»   » ವಿಡಿಯೋ ನೋಡಿ: ಕನ್ನಡದ ತಾರೆಯರು ಪ್ರಪೋಸ್ ಮಾಡಿದ್ದು ಹೀಗೆ

ವಿಡಿಯೋ ನೋಡಿ: ಕನ್ನಡದ ತಾರೆಯರು ಪ್ರಪೋಸ್ ಮಾಡಿದ್ದು ಹೀಗೆ

Posted By:
Subscribe to Filmibeat Kannada

ಸಿನಿಮಾ ಅಂದ ಮೇಲೆ ಲವ್ ಮತ್ತು ರೋಮ್ಯಾನ್ಸ್ ದೃಶ್ಯಗಳು ಮಾಮೂಲಿಯಾಗಿ ಇದ್ದೇ ಇರುತ್ತೆ. ಅದ್ರಲ್ಲೂ ಆಗಿನ ಕಾಲದಲ್ಲಿ ಒಬ್ಬ ನಟ ಅಥವಾ ನಟಿ ತಮ್ಮ ತಮ್ಮ ಪ್ರೀತಿ ನಿವೇದನೆ ಮಾಡಿಕೊಳ್ಳುವ ಪರಿ ಮಾತ್ರ ಪ್ರೇಕ್ಷಕರನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತಿತ್ತು.

ಇನ್ನು ಕೆಲವೊಂದು ಸಿನಿಮಾಗಳು ವಿಶೇಷವಾಗಿ ಲವ್ ಪ್ರಪೋಸ್ ಸೀನ್ ಗಳ ಮೂಲಕಾನೇ ತುಂಬಾ ಫೇಮಸ್ ಆಗುತ್ತವೆ. ಇದಕ್ಕೆ ಒಂದು ಉತ್ತಮ ನಿದರ್ಶನ ಅಂದ್ರೆ ನಿರ್ದೇಶಕ ಯೋಗರಾಜ್ ಭಟ್ರ 'ಮುಂಗಾರು ಮಳೆ' ಸಿನಿಮಾ.

Watch Video: Valentine's Day Special-Love proposing Movie Scenes

'ಮುಂಗಾರು ಮಳೆ' ಸಿನಿಮಾದಲ್ಲಿ ನಟ ಗಣೇಶ್ ಮತ್ತು ನಟಿ ಪೂಜಾ ಗಾಂಧಿ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿದ್ದ ಡೈಲಾಗ್ ಗಳು ಇಡೀ ಗಾಂಧಿನಗರದಲ್ಲಿ ಸಖತ್ ಫೇಮಸ್ ಆಗಿತ್ತು.

'ಬಂಧನ' ಸಿನಿಮಾದಲ್ಲಿ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರು ಸುಹಾಸಿನಿ ಅವರಿಗೆ ಯಾವ ಥರ ಲವ್ ಪ್ರಪೋಸ್ ಮಾಡಿದ್ರು, ರವಿಚಂದ್ರನ್ ಅವರು ಜೂಹಿ ಅವರಿಗೆ ತಮ್ಮದೇ ಸ್ಟೈಲ್ ನಲ್ಲಿ ಯಾವ ಥರ ಪ್ರಪೋಸ್ ಮಾಡ್ತಾರೆ. ಶಿವಣ್ಣ ಅವರು 'ಓಂ' ಸಿನಿಮಾದಲ್ಲಿ ಪ್ರೇಮ ಅವರಿಗೆ ಹೇಗೆ ಪ್ರಪೋಸ್ ಮಾಡಿದ್ರು.

ದರ್ಶನ್ ಅವರು 'ಬೃಂದಾವನ' ಸಿನಿಮಾದಲ್ಲಿ ಕಾರ್ತಿಕಾ ನಾಯರ್ ಗೆ ಹೇಗೆ ಪ್ರಪೋಸ್ ಮಾಡಿದ್ರು, ಯಶ್ 'ರಾಮಾಚಾರಿ' ಚಿತ್ರದಲ್ಲಿ ರಾಧಿಕಾ ಪಂಡಿತ್ ಅವರಿಗೆ ಹೇಗೆ ತಮ್ಮ ಪ್ರೀತಿಯನ್ನು ಹೇಳ್ಕೊಂಡ್ರು ಅಂತ ನೋಡಬೇಕಾ ಹಾಗಿದ್ರೆ ಈ ವಿಡಿಯೋ ನೋಡಿ..

Watch Video: Valentine's Day Special-Love proposing Movie Scenes

ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಫಿಲ್ಮಿಬೀಟ್ ಕನ್ನಡ ಓದುಗರಿಗೆ ವಿಶೇಷವಾಗಿ ಸ್ಯಾಂಡಲ್ ವುಡ್ ನ ತಾರೆಯರು ಯಾವ ರೀತಿ ಪ್ರಪೋಸ್ ಮಾಡ್ತಾರೆ ಅನ್ನೋ ವಿಡಿಯೋಗಳ ಕಲೆಕ್ಷನ್ಸ್ ಹೊತ್ತು ತಂದಿದ್ದೇವೆ ನೋಡಿ ಎಂಜಾಯ್ ಮಾಡಿ..

English summary
Watch Video: Valentine's Day Special-Love proposing Movie Scenes. Vishnuvardhan proposing Suhasini 'Bandhana'. Ravichandran proposing Juhi Chawla in 'Premaloka' Movie. Watch hear.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada