»   » ವಿಡಿಯೋ: 'ಹಾಲಿವುಡ್'ನ ಮೀರಿಸುವಂತೆ ಸಿದ್ದವಾಗಿದೆ '2.0' ಚಿತ್ರ

ವಿಡಿಯೋ: 'ಹಾಲಿವುಡ್'ನ ಮೀರಿಸುವಂತೆ ಸಿದ್ದವಾಗಿದೆ '2.0' ಚಿತ್ರ

Posted By:
Subscribe to Filmibeat Kannada

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಮೇಕಿಂಗ್ ನೋಡಿ ಇಡೀ ಭಾರತ ಸಿನಿಲೋಕವೇ ಬೆರಗಾಗಿತ್ತು. ಈಗ '2.0' ಚಿತ್ರದ ಮೇಕಿಂಗ್ ನೋಡಿದ ಜನ ಹೀಗೂ ಸಿನಿಮಾ ಮಾಡಬಹುದಾ.! ಎಂದು ಆಶ್ಚರ್ಯಗೊಂಡಿದ್ದಾರೆ.

ನಿರ್ದೇಶಕ ಶಂಕರ್ ಕೈಚಳಕದ ಮುಂದೆ ಹಾಲಿವುಡ್ ಕೂಡ ಮಂಕಾದಂತೆ ಬಾಸವಾಗುತ್ತಿದೆ. ಇದು ಭಾರತೀಯ ಸಿನಿಮಾನ ಎಂಬ ಅನುಮಾನ ಕಾಡುತ್ತಿದೆ. ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅವರ ಸಿದ್ದತೆ ನೋಡಿದರೇ ನೀವು ಒಂದು ಕ್ಷಣ ಬೆರಗಾಗದೇ ಇರುವುದಿಲ್ಲ.

ಹೌದು, ನಾವು ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಸ್ವತಃ ಚಿತ್ರತಂಡ ಬಿಡುಗಡೆ ಮಾಡಿರುವ ಮೇಕಿಂಗ್ ವಿಡಿಯೋ. ಹಾಗಿದ್ರೆ, ಈ ಮೇಕಿಂಗ್ ವಿಡಿಯೋ ಹೇಗಿದೆ? ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂಬುದಕ್ಕೆ ಉತ್ತರ ಮುಂದೆ ಓದಿ.....

ಮೈನವಿರೇಳಿಸುತ್ತಿದೆ '2.0' ಮೇಕಿಂಗ್

ರೋಬೋ ಚಿತ್ರವನ್ನ ನಿರ್ದೇಶನ ಮಾಡಿದ್ದ ಶಂಕರ್, '2.0' ಚಿತ್ರದ ಮೂಲಕ ಪ್ರೇಕ್ಷಕರ ಕುತೂಹಲವನ್ನ ಬೆಟ್ಟದಷ್ಟು ಮಾಡುತ್ತಿದ್ದಾರೆ. ಈಗ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದ್ದು, ಪ್ರತಿಯೊಂದು ದೃಶ್ಯವನ್ನ ನೋಡುತ್ತಿದ್ದರೇ ಮೈನವಿರೇಳಿಸುತ್ತಿದೆ.

ಹೊಸ ಸಾಮ್ರಾಜ್ಯ ಸ್ಥಾಪನೆ

'ಬಾಹುಬಲಿ' ಚಿತ್ರಕ್ಕಾಗಿ ರಾಜಮೌಳಿ ಹೇಗೆ ಮಾಹಿಶ್ಮತಿ ಸಾಮ್ರಾಜ್ಯ ಸ್ಥಾಪಿಸಿದ್ದರೋ, ಈಗ ಶಂಕರ್ ಅವರು ಕೂಡ ಅದರಂತೆ ಹೊಸ ಸಾಮ್ರಾಜ್ಯ ಸೃಷ್ಟಿಸಿದ್ದಾರೆ. ಅದಕ್ಕಾಗಿ ಹೊಸ ನಗರವನ್ನೇ ಕ್ರಿಯೇಟ್ ಮಾಡಿದ್ದಾರೆ.

ತಾಂತ್ರಿಕವಾಗಿ ಸಿಕ್ಕಾಪಟ್ಟೆ ವರ್ಕೌಟ್

'2.0' ಚಿತ್ರಕ್ಕೆ ಬೇಕಾಗುವಂತೆ ಟೆಕ್ನಿಕಲಿ ಸಿಕ್ಕಾಪಟ್ಟೆ ತಯಾರಿ ಮಾಡಿದ್ದಾರೆ. ಪ್ರತಿಯೊಂದು ದೃಶ್ಯವೂ ಅದ್ಧೂರಿಯಾಗಿ ಬರುವಂತೆ ಜಾಗೃತಿ ವಹಿಸಿದ್ದಾರೆ.

ರಜನಿಕಾಂತ್ ತಯಾರಿ ನೋಡಿ

ಸೂಪರ್ ಸ್ಟಾರ್ ರಜನಿಕಾಂತ್ '2.0' ಚಿತ್ರಕ್ಕಾಗಿ ಹೇಗೆ ತಯಾರಾಗುತ್ತಿದ್ದಾರೆ ಎಂಬುದಕ್ಕೆ ಈ ಫೋಟೋ ಸಾಕ್ಷಿ.

ಅಕ್ಷಯ್ ಕುಮಾರ್ ಸಿದ್ದತೆ ನೋಡಿ

ರಜನಿಕಾಂತ್ ಜೊತೆಯಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ ಅಭಿನಯಿಸಿದ್ದು, ತಮ್ಮ ಗೆಟಪ್ ಗಾಗಿ ಅಕ್ಕಿ ಸಿದ್ದತೆ ನೋಡಿ ಹೇಗಿದೆ ಅಂತ.

ರಜನಿಯ ಫೈನಲ್ ಲುಕ್ ಇದು

'2.0' ಚಿತ್ರದಲ್ಲಿ ಸೂಪರ್ ಸ್ಟಾರ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಈ ಮೇಕಿಂಗ್ ಚಿತ್ರಗಳು ತೆರೆ ಎಳೆದಿವೆ.

ಅಕ್ಷಯ್ ಕುಮಾರ್ ಗೆಟಪ್ ಇದು

ಅಕ್ಷಯ್ ಕುಮಾರ್ ಗೆಟಪ್ ವಿಶೇಷವಾಗಿದ್ದು, ಈಗಾಗಲೇ ಇವರ ಲುಕ್ ಬಗ್ಗೆ ಸಖತ್ ಚರ್ಚೆಯಾಗುತ್ತಿದೆ.

ಆಮಿ ಜಾಕ್ಸನ್ ನಾಯಕಿ

'2.0' ಚಿತ್ರದಲ್ಲಿ ಆಮಿ ಜಾಕ್ಸನ್ ನಾಯಕಿ ಆಗಿದ್ದಾರೆ. ಆಮಿ ಅವರದ್ದು ಯಾವ ಪಾತ್ರ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದ್ರೆ, ಅವರ ಸ್ಟೈಲಿಶ್ ಎಂಟ್ರಿ ಮಾತ್ರ ಈ ಮೇಕಿಂಗ್ ವಿಡಿಯೋದಲ್ಲಿದೆ.

ಶಂಕರ್ ಕೈಚಳಕ್ಕೆ ಹ್ಯಾಟ್ಸಪ್

ನಿರ್ದೇಶಕ ಶಂಕರ್ ಅವರ ಕಲ್ಪನೆಗೆ ನಿಜಕ್ಕೂ ಹ್ಯಾಟ್ಸಪ್ ಹೇಳಲಬೇಕು. ಯಾವುದೇ ಹಾಲಿವುಡ್ ಚಿತ್ರಕ್ಕೂ ಕಮ್ಮಿಯಿಲ್ಲ ಎನ್ನುವ ರೀತಿಯಲ್ಲಿ ಈ ಸಿನಿಮಾ ಮಾಡುತ್ತಿದ್ದಾರೆ.

ಜನವರಿಯಲ್ಲಿ ರಿಲೀಸ್

ಎಲ್ಲ ಅಂದಕೊಂಡಂತೆ ಆಗಿದ್ದರೇ, ದೀಪಾವಳಿಗೆ ಸಿನಿಮಾ ಬರಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಹೆಚ್ಚು ಕಾರ್ಯ ನಿರ್ವಹಿಸಿರುವುದರಿಂದ ಜನವರಿ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

English summary
The makers of 2.0 have released a making video from Rajinikanth-Akshay Kumar's film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada