'ಟಗರು' ನೋಡಲು ತುದಿಗಾಲಲ್ಲಿ ನಿಂತಿರುವ ನಿವೇದಿತಾ ಗೌಡ
ಫೆಬ್ರವರಿ 23... ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಅಕ್ಷರಶಃ ಹಬ್ಬ. ಯಾಕಂದ್ರೆ, ಅವತ್ತು ಬಹುನಿರೀಕ್ಷಿತ ಸಿನಿಮಾ 'ಟಗರು' ಬಿಡುಗಡೆ ಆಗಲಿದೆ. 'ಟಗರು' ಕಣ್ತುಂಬಿಕೊಳ್ಳಲು ಶಿವ'ಭಕ್ತ'ರಂತೂ ಕಾತರದಿಂದ ಕಾಯ್ತಿದ್ದಾರೆ.
'ಟಗರು' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಅಂತ ದುಬೈನಿಂದೆಲ್ಲ ಶಿವಣ್ಣನ ಅಭಿಮಾನಿಗಳು ಬೆಂಗಳೂರಿಗೆ ಬರ್ತಿದ್ದಾರೆ. ಅದಾಗಲೇ, ಬುಕ್ ಮೈ ಶೋ ವೆಬ್ ತಾಣದಲ್ಲೂ 'ಟಗರು' ಬುಕ್ಕಿಂಗ್ ಓಪನ್ ಆಗಿದೆ. 'ಟಗರು' ಚಿತ್ರದ ಟಿಕೆಟ್ ಗಳು ಬಿಸಿ ಬಿಸಿ ಬೆಣ್ಣೆ ದೋಸೆಯಂತೆ ಸೇಲ್ ಆಗ್ತಿದೆ.
ಎಲ್ಲೆಲ್ಲು 'ಟಗರು' ಹವಾ ಜೋರಾಗಿರುವಾಗಲೇ, ಚಿತ್ರತಂಡಕ್ಕೆ 'ಬಿಗ್ ಬಾಸ್' ಬೊಂಬೆ ನಿವೇದಿತಾ ಗೌಡ ಶುಭ ಕೋರಿದ್ದಾರೆ.

''ಫೆಬ್ರವರಿ 23 ರಂದು 'ಟಗರು' ಸಿನಿಮಾ ಬಿಡುಗಡೆ ಆಗುತ್ತಿದೆ. ಹೀಗಾಗಿ ನಾನಂತೂ ತುಂಬಾ ಖುಷಿಯಲ್ಲಿದ್ದೇನೆ. ಯಾಕಂದ್ರೆ, 'ಟಗರು' ನನ್ನ ಫೇವರೆಟ್ ನಟ ಶಿವರಾಜ್ ಕುಮಾರ್ ಅವರ ಸಿನಿಮಾ. ಶಿವಣ್ಣ ಅಂದ್ರೆ ನನಗೆ ಸಖತ್ ಇಷ್ಟ. ನಾನಂತೂ, 'ಟಗರು' ನೋಡೋಕೆ ಕಾಯ್ತಿದ್ದೇನೆ. 23 ಯಾವಾಗ ಆಗುತ್ತೋ ಅಂತ ಕಾಯ್ತಿದ್ದೇನೆ. ಇಡೀ ಚಿತ್ರತಂಡಕ್ಕೆ ನನ್ನ ಕಡೆಯಿಂದ ಆಲ್ ದಿ ಬೆಸ್ಟ್'' ಅಂತ ಸೆಲ್ಫಿ ವಿಡಿಯೋ ಮೂಲಕ ನಿವೇದಿತಾ ಗೌಡ ಹೇಳಿದ್ದಾರೆ.
ದುನಿಯಾ ಸೂರಿ ನಿರ್ದೇಶನದ ಶಿವರಾಜ್ ಕುಮಾರ್, ಭಾವನಾ, ಮಾನ್ವಿತಾ ಹರೀಶ್ ಅಭಿನಯದ ಚಿತ್ರ 'ಟಗರು'. ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ 'ಟಗರು' ಫಸ್ಟ್ ಡೇ ಫಸ್ಟ್ ಶೋನ ನೀವು ನೋಡ್ತೀರಾ.?


Click it and Unblock the Notifications











