»   » 'ವ್ಯೂಹ' ರಾಜಕಾರಣ ರಸಾಯನ ಹೂರಣ

'ವ್ಯೂಹ' ರಾಜಕಾರಣ ರಸಾಯನ ಹೂರಣ

Posted By:
Subscribe to Filmibeat Kannada

ತೆಲುಗು ಮೂಲದ ಸಂಗೀತ ನಿರ್ದೇಶಕ ಆರ್ ಪಿ ಪಟ್ನಾಯಕ್ ಅವರು ಪ್ರಥಮ ಬಾರಿಗೆ ಕನ್ನಡ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಬೆಂಗಳೂರಿನ ಮಾಲ್ ವೊಂದರಲ್ಲಿ ಬಿಡುಗಡೆ ಮಾಡಿದರು. ವಿನೋದ್ ನಾಗೇಶ್ ಅವರ ನಿರ್ಮಾಣದ ಈ ಚಿತ್ರ ಪೊಲಿಟಿಕಲ್ ಥ್ರಿಲ್ಲರ್ ಎಂದು ನಿರ್ದೇಶಕರು ಸಾರಿದ್ದಾರೆ.

ಪೊಲೀಸ್ ಅಧಿಕಾರಿಯಾಗಿ ಪ್ರಿಯಾಮಣಿ ಕಾಣಿಸಿಕೊಂಡಿದ್ದರೆ, ರಂಗಾಯಣ ರಘು ರಾಜಕಾರಣಿ ಟೋಪಿ ಧರಿಸಿದ್ದಾರೆ. ಉಳಿದಂತೆ ಪ್ರತಾಪ್ ರಾಜ್, ಅಭಿನವ್, ಶೆರಿನಾ ಮುಂತಾದ ಹೊಸಬರಿಗೆ ಅವಕಾಶ ನೀಡಲಾಗಿದೆ.

ಹಾಸ್ಯ ವಿಭಾಗದಲ್ಲಿ ಸಾಧು ಕೋಕಿಲ, ತಬ್ಲಾ ನಾಣಿ, ಮಿತ್ರ ಕಾಣಿಸಿಕೊಂಡಿದ್ದರೆ, ಆರ್ ಪಿ ಪಟ್ನಾಯಕ್ ಅವರು ಕೂಡಾ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸಂಗೀತ ನಿರ್ದೇಶಕ, ಗಾಯಕರಾಗಿ ಯಶಸ್ಸು ಕಂಡಿರುವ ಆರ್ ಪಿ ಅವರು ಈಗ ಕನ್ನಡದಲ್ಲಿ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ.ವ್ಯೂಹ ಚಿತ್ರದ ಟ್ರೇಲರ್ ಸ್ಟಿಲ್ಸ್ ಹಾಗೂ ಇನ್ನಿತರ ವಿವರ ಮುಂದೆ ನೋಡಿ...

ಪ್ರಥಮ ಬಾರಿಗೆ ನಿರ್ದೇಶಕರಾಗಿ ಆರ್ ಪಿ

ಮ್ಯಾಗ್ನಂ ಪಿಕ್ಚರ್ಸ್ ನಿರ್ಮಾಣದ ವ್ಯೂಹ ಚಿತ್ರಕ್ಕೆ ಪ್ರಥಮ ಬಾರಿಗೆ ಚಿತ್ರಕ್ಕೆ ಕಥೆ ಒದಗಿಸಿ ಆರ್ ಪಿ ಪಟ್ನಾಯಕ್ ನಿರ್ದೇಶಕರಾಗಿದ್ದರೆ, ವಿನೋದ್ ಹಾಗೂ ನಾಗೇಶ್ ನಿರ್ಮಾಪಕರಾಗಿದ್ದಾರೆ. ಡಾ.ನಾಗೇಂದ್ರ ಪ್ರಸಾದ್ ಅವರು ಸಂಭಾಷಣೆ ಬರೆದಿರುವುದು ವಿಶೇಷ.

ಯುವಕರಿಗೆ ನೀತಿ ಪಾಠ

ಯುವಕರಿಗೆ ನೀತಿ ಪಾಠ, ರಾಜಕೀಯ ದೊಂಬರಾಟ, ಆಗಾಗ ಹಾಸ್ಯದೂಟ ಈ ಚಿತ್ರದಲ್ಲಿದೆಯಂತೆ. ರಾಜಕೀಯ ಹುಳುಕುಗಳನ್ನು ಎತ್ತಿ ಹಿಡಿಯುವುದರ ಜೊತೆಗೆ ಒಳ್ಳೆ ಥ್ರಿಲ್ಲಿಂಗ್ ಅನುಭವ ನೀಡಲಿದೆಯಂತೆ

ಪ್ರಿಯಾಮಣಿ ಪ್ರಮುಖ ಪಾತ್ರ

ಪ್ರಿಯಾಮಣಿ ಅವರದ್ದು ಖಡಕ್ ಪೊಲೀಸ್ ಅಧಿಕಾರಿ ಪಾತ್ರ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕ್ಲಾಸ್ ಹಾಗೂ ಮಾಸ್ ಗಳಿಗೆ ಒಗ್ಗಿಕೊಂಡಿದ್ದು, ಕನ್ನಡದಲ್ಲಿ ಲಕ್ಷ್ಮಿ ಚಿತ್ರದಲ್ಲಿ ಶಿವರಾಜ್ ಸರಿ ಸಮಾನವಾಗಿ ಸಿಬಿಐ ಏಜೆಂಟ್ ಆಗಿ ಕಾಣಿಸಿಕೊಂಡಿದ್ದರು.

ಆರ್ ಪಿ ಪಟ್ನಾಯಕ್ ನಟನೆ

ನುವ್ವು ನೇನು ಚಿತ್ರದ ಸಂಗೀತದ ಮೂಲಕ ನಂದಿ ಪ್ರಶಸ್ತಿಯನ್ನು ಬಾಚಿದ ಆರ್ ಪಿ ಅವರು ಜಯಂ, ಚಿತ್ರಂ, ದಿಲ್ ಮುಂತಾದ ಹಿಟ್ ಸಂಗೀತ ಆಲ್ಬಂಗಳನ್ನು ನೀಡಿದ್ದಾರೆ. ಕನ್ನಡದಲ್ಲಿ ಎಕ್ಸ್ ಕ್ಯೂಸ್ ಮಿ ಚಿತ್ರಕ್ಕೆ ಸಂಗೀತ ನೀಡಿ ಗಾಯನ ಕೂಡಾ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದರು.

ಚಿತ್ರ ಬಿಡುಗಡೆ ಯಾವಾಗ?

ವ್ಯೂಹ ಚಿತ್ರ ಬಿಡುಗಡೆ ಬಗ್ಗೆ ಇನ್ನೂ ಯಾವುದೇ ಸುದ್ದಿ ಬಂದಿಲ್ಲ. ಪೋಸ್ಟ್ ಪ್ರೊಡಕ್ಷನ್ ಮುಗಿಸಿಕೊಂಡು ಸೆನ್ಸಾರ್ ಗಾಗಿ ಚಿತ್ರ ಕಾದಿದೆ.

ವ್ಯೂಹ ಚಿತ್ರದ ಟ್ರೇಲರ್ ನೋಡಿ

ವ್ಯೂಹ ಚಿತ್ರದ ಟ್ರೇಲರ್ ನೋಡಿ ಆನಂದಿಸಿ

English summary
Vyuha is a Kannada political thriller written and directed by RP Patnaik and produced by S. Vinod Nagesh. The star cast includes Priyamani, RP Patnaik, Rangaraya Raghu, Prathap Raj, Abhinav, Sherrina, Sadhu Kokila, Mitra, Tabla Nani and Pavan

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X