»   » ಹುಚ್ಚ ವೆಂಕಟ್ ರವರ ಜರ್ಮನ್ ಅಭಿಮಾನಿ ಇವರು.!

ಹುಚ್ಚ ವೆಂಕಟ್ ರವರ ಜರ್ಮನ್ ಅಭಿಮಾನಿ ಇವರು.!

Posted By:
Subscribe to Filmibeat Kannada

''ಹುಚ್ಚ ವೆಂಕಟ್ ಸೇನೆ ಎಲ್ಲಿದೆ. ಕರೀ ನಿಮ್ಮ ಹುಡುಗರನ್ನ. ಎಷ್ಟು ಜನ ಇದ್ದಾರೆ.? ಎಲ್ಲಿದ್ದಾರೆ? ಏನ್ ಮಾಡ್ತಿದ್ದಾರೆ?'' ಹೀಗಂತ 'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಕಾಲೆಳೆದವರೇ ಹೆಚ್ಚು.

'ಬಿಗ್ ಬಾಸ್-3' ಕಾರ್ಯಕ್ರಮವನ್ನ ವೀಕ್ಷಿಸುತ್ತಿರುವವರಿಗೂ ಹುಚ್ಚ ವೆಂಕಟ್ ಸೇನೆ ಇದೆ ಅಂದ್ರೆ ನಂಬುವುದಕ್ಕೆ ಅಸಾಧ್ಯ. ಹೀಗಿರುವಾಗಲೇ ಜರ್ಮನಿಯಲ್ಲಿ ಹುಚ್ಚ ವೆಂಕಟ್ ಸೇನೆ ಇದೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗುತ್ತಿದೆ.

ಬೇಕಾದ್ರೆ ನೀವೇ ಈ ವಿಡಿಯೋ ನೋಡಿ...ಜರ್ಮನಿಯಲ್ಲಿ ಹುಚ್ಚ ವೆಂಕಟ್ ಅಭಿಮಾನಿ ಏನ್ ಹೇಳಿದ್ದಾರೆ ಅಂತ.....

Watch Video : Meet Huccha Venkat fan from Germany

ಥೇಟ್ ಹುಚ್ಚ ವೆಂಕಟ್ ಸ್ಟೈಲ್ ಅನುಕರಣೆ ಮಾಡಿ ''ನನ್ ಮಗಂದ್, ಐಟಂ ಸಾಂಗ್ ಬ್ಯಾನ್ ಆಗ್ಬೇಕ್'' ಅಂತ ವಿದೇಶಿಯೊಬ್ಬರು ಹೇಳಿದ್ದಾರೆ. ಈ ವಿಡಿಯೋ ಸದ್ಯ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಹಾಗಂತ ಇವರು 'ಹುಚ್ಚ ವೆಂಕಟ್ ಸೇನೆ' ಕಾರ್ಯಕರ್ತರಾ ಅಂತ ನಮ್ಮನ್ನ ಕೇಳ್ಬೇಡಿ. ಅನುಕರಣೆ ಮಾಡಿರೋದ್ರಿಂದ ಅವರು ಹುಚ್ಚ ವೆಂಕಟ್ ಅಭಿಮಾನಿ ಇರ್ಬಹುದು ಅನ್ನೋದು ನಮ್ಮ ಲೆಕ್ಕಾಚಾರ ಅಷ್ಟೆ.

English summary
Huccha Venkat is the topic of discussion now in social media. A video of a foreigner imitating Huccha Venkat is going viral in Facebook. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada