ಟ್ರೈಲರ್: 'ಕೆಜಿಎಫ್' ಚಿನ್ನದ ಗಣಿಯಲ್ಲಿ ಎದ್ದು ನಿಂತ ಬೆಂಕಿಯ ಚೆಂಡು
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್' ಸಿನಿಮಾದ ಟ್ರೈಲರ್ ಅದ್ಧೂರಿಯಾಗಿ ಲಾಂಚ್ ಆಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಟ್ರೈಲರ್ ತೆರೆಕಂಡಿದೆ.
ಭಾರಿ ಕುತೂಹಲ ಮೂಡಿಸಿದ್ದ 'ಕೆಜಿಎಫ್' ಟ್ರೈಲರ್ ನಿರೀಕ್ಷೆಗೆ ತಕ್ಕಂತೆ ಧೂಳೆಬ್ಬಿಸಿದೆ. ಟ್ರೈಲರ್ ಪ್ರತಿ ದೃಶ್ಯವೂ ಬೆಂಕಿಯಂತೆ ಧಗಧಗ ಎನ್ನುತ್ತಿದೆ. ನೋಡುಗರನ್ನ ಗಣಿ ಲೋಕಕ್ಕೆ ಕರೆದುಕೊಂಡು ಹೋಗುವಂತಹ ಮೇಕಿಂಗ್ ಅಷ್ಟು ಅದ್ಧೂರಿಯಾಗಿದೆ.
ಯಶ್ ಹಾಗೂ ಕನ್ನಡ ಕಲಾಭಿಮಾನಿಗಳಿಗಂತೂ ಇದು ದೀಪಾವಳಿ ಹಬ್ಬದ ಬಹುದೊಡ್ಡ ಬಾಂಬ್ ಎನ್ನಬಹುದು. ಈ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಹಲವು ಸ್ಟಾರ್ ಗಳು ಭಾಗಿಯಾಗಿದ್ದರು. ರೆಬೆಲ್ ಸ್ಟಾರ್ ಅಂಬರೀಶ್, ತಮಿಳು ನಟ ವಿಶಾಲ್ ಸೇರಿದಂತೆ ಪರಭಾಷೆಯ ವಿತರಕರು, ನಿರ್ಮಾಪಕರು ಆಗಮಿಸಿದ್ದಾರೆ. ಮುಂದೆ ಓದಿ....

ಚಿನ್ನದ ಗಣಿಯೇ ಆಕರ್ಷಣೆ
ಕೆಜಿಎಫ್ ಸಿನಿಮಾದಲ್ಲಿ ಆಲ್ ಮೋಸ್ಟ್ ಚಿನ್ನದ ಗಣಿ ಪ್ರಮುಖ ಆಕರ್ಷಣೆಯಾಗಿರುತ್ತೆ. ಇದು ಟ್ರೈಲರ್ ನಲ್ಲೂ ಸಾಬೀತಾಗಿದೆ. ಇಡೀ ಸಿನಿಮಾ ಮೈನಿಂಗ್ ಸುತ್ತ ನಡೆಯಲಿದೆ ಎಂಬುದಕ್ಕೆ ಈ ಟ್ರೈಲರ್ ಸುಳಿವು ನೀಡಿದೆ.

1951 ರಿಂದ ಕಥೆ ಆರಂಭ
ಈ ಮೊದಲೇ ಹೇಳಿದಾಗೆ ಇದು 80 ದಶಕ ಸಿನಿಮಾ. ಹಾಗಾಗಿ, ಅದಕ್ಕೆ ಹಿನ್ನೆಲೆ ಎಂಬಂತೆ 1951ರಿಂದಲೇ ಕಥೆ ಆರಂಭವಾಗಲಿದೆ. ಬಹುಶಃ ಇಲ್ಲಿಂದನೇ ಕೋಲಾರದ ಚಿನ್ನದ ಗಣಿ ಕೂಡ ಸೃಷ್ಟಿಯಾಯಿತು ಎಂಬ ಇತಿಹಾಸವಿದೆ. ಅದಕ್ಕಾಗಿಯೇ ಅದಕ್ಕೊಂದು ಫ್ಲ್ಯಾಶ್ ಬ್ಯಾಕ್ ಕೂಡ ಟ್ರೈಲರ್ ನಲ್ಲಿದೆ.

ಮುಂಬೈ ಟು ಕೆಜಿಎಫ್
ಕೆಜಿಎಫ್ ಅಂದಾಕ್ಷಣ ಇಡೀ ಸಿನಿಮಾ ಕೋಲಾರದಲ್ಲಿ ನಡೆಯಲಿದೆ ಎಂದು ಊಹಿಸಿದ್ದರೆ ತಪ್ಪು. ಮುಂಬೈನಿಂದ ಈ ಕಥೆ ಆರಂಭವಾಗಲಿದೆ. ಕೆಜಿಎಫ್ ಸಿನಿಮಾದ ಟ್ರೈಲರ್ ಹೇಳುವಂತೆ ಇಲ್ಲಿ ರಾಜಕೀಯ, ಅಂಡರ್ ವರ್ಲ್ಡ್, ಪ್ರೀತಿ, ಜನ, ಹೀಗೆ ಹತ್ತು ಹಲವು ಅಂಶಗಳನ್ನ ಒಳಗೊಂಡಿದೆ.

ಮೇಕಿಂಗ್ ಬಗ್ಗೆ ಹೇಳಲೇಬೇಕು
ಇನ್ನು ಕೆಜಿಎಫ್ ಚಿತ್ರದ ಮೇಕಿಂಗ್ ಬಗ್ಗೆ ಹೇಳಲೇಬೇಕು. ನಿರ್ದೇಶಕ ಪ್ರಶಾಂತ್ ನೀಲ್ ಎರಡು ವರ್ಷ ಸಮಯ ತೆಗೆದುಕೊಂಡು ಏನು ಮಾಡಿದ್ದರು ಎನ್ನುವುದು ಈ ಟ್ರೈಲರ್ ಹೇಳುತ್ತಿದೆ. ಚಿನ್ನದ ಗಣಿಯನ್ನ ಮತ್ತೆ ಸೃಷ್ಟಿಸಿದ್ದಾರೆ. 80 ದಶಕವನ್ನ ಮತ್ತೆ ಕ್ರಿಯೇಟ್ ಮಾಡಿದ್ದಾರೆ. ಪ್ರತಿಯೊಂದು ದೃಶ್ಯವೂ ವಾವ್ ಎನ್ನುವಂತಿದೆ. ಪ್ರತಿಯೊಂದು ಪಾತ್ರವೂ ಅದ್ಭುತವಾಗಿದೆ. ಬಹುಶಃ ಕೆಜಿಎಫ್ ಕನ್ನಡ ಚಿತ್ರರಂಗದ ಬಾಹುಬಲಿ, ರಕ್ತಚರಿತ್ರೆ, ಇನ್ನೊಂದು ಮಗದೊಂದು ಎಲ್ಲವೂ ಆಗಲಿದೆ.


Click it and Unblock the Notifications











