»   » ಅಪ್ಪನಂತೆ ಮಗ: ಹಾಲು ಕರೆದ 'ಜ್ಯೂನಿಯರ್' ಚಾಲೆಂಜಿಂಗ್ ಸ್ಟಾರ್

ಅಪ್ಪನಂತೆ ಮಗ: ಹಾಲು ಕರೆದ 'ಜ್ಯೂನಿಯರ್' ಚಾಲೆಂಜಿಂಗ್ ಸ್ಟಾರ್

Posted By:
Subscribe to Filmibeat Kannada

ಸ್ನೇಹ-ಸಂಬಂಧಗಳಿಗೆ ಬೆಲೆ ಇಲ್ಲದ ಈಗಿನ ಕಾಲದಲ್ಲಿ ವನ್ಯಜೀವಿ, ಪ್ರಾಣಿ-ಪಕ್ಷಿಗಳ ಮೇಲೆ ವಿಶೇಷ ಪ್ರೀತಿ, ಕಾಳಜಿ ಹೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜಕ್ಕೂ ಗ್ರೇಟ್.

ಮೈಸೂರಿನಲ್ಲಿ ಇರುವ ತಮ್ಮ ಫಾರ್ಮ್ ಹೌಸ್ ನಲ್ಲಿ ವಿವಿಧ ಪ್ರಭೇದದ ಪ್ರಾಣಿಗಳನ್ನು ನಟ ದರ್ಶನ್ ಸಾಕುತ್ತಿದ್ದಾರೆ. ತಮಗೆ ಬಿಡುವು ಸಿಕ್ಕಾಗೆಲ್ಲ ಪ್ರಾಣಿ-ಪಕ್ಷಿಗಳ ಲಾಲನೆ ಪಾಲನೆಯನ್ನೂ ಮಾಡುತ್ತಾರೆ ದರ್ಶನ್.

Watch Video: Darshan's son Vineesh milking cow

ಅಪ್ಪನಂತೆ ಮಗ ವಿನೀಶ್ ಕೂಡ ಪ್ರಾಣಿ ಪ್ರಿಯ. ಪ್ರಾಣಿ-ಪಕ್ಷಿಗಳ ಜೊತೆಗೆ ಹೆಚ್ಚು ಹೊತ್ತು ಕಳೆಯುವ ವಿನೀಶ್, ಅಪ್ಪನಂತೆ ತಾನೂ ಹಾಲನ್ನೂ ಕರೆದಿದ್ದಾನೆ. ಅದಕ್ಕೆ ಸಾಕ್ಷಿ ಈ ವಿಡಿಯೋ....

ತಂದೆ ದರ್ಶನ್ ರವರಿಂದ ಹಾಲು ಕರೆಯುವುದು ಹೇಗೆ ಎಂದು ಹೇಳಿಸಿಕೊಂಡ ವಿನೀಶ್, ತಾನೂ ಹಾಲು ಕರೆದು ಸೈ ಎನಿಸಿಕೊಂಡಿದ್ದಾನೆ.

ಐಷಾರಾಮ ಜೀವನದ ಜೊತೆಗೆ ಮೂಕ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ತೋರುವ ಚಾಲೆಂಜಿಂಗ್ ಸ್ಟಾರ್ ಹಾಗೂ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ನಿಜಕ್ಕೂ ಎಲ್ಲರಿಗೂ ಮಾದರಿ.

English summary
Watch Video: Challenging Star Darshan's son Vineesh milking cow.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada