»   » ನೀವು ನೋಡದೆ ಇರುವ ಯಶ್-ರಾಧಿಕಾ ಪರ್ಸನಲ್ ಫೋಟೋ ಆಲ್ಬಂ

ನೀವು ನೋಡದೆ ಇರುವ ಯಶ್-ರಾಧಿಕಾ ಪರ್ಸನಲ್ ಫೋಟೋ ಆಲ್ಬಂ

Posted By:
Subscribe to Filmibeat Kannada
ನೀವು ನೋಡಿರದ ಯಶ್ ರಾಧಿಕಾ ಪಂಡಿತ್ ರ ಬಾಲ್ಯದ ಫೋಟೋಗಳು | FIlmibeat Kannada

ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ವಿವಾಹ ಮಹೋತ್ಸವ ಡಿಸೆಂಬರ್ 10-11 ರಂದು ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ 'ಸ್ಟಾರ್ ಜೋಡಿ' ಹಸೆಮಣೆ ಏರಲಿದ್ದು, ಈಗಾಗಲೇ ಪೂರ್ವ ತಯಾರಿ ಪ್ರಾರಂಭಗೊಂಡಿದೆ.

ಸದ್ಯ, ಗಣ್ಯರನ್ನ ಆಹ್ವಾನಿಸುವ ಕಾರ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಕುಟುಂಬ ಬಿಜಿಯಾಗಿದೆ. ಇತ್ತ ಯಶ್ ಹಾಗೂ ರಾಧಿಕಾ ಪಂಡಿತ್ ಮದುವೆಯ ಎಲ್ಲಾ ಅಪ್ ಡೇಟ್ಸ್ ಕೊಡಲು 'ಟೀಂ ಯಶ್' ಸಜ್ಜಾಗಿದೆ. [ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು.?]

ಮದುವೆಗೂ ಮುನ್ನ ಯಶ್-ರಾಧಿಕಾ ಪಂಡಿತ್ ಲವ್ ಕಹಾನಿಯನ್ನ ಎಲ್ಲರಿಗೂ ಪರಿಚಯಿಸುವ ಪ್ರಯತ್ನಕ್ಕೆ ಕೈಹಾಕಿರುವ 'ಟೀಂ ಯಶ್', ಯಶ್ ಹಾಗೂ ರಾಧಿಕಾ ಪಂಡಿತ್ ರವರ ಪರ್ಸನಲ್ ಫೋಟೋ ಆಲ್ಬಂನ ಇಟ್ಕೊಂಡು ಸ್ಪೆಷಲ್ ಆಗಿ ಒಂದು ವಿಡಿಯೋ ರೆಡಿ ಮಾಡಿದ್ದಾರೆ.

ಪುಟಾಣಿ ಯಶ್ ಹಾಗೂ ರಾಧಿಕಾ ಪಂಡಿತ್

ಡಿಸೆಂಬರ್ ನಲ್ಲಿ 'ಜಂಟಿ'ಯಾಗುತ್ತಿರುವ ಯಶ್ ಹಾಗೂ ರಾಧಿಕಾ ಪಂಡಿತ್, ಬಾಲ್ಯದಲ್ಲಿ ಹೇಗಿದ್ದರು ಅಂತ ನೀವೇ ನೋಡಿ...

ಮೈಸೂರು ಹುಡ್ಗ-ಬೆಂಗಳೂರು ಹುಡ್ಗಿ

ಮೈಸೂರಿನ ಪಡುವಾರಹಳ್ಳಿ ಹುಡುಗ ಯಶ್. ಬೆಂಗಳೂರಿನ ಮಲ್ಲೇಶ್ವರಂ ಹುಡುಗಿ ರಾಧಿಕಾ ಪಂಡಿತ್. 147 ಕಿಮಿ ಅಂತರದಲ್ಲಿ ಇಬ್ಬರೂ ಬೆಳೆದಿದ್ದರೂ, ಇಬ್ಬರನ್ನೂ ಬೆಸೆದದ್ದು ಪ್ರೀತಿ. [ಯಶ್-ರಾಧಿಕಾ ಮದುವೆ: ಹುಡುಗಿ ಕಡೆಯ 'ಆಹ್ವಾನ ಪತ್ರಿಕೆ' ರೆಡಿ]

ಮುದ್ದು ಮಕ್ಕಳು

ನೀವು ನೋಡದೆ ಇರುವ ಯಶ್ ಹಾಗೂ ರಾಧಿಕಾ ಪಂಡಿತ್ ರವರ ಬಾಲ್ಯದ ಚಿತ್ರಗಳು ಇಲ್ಲಿದೆ ನೋಡಿ....

ಸ್ಟೇಜ್ ಭಯ ಇಲ್ಲವೇ ಇಲ್ಲ.!

ಬಾಲ್ಯದಿಂದಲೂ ಯಶ್ ಹಾಗೂ ರಾಧಿಕಾ ಪಂಡಿತ್ ರವರಿಗೆ ಸ್ಟೇಜ್ ಭಯ ಇಲ್ಲ ಎನ್ನುವುದಕ್ಕೆ ಈ ಫೋಟೋಗಳೇ ಸಾಕ್ಷಿ. [ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ']

ಲಾಸ್ಟ್ ಬೆಂಜ್, ಫಸ್ಟ್ ಬೆಂಜ್.!

ಲಾಸ್ಟ್ ಬೆಂಜ್ ಯಶ್ ಮತ್ತು ಫಸ್ಟ್ ಬೆಂಜ್ ರಾಧಿಕಾ ಪಂಡಿತ್ ನಡುವಿನ ಪ್ರೇಮ ಕಹಾನಿ ಇದು. [ಆಡಂಬರ, ವೈಭವ ಇಲ್ಲದೇ ಸಂಪಿಗೆ ಸಸಿ ಕೊಟ್ಟು 'ಮದುವೆಗೆ ಬನ್ನಿ' ಎಂದ ಯಶ್]

ರಾಧಿಕಾ ಪಂಡಿತ್ ಹೇಗೆ.?

ತುಂಬಾ ಸಿಂಪಲ್, ಶಿಸ್ತು ಬದ್ಧವಾಗಿರುವ ಹುಡುಗಿ ನಟಿ ರಾಧಿಕಾ ಪಂಡಿತ್ ['ಪರಿಸರ ಪ್ರೀತಿ' ಜೊತೆಗೆ 'ಪುಸ್ತಕ ಪ್ರೀತಿ' ಮೆರೆದ ಮದುಮಗ ಯಶ್]

ತದ್ವಿರುದ್ಧ ವ್ಯಕ್ತಿತ್ವ

ಅತ್ತ ರಾಧಿಕಾ ಪಂಡಿತ್ ಸಿಂಪಲ್ ಮತ್ತು ಸೈಲೆಂಟ್ ಆಗಿದ್ರೆ, ಇತ್ತ ಯಶ್ ತುಂಬಾ ರೆಬೆಲ್, ಟ್ರಬಲ್ ಮತ್ತು 'ಔಟ್'ಸ್ಟಾಂಡಿಂಗ್ ಸ್ಟೂಡೆಂಟ್.

ಇಬ್ಬರು ಒಟ್ಟಿಗೆ ಸೇರಿದ್ದು....

ಇಂತಿಪ್ಪ ಎರಡು ತದ್ವಿರುದ್ಧ ವ್ಯಕ್ತಿತ್ವಗಳು ಬೆಳ್ಳಿತೆರೆಗೆ ಒಟ್ಟಿಗೆ ಪದಾರ್ಪಣೆ ಮಾಡಿದ್ದು 'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ.

ಒಟ್ಟಿಗೆ ಅವಾರ್ಡ್ ಪಡೆದರು.!

ಅದೇ 'ಮೊಗ್ಗಿನ ಮನಸ್ಸು' ಚಿತ್ರಕ್ಕೆ ಈ ಜೋಡಿ ಮೊದಲ ಬಾರಿ 'ಫಿಲ್ಮ್ ಫೇರ್ ಅವಾರ್ಡ್' ಕೂಡ ಮುಡಿಗೇರಿಸಿಕೊಂಡಿದ್ದರು.

ನಾಲ್ಕು ಚಿತ್ರಗಳಲ್ಲಿ ಒಟ್ಟಾಗಿ ಅಭಿನಯ

'ಮೊಗ್ಗಿನ ಮನಸ್ಸು', 'ಡ್ರಾಮಾ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಮತ್ತು 'ಸಂತು ಸ್ಟೈಟ್ ಫಾರ್ವರ್ಡ್' ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದಾರೆ.

ಒಟ್ಟಾಗಿ ಪ್ರಶಸ್ತಿ ಪಡೆದಿದ್ದಾರೆ

ಫಿಲ್ಮ್ ಫೇರ್, ಸೈಮಾ, ಐಫಾ ಮತ್ತು ಜೀ ಅವಾರ್ಡ್ ಗಳನ್ನ ಈ ಜೋಡಿ ಒಟ್ಟಾಗಿ ಪಡೆದಿದ್ದಾರೆ.

ಪರ್ಸನಲ್ ಆಲ್ಬಂ

ಲವ್ ಸ್ಟೋರಿ ಶುರು ಆದಾಗಿನಿಂದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಕ್ಲಿಕ್ ಮಾಡಿಕೊಂಡಿರುವ ಪರ್ಸನಲ್ ಫೋಟೋಗಳಿವು.

ವಿಡಿಯೋ ನೋಡಿ....

ಈ ಎಲ್ಲಾ ಫೋಟೋಗಳನ್ನಿಟ್ಟುಕೊಂಡು 'ಟೀ ಯಶ್' ರೆಡಿ ಮಾಡಿರುವ ಸ್ಪೆಷಲ್ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

ನಿಮಗೆ ಅಪ್ ಡೇಟ್ಸ್ ಬೇಕಾ.?

ಯಶ್ ವಿವಾಹ ಯಾವ ರೀತಿ ನಡೆಯಲಿದೆ? ಯಾರೆಲ್ಲ ಅತಿಥಿಗಳು ಭಾಗವಹಿಸುತ್ತಾರೆ? ಮದುವೆ ಮಂಟಪ ಹೇಗಿರಲಿವೆ? ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ Yash and Radhika Pandit ಫೇಸ್ ಬುಕ್ ಪೇಜ್ ಲೈಕ್ ಮಾಡಿ...ಲೈವ್ ಅಪ್ ಡೇಟ್ಸ್ ಪಡೆಯಿರಿ...

English summary
Rocking Star Yash and Radhika Pandit wedding is scheduled on December 10th and 11th at Tripura Vasini, Bengaluru Palace Ground. Here is video which gives the glimpse of Yash-Radhika Pandit world. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada