ಹ್ಯಾಟ್ರಿಕ್ ಡೈರೆಕ್ಟರ್ ಬಗ್ಗೆ ಹ್ಯಾಟ್ರಿಕ್ ಹೀರೋ ಉದುರಿಸಿದ ಮಾತಿನ ಮುತ್ತುಗಳಿವು
'ಕರಿಯಾ', 'ಎಕ್ಸ್ ಕ್ಯೂಸ್ ಮಿ' ಹಾಗೂ 'ಜೋಗಿ'.... ಇಂತಹ ಮೂರ್ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳನ್ನ ಬ್ಯಾಕ್ ಟು ಬ್ಯಾಕ್ ನೀಡಿ ಸ್ಯಾಂಡಲ್ ವುಡ್ ನಲ್ಲಿ 'ಹ್ಯಾಟ್ರಿಕ್ ಡೈರೆಕ್ಟರ್' ಅಂತ ಖ್ಯಾತಿ ಪಡೆದಿರುವ ನಿರ್ದೇಶಕ ಪ್ರೇಮ್.
ಇಂದು 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವ 'ಹ್ಯಾಟ್ರಿಕ್ ಡೈರೆಕ್ಟರ್' ಪ್ರೇಮ್ ಗೆ 'ಹ್ಯಾಟ್ರಿಕ್ ಹೀರೋ' ಶಿವರಾಜ್ ಕುಮಾರ್ ಶುಭಾಶಯ ತಿಳಿಸಿದ್ದಾರೆ. ''ನೂರು ವರ್ಷ ಬದುಕಿ, ಚೆನ್ನಾಗಿ ಬಾಳಿ'' ಎಂದು ವಿಡಿಯೋ ಮೂಲಕ ಶಿವಣ್ಣ ಶುಭ ಹಾರೈಸಿದ್ದಾರೆ.

ಶಿವಣ್ಣ ಆಡಿರುವ ಮಾತುಗಳನ್ನು ಕೇಳಿ ಪ್ರೇಮ್ ಫುಲ್ ಖುಷಿ ಆಗಿದ್ದಾರೆ ಅನ್ನೋದಕ್ಕೆ ಈ ಟ್ವೀಟ್ ಸಾಕ್ಷಿ...
ನಿರ್ದೇಶಕ ಪ್ರೇಮ್ ಹಾಗೂ ಶಿವರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಈಗಾಗಲೇ 'ಜೋಗಿ' ಹಾಗೂ 'ಜೋಗಯ್ಯ' ಸಿನಿಮಾ ಬಂದಿದೆ. ಸದ್ಯ 'ದಿ ವಿಲನ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
'ದಿ ವಿಲನ್' ಮುಗಿದ ಬಳಿಕ ಶಿವಣ್ಣ-ಪ್ರೇಮ್ ಕಾಂಬಿನೇಷನ್ ನಲ್ಲಿ 'ಜಂಗಮ' ಸಿನಿಮಾ ಮೂಡಿಬರಲಿದೆ.
English summary
Kannada Actor Shiva Rajkumar wishes to Director Prem on his 41st birthday. Watch Video
prem shiva rajkumar the villain birthday sandalwood ಪ್ರೇಮ್ ಶಿವರಾಜ್ ಕುಮಾರ್ ದಿ ವಿಲನ್ ಹುಟ್ಟುಹಬ್ಬ ಸ್ಯಾಂಡಲ್ ವುಡ್


Click it and Unblock the Notifications