twitter
    For Quick Alerts
    ALLOW NOTIFICATIONS  
    For Daily Alerts

    KCC ಟೂರ್ನಿಗೆ ದರ್ಶನ್ ಯಾಕೆ ಬರಲಿಲ್ಲ? ಎಂಬ ಪ್ರಶ್ನೆಗೆ ಕಿಚ್ಚನ ಉತ್ತರ!

    |

    Recommended Video

    KCC Cricket 2018: ಕೆಸಿಸಿಗೆ ದರ್ಶನ್ ಬಾರದೆ ಇರುವುದಕ್ಕೆ ಕಿಚ್ಚ ಹೇಳಿದ್ದೇನು..? | Filmibeat Kannada

    ಕರ್ನಾಟಕ ಚಲನಚಿತ್ರ ಕಪ್ (ಕೆಸಿಸಿ) ಕ್ರಿಕೆಟ್ ಟೂರ್ನಿ ಶುರುವಾಗುವುದಕ್ಕೆ ದಿನಗಣನೆ ಶುರವಾಗಿದೆ. ಸೆಪ್ಟೆಂಬರ್ 8ರಿಂದ ಪಂದ್ಯಗಳು ಪ್ರಾರಂಭ ಅಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊರತು ಪಡಿಸಿ ಕನ್ನಡ ಚಿತ್ರರಂಗದ ಬಹುತೇಕ ಸ್ಟಾರ್ ನಟರು ಇದರಲ್ಲಿ ಭಾಗಿಯಾಗುತ್ತಿದ್ದಾರೆ.

    ನಟರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಸುದೀಪ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಒಂದೊಂದು ಟೀಂ ಮೈದಾನಕ್ಕೆ ಇಳಿಯಲಿದೆ. ಆದರೆ, ದರ್ಶನ್ ಮಾತ್ರ ಈ ಟೂರ್ನಿಯಿಂದ ಆಚೆ ಇದ್ದಾರೆ.

    ಕಿಚ್ಚ ಸುದೀಪ್ ನೇತೃತ್ವದಲ್ಲಿ, ಅಂತಾರಾಷ್ಟ್ರೀಯ ಖ್ಯಾತಿಯ ಹಲವಾರು ಮಾಜಿ ಕ್ರಿಕೆಟ್ ಆಟಗಾರರು ಕೂಡ ಭಾಗವಹಿಸುತ್ತಿರುವ, ಸೆ.8 ಶನಿವಾರದಿಂದ ನಡೆಯುತ್ತಿರುವ ಈ ಟೂರ್ನಿಗೆ ದರ್ಶನ್ ಯಾಕೆ ಬರಲಿಲ್ಲ ಎಂಬ ದೊಡ್ಡ ಪ್ರಶ್ನೆ ಎಲ್ಲರಲ್ಲಿ ಕಾಡುತ್ತಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಉತ್ತರ ಕೊಟ್ಟಿದ್ದಾರೆ. ದರ್ಶನ್ ಯಾಕೆ ಬರಲಿಲ್ಲ, ಯಾರ್ಯಾರ ನಡುವೆ ಪಂದ್ಯಗಳು ನಡೆಯಲಿವೆ ಎಂಬುದನ್ನು ಮುಂದೆ ಓದಿ...

    ಇಂದು ನಡೆದ ಸುದ್ದಿಗೋಷ್ಠಿ

    ಇಂದು ನಡೆದ ಸುದ್ದಿಗೋಷ್ಠಿ

    ಕೆಸಿಸಿ ಕ್ರಿಕೆಟ್ ಟೂರ್ನಿಗೆ ಸಂಬಂಧಪಟ್ಟಂತೆ ಇಂದು ಒಂದು ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಟ ಸುದೀಪ್ ಭಾಗಿಯಾಗಿದ್ದರು. ಈ ವೇಳೆ ದರ್ಶನ್ ಅವರ ಬಗ್ಗೆ ಕಿಚ್ಚ ಮಾತನಾಡಿದ್ದಾರೆ.

    ಅವರು ಬರಬಾರದು ಅಂತ ಯಾರು ತಡೆದಿಲ್ಲ

    ಅವರು ಬರಬಾರದು ಅಂತ ಯಾರು ತಡೆದಿಲ್ಲ

    ''ಕೆಸಿಸಿ ಕ್ರಿಕೆಟ್ ಟೂರ್ನಿಗೆ ಚಾಲೆಂಜಿಂಗ್ ಸ್ಟಾರ್ ಬರದೆ ಇರುವ ವಿಚಾರದ ಬಗ್ಗೆ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ''ಅವರು ಬರಬಾರದು ಅಂತ ಯಾರು ತಡೆದಿಲ್ಲ. ಸಮಸ್ಯೆ ಎಲ್ಲಿ ಆಗಿದೆಯೋ ಅಲ್ಲೇ ಪರಿಹಾರ ಆಗ್ಬೇಕು. ನಾವು ಯಾರಿಗೂ ಬರಬಾರದು ಅಂತ ಗೇಟ್ ಹಾಕಿಲ್ಲ. ಇದು ಒಳ್ಳೆ ವಿಚಾರಕ್ಕಾಗಿ ಆಡುತ್ತಿರುವ ಪಂದ್ಯಾವಳಿ.'' ಎಂದು ಸುದೀಪ್ ಹೇಳಿಕೆ ನೀಡಿದ್ದಾರೆ.

     ಸುದೀಪ್ ಮಾತಿನ ಅರ್ಥ ಏನು?

    ಸುದೀಪ್ ಮಾತಿನ ಅರ್ಥ ಏನು?

    ದರ್ಶನ್ ಕೆಸಿಸಿ ಟೂರ್ನಿಗೆ ಬರದೆ ಇರುವ ಬಗ್ಗೆ ಸುದೀಪ್ ಕೊನೆಗೂ ಮಾತನಾಡಿದ್ದಾರೆ. ದರ್ಶನ್ ಟೂರ್ನಿಗೆ ಬಂದರೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಸುದೀಪ್ ಮಾತನ್ನು ಕೇಳುತ್ತಿದ್ದರೆ ಇನ್ನೊಂದು ಕಡೆ ದರ್ಶನ್ ಗೆ ಕೆಸಿಸಿ ಟೂರ್ನಿಗೆ ಆಹ್ವಾನ ಹೋಗಿರುವುದು ಅನುಮಾನ.

    ಸೆಪ್ಟಂಬರ್ 8 ರಿಂದ ಪಂದ್ಯ ಶುರು

    ಸೆಪ್ಟಂಬರ್ 8 ರಿಂದ ಪಂದ್ಯ ಶುರು

    ಸೆಪ್ಟಂಬರ್ 8 ರಂದು ಕೆಸಿಸಿಯ ಮೊದಲ ಪಂದ್ಯ ನಡೆಯಲಿದೆ. ಮೊದಲ ದಿನ ಮಧ್ಯಾಹ್ನ 1.30ಕ್ಕೆ ಒಡೆಯರ್ ಚಾರ್ಜಸ್ ವರ್ಸಸ್ ಕದಂಬ ಲಯನ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ. ನಂತರ 3.45ಕ್ಕೆ ರಾಷ್ಟ್ರಕೂಟ ಪ್ಯಾಂಥರ್ಸ್ ವರ್ಸಸ್ ವಿಜಯನಗರ ಪೇಟ್ರಿಯಟ್ಸ್ ಪಂದ್ಯ ಜರುಗಲಿದೆ. ಆಮೇಲೆ 6 ಗಂಟೆಗೆ ಹೊಯ್ಸಳ ಈಗಲ್ಸ್ ವರ್ಸಸ್ ಒಡೆಯರ್ ಚಾರ್ಜಸ್ ಪಂದ್ಯ ಆರಂಭವಾಗಲಿದೆ. ಮೊದಲ ದಿನದ ಕೊನೆಯ ಪಂದ್ಯ ವಿಜಯನಗರ ಪೇಟ್ರಿಯಟ್ಸ್ ವರ್ಸಸ್ ಗಂಗಾ ವಾರಿಯರ್ಸ್ ನಡುವೆ ನಡೆಲಿದೆ.

    ನಂತರದ ಪಂದ್ಯಗಳು

    ನಂತರದ ಪಂದ್ಯಗಳು

    ಎರಡನೇ ದಿನ ಮಧ್ಯಾಹ್ನ 2 ಗಂಟೆಗೆ ಗಂಗಾ ವಾರಿಯರ್ಸ್ ವರ್ಸಸ್ ರಾಷ್ಟ್ರಕೂಟ ಪ್ಯಾಂಥರ್ಸ್ ಪಂದ್ಯ ಜರುಗಲಿದೆ. ಸಂಜೆ 4.15ಕ್ಕೆ ಕದಂಬ ಲಯನ್ಸ್ ವರ್ಸಸ್ ಹೊಯ್ಸಳ ಈಗಲ್ಸ್ ಪಂದ್ಯ ಆರಂಭವಾಗಲಿದೆ. ಲೀಗ್ ಹಂತದ ಪಂದ್ಯಗಳು ಇಲ್ಲಿಗೆ ಮುಕ್ತಾಯವಾಗಲಿದ್ದು, ರಾತ್ರಿ 8.15ಕ್ಕೆ ಎರಡು ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.

    ಕ್ರಿಕೆಟ್ ದಿಗ್ಗಜರ ಸಾಥ್

    ಕ್ರಿಕೆಟ್ ದಿಗ್ಗಜರ ಸಾಥ್

    ಅಂತಾರಾಷ್ಟ್ರೀಯ ಆಟಗಾರರಾದ ವಿರೇಂದ್ರ ಸೆಹ್ವಾಗ್ ಕದಂಬ ಲಯನ್ಸ್ ನಲ್ಲಿ ಆಟವಾಡಿದ್ರೆ, ಹರ್ಷೆಲ್​ ಗಿಬ್ಸ್ ಹೊಯ್ಸಳ ಈಗಲ್ಸ್, ತಿಲಕರತ್ನೆ ದಿಲ್ಸ್ಯಾನ್ ಒಡೆಯರ್ ಚಾರ್ಜರ್ಸ್, ಲ್ಯಾನ್ಸ್​ ಕ್ಲೂಸ್ನರ್ ಗಂಗಾ ವಾರಿಯರ್ಸ್, ಓವೈ ಷಾ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ಆಡಂ ಗಿಲ್​ಕ್ರಿಸ್ಟ್ ವಿಜಯನಗರ ಪೇಟ್ರಿಯಟ್ಸ್ ತಂಡದಲ್ಲಿ ಆಡಲಿದ್ದಾರೆ.

    English summary
    : Way actor Darshan is not be part of KCC cricket tournament.
    Sunday, September 9, 2018, 11:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X