಂಗೀತ್ ಕಾರ್ಯಕ್ರಮದಲ್ಲಿ ನವ ವಧು-ವರ ಶ್ರೀಜಾ ಹಾಗೂ ಕಲ್ಯಾಣ್ ಕುಣಿದು ಕುಪ್ಪಳಿಸಿದರು. ಆ ವಿಡಿಯೋ ಔಟ್ ಆಗಿದೆ. ನೋಡಿ.....

ಇಂದ್ರಾಕ್ಷಿ ಪಟ್ನಾಯಕ್ ಡಿಸೈನ್ ಮಾಡಿರುವ ಸಬ್ಯಸಾಚಿ ಲೆಹಂಗಾ ತೊಟ್ಟು ಚಿರು ಪುತ್ರಿ ಶ್ರೀಜಾ ಬೊಂಬಾಟ್ ಆಗಿ ಸ್ಟೆಪ್ ಹಾಕಿದರು. ಇನ್ನೂ ಕಲ್ಯಾಣ್ ಕೂಡ ಶ್ರೀಜಾ ಜೊತೆ ಡ್ಯುಯೆಟ್ ಹಾಡಿಗೆ ಡ್ಯಾನ್ಸ್ ಮಾಡ್ತಿದ್ರೆ, ಅತಿಥಿಗಳು ಶಿಳ್ಳೆ-ಚಪ್ಪಾಳೆ ಹೊಡೆಯುತ್ತಿದ್ದರು. [ಫೋಟೋ ಆಲ್ಬಂ ; ಚಿರಂಜೀವಿ ಪುತ್ರಿ ಶ್ರೀಜಾ ಮೆಹೆಂದಿ ಕಾರ್ಯಕ್ರಮ]

ರೋಮ್ಯಾಂಟಿಕ್ ಹಾಡುಗಳ ಜೊತೆಗೆ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ರವರ ಸೂಪರ್ ಹಿಟ್ ಹಾಡುಗಳಿಗೂ ಶ್ರೀಜಾ-ಕಲ್ಯಾಣ್ ಸೊಂಟ ಬಳುಕಿಸಿದರು. ['ತಾರೆ'ಗಳ ತೋಟದಲ್ಲಿ ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ']

ಶ್ರೀಜಾ-ಕಲ್ಯಾಣ್ ರವರ ಸಂಗೀತ್ ಕಾರ್ಯಕ್ರಮದ ಕೆಲ ಫೋಟೋಗಳು ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಒಂದೊಂದೇ ಕ್ಲಿಕ್ಕಿಸಿ....

-
-
-
-
-
-
-
-
-
-
-
-
-
-
-
-
-
-
-
-
English summary
Tollywood Actor Chiranjeevi's daughter Srija's sangeet ceremony took place on Sunday (March 27th) at Prakruthi Resort, Bengaluru. Watch the video of Bride Srija and Kalyan dance at the Sangeet Ceremony.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada