For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ವಿದೇಶದಲ್ಲಿ ಕೊಡವ ನೃತ್ಯ ಮಾಡಿದ ಕೊಡವತಿ ಹರ್ಷಿಕಾ ಪೂಣಚ್ಚ

  By Harshitha
  |
  ಫಾರಿನ್‌ನಲ್ಲಿ ಕೊಡವ ನೃತ್ಯ ಮಾಡಿದ ನಟಿ..! | Filmibeat Kannada

  ವಿದೇಶಕ್ಕೆ ಹೋದರೂ, ತಾಯ್ನಾಡಿನ ಸಂಸ್ಕೃತಿಯನ್ನ ನಟಿ ಹರ್ಷಿಕಾ ಪೂಣಚ್ಚ ಮರೆತಿಲ್ಲ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿದೆ.

  ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಇತ್ತೀಚೆಗಷ್ಟೇ ಆಮ್ ಸ್ಟರ್ ಡ್ಯಾಂ ಗೆ ಭೇಟಿ ಕೊಟ್ಟಿದ್ದ ಹರ್ಷಿಕಾ, ಮೊನ್ನೆಯಷ್ಟೇ ಬೆಲ್ಜಿಯಂ ನಲ್ಲಿರುವ 'ಟುಮಾರೋಲ್ಯಾಂಡ್'ನಲ್ಲಿ ಲ್ಯಾಂಡ್ ಆದರು.

  ಜುಲೈ 20 ರಿಂದ 29 ರವರೆಗೂ ಟುಮಾರೋಲ್ಯಾಂಡ್ ನಲ್ಲಿ ವಿಶ್ವ ಪ್ರಸಿದ್ಧ ಮ್ಯೂಸಿಕ್ ಫೆಸ್ಟಿವಲ್ ನಡೆದಿತ್ತು. ಈ ಉತ್ಸವದಲ್ಲಿ ನಟಿ ಹರ್ಷಿಕಾ ಪೂಣಚ್ಚ ಪಾಲ್ಗೊಂಡು ಕೊಡವ ನೃತ್ಯ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

  ಸದ್ದಿಲ್ಲದೆ ಸಿನಿಮಾ ಚಿತ್ರೀಕರಣ ಮುಗಿಸಿದ ಹರ್ಷಿಕಾ ಸದ್ದಿಲ್ಲದೆ ಸಿನಿಮಾ ಚಿತ್ರೀಕರಣ ಮುಗಿಸಿದ ಹರ್ಷಿಕಾ

  ಹೌದು, ಜಗತ್ಪ್ರಸಿದ್ಧ ಟುಮಾರೋಲ್ಯಾಂಡ್ ಫೆಸ್ಟಿವಲ್ ಕಣ್ತುಂಬಿಕೊಳ್ಳೋಕೆ ವಿವಿಧ ದೇಶಗಳಿಂದ ಲಕ್ಷಾಂತರ ಜನ ಬೆಲ್ಜಿಯಂಗೆ ಭೇಟಿ ಕೊಡ್ತಾರೆ. ಈ ಬಾರಿ ಅದನ್ನ ನೋಡಲು ಹರ್ಷಿಕಾ ಕೂಡ ಅಲ್ಲಿಗೆ ಹಾರಿದ್ದರು. ಅಲ್ಲಿನ ಸಂಗೀತಕ್ಕೆ ಕೊಡವ ನೃತ್ಯ ಮಾಡಿ, ಅಕ್ಕ-ಪಕ್ಕ ಇದ್ದವರಿಗೂ ಕೊಡವ ನೃತ್ಯ ಕಲಿಸಿ ಬಂದಿದ್ದಾರೆ ನಟಿ ಹರ್ಷಿಕಾ ಪೂಣಚ್ಚ. ಅದಕ್ಕೆ ಸಾಕ್ಷಿ ಈ ವಿಡಿಯೋ...

  #KodavaAat in @tomorrowland

  A post shared by Harshika Poonacha (@harshikapoonachaofficial) on

  ಸದ್ಯ ಈ ವಿಡಿಯೋನ ಹರ್ಷಿಕಾ ಪೂಣಚ್ಚ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ವಿದೇಶದಲ್ಲಿ ಕೊಡವ ನೃತ್ಯ ಮಾಡಿ, ವಿದೇಶಿಯರಿಗೂ ಅದನ್ನ ಹೇಳಿಕೊಟ್ಟ ಹರ್ಷಿಕಾ ಯತ್ನಕ್ಕೆ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ.

  ಇತ್ತೀಚೆಗಷ್ಟೇ ನಟಿ ಹರ್ಷಿಕಾ ಪೂಣಚ್ಚ ಅಭಿನಯದ 'ಚಿಟ್ಟೆ' ಚಿತ್ರ ಬಿಡುಗಡೆ ಆಗಿತ್ತು. ಇದೀಗ 'ಉದ್ಘರ್ಷ' ಶೂಟಿಂಗ್ ನಿಂದ ಕೊಂಚ ಗ್ಯಾಪ್ ಪಡೆದು ಫಾರಿನ್ ಟ್ರಿಪ್ ನಲ್ಲಿದ್ದಾರೆ ಹರ್ಷಿಕಾ ಪೂಣಚ್ಚ.

  English summary
  Watch Video: Kannada Actress Harshika Poonacha's kodava dance at Tomorrowland.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X