For Quick Alerts
  ALLOW NOTIFICATIONS  
  For Daily Alerts

  ನಿಮಗೆ ಗೊತ್ತೇ.? 'ಬಲ್ಲಾಳದೇವ' ನಟ ರಾಣಾ ಬಲಗಣ್ಣಿಗೆ ದೃಷ್ಟಿಯೇ ಇಲ್ಲ.!

  By Harshitha
  |

  ಭಾರತದಾದ್ಯಂತ 'ಬಾಹುಬಲಿ-2' ಅಬ್ಬರ ಜೋರಾಗಿ ಸಾಗುತ್ತಿದೆ. ಬಾಕ್ಸ್ ಆಫೀಸ್ ನಲ್ಲಿ 'ಬಾಹುಬಲಿ-2' ಹೊಸ ದಾಖಲೆ ಬರೆಯುತ್ತಿದೆ. ಆದ್ರೀಗ ವಿಷ್ಯ ಅದಲ್ಲ.!

  'ಬಾಹುಬಲಿ-2' ಚಿತ್ರದ 'ಬಲ್ಲಾಳದೇವ' ಪಾತ್ರಧಾರಿ ರಾಣಾ ದಗ್ಗುಬಾಟಿ ಪರಿಚಯ ನಿಮಗೆ ಇದೇ ತಾನೆ.? ತೆಲುಗು ನಿರ್ಮಾಪಕ, ಪದ್ಮಭೂಷಣ ಡಿ.ರಾಮಾನಾಯ್ಡು ರವರ ಮೊಮ್ಮಗ... ತೆಲುಗು ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ರವರ ಪುತ್ರನಾಗಿರುವ ರಾಣಾ ದಗ್ಗುಬಾಟಿ ರವರಿಗೆ ಒಂದು ಕಣ್ಣು ಕಾಣಿಸುವುದಿಲ್ಲ ಎಂಬ ಸಂಗತಿ ನಿಮಗೆ ಗೊತ್ತಾ.?

  'ಬಾಹುಬಲಿ' ಚಿತ್ರದಲ್ಲಿ ಅಬ್ಬರಿಸಿ ಬೊಬ್ಬಿರಿದಿರುವ ರಾಣಾ ದಗ್ಗುಬಾಟಿ ತಮ್ಮ ಅಂಗ ವೈಕಲ್ಯದ ಕುರಿತು ವರ್ಷದ ಹಿಂದೆ ಮಾತನಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ ಓದಿರಿ....

  ರಾಣಾ ದಗ್ಗುಬಾಟಿ ರವರ ಬಲಗಣ್ಣಿಗೆ ದೃಷ್ಟಿಯೇ ಇಲ್ಲ.!

  ರಾಣಾ ದಗ್ಗುಬಾಟಿ ರವರ ಬಲಗಣ್ಣಿಗೆ ದೃಷ್ಟಿಯೇ ಇಲ್ಲ.!

  'ಅಜಾನುಬಾಹು' ರಾಣಾ ದಗ್ಗುಬಾಟಿ ರವರ ಬಲಗಣ್ಣಿಗೆ ದೃಷ್ಟಿ ಇಲ್ಲ ಎಂದರೆ ನಂಬಲು ಅಸಾಧ್ಯ. ಆದ್ರೆ, ಇದೇ ಸತ್ಯ. ಈ ಕುರಿತು ತೆಲುಗಿನ ಜೆಮಿನಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ನಟ ರಾಣಾ ದಗ್ಗುಬಾಟಿ ಮಾತನಾಡಿದ್ದಾರೆ.

  ಸತ್ಯ ಹೇಳಿದ ರಾಣಾ...

  ಸತ್ಯ ಹೇಳಿದ ರಾಣಾ...

  ''ನಾನು ನಿಮ್ಮಲ್ಲಿ ಒಂದು ವಿಷಯ ಹೇಳಲಾ.? ನನ್ನ ಒಂದು ಕಣ್ಣಿಗೆ ಮಾತ್ರ ದೃಷ್ಟಿ ಇದೆ. ಬಾಲ್ಯದಿಂದಲೂ ನನ್ನ ಬಲಗಣ್ಣಿಗೆ ದೃಷ್ಟಿ ಇಲ್ಲ. ಎಡಗಣ್ಣು ಮುಚ್ಚಿದರೆ ನನಗೆ ನೀವ್ಯಾರೂ ಕಾಣಲ್ಲ'' ಎಂದು ಜೆಮಿನಿ ವಾಹಿನಿ ಕಾರ್ಯಕ್ರಮವೊಂದರಲ್ಲಿ ನಟ ರಾಣಾ ದಗ್ಗುಬಾಟಿ ಹೇಳಿದ್ದಾರೆ.

  ಮಹಾನ್ ವ್ಯಕ್ತಿ ಕಣ್ಣು ದಾನ ಮಾಡಿದರು

  ಮಹಾನ್ ವ್ಯಕ್ತಿ ಕಣ್ಣು ದಾನ ಮಾಡಿದರು

  ''ಒಬ್ಬ ಮಹಾನ್ ವ್ಯಕ್ತಿ, ಆತನ ಮರಣದ ನಂತರ ನನಗೆ ಕಣ್ಣು ದಾನ ಮಾಡಿದರು. ಆಗ ನಾನಿನ್ನೂ ಚಿಕ್ಕವನು'' - ರಾಣಾ ದಗ್ಗುಬಾಟಿ

  ರಾಣಾ ರವರ ಸ್ಫೂರ್ತಿದಾಯಕ ಮಾತುಗಳು

  ರಾಣಾ ರವರ ಸ್ಫೂರ್ತಿದಾಯಕ ಮಾತುಗಳು

  ''ನಮ್ಮಲ್ಲಿ ಹಲವರಿಗೆ ಅಂಗವೈಕಲ್ಯ ಇರುತ್ತದೆ. ಆದರೆ ಆ ಸಮಸ್ಯೆಯಿಂದ ನಾವು ಕುಗ್ಗಿ ಹೋಗಬಾರದು. ಅದನ್ನು ಮೀರಿ ಬೆಳೆಯಬೇಕು. ಆತ್ಮವಿಶ್ವಾಸದಿಂದ ಸಮಸ್ಯೆ ಎದುರಿಸಬೇಕು'' ಎಂದು ಕಾರ್ಯಕ್ರಮದಲ್ಲಿ ರಾಣಾ ದಗ್ಗುಬಾಟಿ ಸ್ಫೂರ್ತಿದಾಯಕ ಮಾತುಗಳನ್ನಾಡಿದ್ದಾರೆ.

  ಕಠಿಣ ಪರಿಶ್ರಮ

  ಕಠಿಣ ಪರಿಶ್ರಮ

  ಆತ್ಮವಿಶ್ವಾಸವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ರಾಣಾ ದಾಗ್ಗುಬಾಟಿ ಜೀವಂತ ಉದಾಹರಣೆ. ಸಮಸ್ಯೆಯನ್ನ ಮೀರಿ ಅಜಾನುಬಾಹು ಆಗಿ ಬೆಳೆದಿರುವ ರಾಣಾ ದಗ್ಗುಬಾಟಿ ಇಂದು ಟಾಲಿವುಡ್ ನಲ್ಲಿ ಬಹು ಬೇಡಿಕೆಯ ನಟ.

  ವಿಡಿಯೋ ನೋಡಿ

  ವಿಡಿಯೋ ನೋಡಿ

  ಜೆಮಿನಿ ವಾಹಿನಿಯ ಕಾರ್ಯಕ್ರಮದಲ್ಲಿ ನಟ ರಾಣಾ ದಗ್ಗುಬಾಟಿ ಮಾತನಾಡಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

  English summary
  Telugu Actor Rana Daggubati revealed that he cannot see anything if he closes his left eye. Watch video here.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X