ಮಿಸ್ ಮಾಡದೆ ವಿಡಿಯೋ ನೋಡಿ: ವಿದೇಶಿ ಮಹಿಳೆಗೆ ಸ್ಫೂರ್ತಿ ತುಂಬಿದ ಯಶ್.!

By Harshitha

Recommended Video

ಫ್ಯಾನ್ ವಾರ್ ನಡುವೆ ಯಶ್ ಫಿಟ್ನೆಸ್ ವಿಡಿಯೋಗೆ ಫಿದಾ ಆದ ಫಿರಂಗಿ | FIlmibeat Kannada

'ಹಮ್ ಫಿಟ್ ತೋ ಇಂಡಿಯಾ ಫಿಟ್' (#HumFitThoIndiaFit) ಎಂಬ ಹ್ಯಾಶ್ ಟ್ಯಾಗ್ ಅಡಿ ಫಿಟ್ನೆಸ್ ಅಭಿಯಾನವನ್ನು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಆರಂಭಿಸಿದ್ಮೇಲೆ, ಇಡೀ ಭಾರತದಲ್ಲಿ ಈ ಚಾಲೆಂಜ್ ಟ್ರೆಂಡಿಂಗ್ ಆಗಿದೆ.

ಬಾಲಿವುಡ್ ಹಾಗೂ ಕ್ರೀಡಾ ಜಗತ್ತಿನ ಗಣ್ಯರು ಈ ಚಾಲೆಂಜ್ ನ ಸ್ವೀಕರಿಸಿ ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲೂ #HumFitThoIndiaFit ಸವಾಲು ಸದ್ದು ಮಾಡುತ್ತಿದೆ.

#HumFitThoIndiaFit ಚಾಲೆಂಜ್ ನ ಕಿಚ್ಚ ಸುದೀಪ್, ಪವನ್ ಕುಮಾರ್, ಸಂಯುಕ್ತ ಹೊರನಾಡು ಸೇರಿದಂತೆ ಹಲವು ಕನ್ನಡ ನಟ-ನಟಿಯರು ಸ್ವೀಕರಿಸಿದ್ದರು. ಇದೇ ಸವಾಲನ್ನ ಕಿಚ್ಚ ಸುದೀಪ್ ನಟ ಯಶ್ ಗೆ ಹಾಕಿದ್ದಾಗ, ಅದಕ್ಕೆ ಸ್ವಲ್ಪ ಟ್ವಿಸ್ಟ್ ಕೊಟ್ಟಿದ್ದರು ರಾಕಿಂಗ್ ಸ್ಟಾರ್.

Watch Video: Yash inspires foreign lady in fitness challenge

''ಬರೀ ನಾವು ಫಿಟ್ ಆಗಿರುವುದಲ್ಲ... ನಮ್ಮ ಜೊತೆಯಲ್ಲಿ ಇರುವವರನ್ನೂ ಫಿಟ್ ಆಗಿ ಇರುವಂತೆ ನೋಡಿಕೊಳ್ಳೋಣ'' ಎನ್ನುತ್ತ ತಮ್ಮ ಆತ್ಮೀಯ ಸ್ನೇಹಿತ ಚೇತನ್ ಕೈಯಲ್ಲಿ ವ್ಯಾಯಾಮ ಮಾಡಿಸಿ ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು ನಟ ಯಶ್.

ನಟ ಯಶ್ ರವರ ಈ ವಿಡಿಯೋ ನೋಡಿ ವಿದೇಶಿ ಮಹಿಳೆ ಸ್ಫೂರ್ತಿ ಪಡೆದಿದ್ದಾರೆ. ''ನಮ್ಮ ಜೊತೆಗೆ ಇರುವವರನ್ನೂ ನಾವು ಫಿಟ್ ಆಗಿ ಇಡಬೇಕು'' ಎಂದು ನಟ ಯಶ್ ಹೇಳಿದ ಮಾತಿನಿಂದ ಪ್ರೇರಣೆಗೊಂಡು ಆ ವಿದೇಶಿ ಮಹಿಳೆ ತಮ್ಮ ಸ್ನೇಹಿತೆ ಕೈಯಲ್ಲಿ ವ್ಯಾಯಾಮ ಮಾಡಿಸಿದ್ದಾರೆ. ಇದನ್ನ ನೋಡಿ ನಟ ಯಶ್ ಖುಷಿ ಪಟ್ಟಿದ್ದಾರೆ.

ಅಂದ್ಹಾಗೆ, ನೀವು #HumFitThoIndiaFit ಚಾಲೆಂಜ್ ಸ್ವೀಕರಿಸಿದ್ದೀರಾ.? ನಿಮ್ಮ ಅಕ್ಕ-ಪಕ್ಕದವರನ್ನೂ ಫಿಟ್ ಆಗಿ ಇಡಲು ಮುಂದಾಗಿದ್ದೀರಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Watch Video: Yash inspires foreign lady in fitness challenge. #HumFitThoIndiaFit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X