twitter
    For Quick Alerts
    ALLOW NOTIFICATIONS  
    For Daily Alerts

    'ಜೇಮ್ಸ್' ಸಿನಿಮಾ ಬಿಡುಗಡೆಗೆ ಸಿದ್ಧ, ಆದರೆ...?

    |

    ಪುನೀತ್ ರಾಜ್‌ಕುಮಾರ್ ನಟಿಸಿರುವ ಕೊನೆಯ ಸಿನಿಮಾಗಳಲ್ಲಿ ಒಂದಾದ 'ಜೇಮ್ಸ್' ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

    'ಜೇಮ್ಸ್' ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಪುನೀತ್ ಮುಗಿಸಿಬಿಟ್ಟಿದ್ದರು. ಒಂದು ಹಾಡಿನ ಚಿತ್ರೀಕರಣವಷ್ಟೆ ಬಾಕಿ ಇತ್ತು. ಅದನ್ನು ಸಿನಿಮಾದಿಂದ ಕೈಬಿಡಲು ನಿರ್ದೇಶಕರು ನಿರ್ಧರಿಸಿದ್ದಾರೆ. ಇನ್ನು ಸಿನಿಮಾದಲ್ಲಿ ಪುನೀತ್ ಪಾತ್ರಕ್ಕೆ ದನಿ ಯಾರು ನೀಡಬೇಕು ಎಂಬುದು ಸಮಸ್ಯೆಯಾಗಿತ್ತು. ಅದಕ್ಕೂ ಚಿತ್ರತಂಡ ಪರಿಹಾರ ಕಂಡುಕೊಂಡಿದೆ.

    ಇದೀಗ ಸಿನಿಮಾದ ಬಿಡುಗಡೆ ಬಗ್ಗೆ ಈಗಾಗಲೇ ಗುಲ್ಲೆದ್ದಿದ್ದು, ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು (ಮಾರ್ಚ್ 17) ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಆದರೆ ಇದಕ್ಕೆ ಕೆಲವು ಸಣ್ಣ ಅಡೆತಡೆಗಳಿವೆ. ಈ ಬಗ್ಗೆ ನಿರ್ಮಾಪಕ ಕಿಶೋರ್ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದಾರೆ.

    ''ಜೇಮ್ಸ್' ಸಿನಿಮಾವನ್ನು ಪುನೀತ್ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡುವುದಾಗಿ ಅವರು ಬದುಕಿದ್ದಾಗಲೇ ನಿಶ್ಚಯಿಸಿದ್ದೆವು. ಅಂತೆಯೇ ಸಿನಿಮಾದ ಚಿತ್ರೀಕರಣ ಮುಗಿಸಿದ್ದೇವೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಫೆಬ್ರವರಿ ಅಂತ್ಯದ ವೇಳೆಗೆ ಪೂರ್ಣವಾಗಲಿದೆ. ಸಿನಿಮಾವನ್ನು ಮಾರ್ಚ್ 17ಕ್ಕೆ ಬಿಡುಗಡೆ ಮಾಡಲು ನಾವು ಮಾನಸಿಕವಾಗಿ ಸಿದ್ಧರಾಗಿದ್ದೇವೆ'' ಎಂದಿದ್ದಾರೆ ಕಿಶೋರ್.

    ''ಆ ವೇಳೆಗೆ ಕೊರೊನಾ ಪ್ರಕರಣಗಳು ಕಡಿಮೆಯಾಗಿ ಚಿತ್ರಮಂದಿರಗಳು 100% ಸೀಟು ಸಾಮರ್ಥ್ಯದೊಂದಿಗೆ ಕೆಲಸ ಮಾಡುವ ನಿರೀಕ್ಷೆ ಇದೆ. ಒಂದೊಮ್ಮೆ 50% ಸೀಟು ಸಾಮರ್ಥ್ಯವಿದ್ದರೂ ಸರಿ ನಾವು ಅದೇ ದಿನ ಬಿಡುಗಡೆ ಮಾಡುತ್ತೇವೆ. ಈ ಬಗ್ಗೆ ನಮಗೆ ಸ್ಪಷ್ಟತೆ ಇದೆ'' ಎಂದಿದ್ದಾರೆ ನಿರ್ಮಾಪಕ ಕಿಶೋರ್.

    ಅಭಿಮಾನಿಗಳನ್ನು ನಿಯಂತ್ರಿಸುವುದು ಕಷ್ಟವಾಗಬಹುದು

    ಅಭಿಮಾನಿಗಳನ್ನು ನಿಯಂತ್ರಿಸುವುದು ಕಷ್ಟವಾಗಬಹುದು

    ''ಆದರೆ ಕೆಲವು ಸಿನಿಮಾ ವಿತರಕರು ಒಂದು ಆತಂಕ ವ್ಯಕ್ತಪಡಿಸಿದ್ದಾರೆ. ಚಿತ್ರಮಂದಿರಗಳು ಪೂರ್ತಿಯಾಗಿ ತೆರೆದಿದ್ದಾಗಲೇ ಪುನೀತ್ ಸಿನಿಮಾಕ್ಕೆ ಅಭಿಮಾನಿಗಳನ್ನು ನಿಯಂತ್ರಿಸುವುದು ಕಷ್ಟ. ಅದರಲ್ಲಿ 50% ನಿಯಮ ಜಾರಿಯಲ್ಲಿದ್ದಾಗ ಬಿಡುಗಡೆ ಮಾಡಿದರೆ ಅಭಿಮಾನಿಗಳನ್ನು ನಿಯಂತ್ರಿಸುವುದು ಇನ್ನೂ ಕಷ್ಟವಾಗುತ್ತದೆ. ನಿಯಮ ಉಲ್ಲಂಘನೆಯಾಗುತ್ತದೆ' ಎಂದಿದ್ದಾರೆ. ಈ ಬಗ್ಗೆಯೂ ನಾವು ಚಿಂತಿಸುತ್ತಿದ್ದೇವೆ. ಆದರೆ ಸಿನಿಮಾ ಬಿಡುಗಡೆ ವೇಳೆಗೆ ಕೋವಿಡ್ ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದೆ'' ಎಂದಿದ್ದಾರೆ ಕಿಶೋರ್.

    ಬೇರೆ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ

    ಬೇರೆ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ

    ''ಜೇಮ್ಸ್' ಸಿನಿಮಾ ಮಾರ್ಚ್ 17 ಕ್ಕೆ ಬಿಡುಗಡೆ ಆಗುತ್ತಿದೆ ಎಂಬ ಕಾರಣಕ್ಕೆ ಆ ಸಮಯದಲ್ಲಿ ಇನ್ಯಾವುದೇ ಸಿನಿಮಾವನ್ನು ಬಿಡುಗಡೆ ಮಾಡುತ್ತಿಲ್ಲ. 'ಆರ್‌ಆರ್‌ಆರ್‌' ಸಿನಿಮಾ ಮಾರ್ಚ್ 18ಕ್ಕೆ ಬಿಡುಗಡೆ ಮಾಡಲು ಸಜ್ಜಾಗಿತ್ತು. ಆದರೆ ಕರ್ನಾಟಕದ ವಿತರಕರು ಆ ದಿನಾಂಕದಂದು ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದ ಕಾರಣಕ್ಕೆ 'ಆರ್ಆರ್ಆರ್' ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. 'ಆರ್‌ಆರ್‌ಆರ್‌' ಮಾತ್ರವಲ್ಲ ಇನ್ಯಾವುದೇ ಸಿನಿಮಾಗಳನ್ನು ಮಾರ್ಚ್ 17 ಹಾಗೂ ಬಳಿಕ ಒಂದು ವಾರ ಬಿಡುಗಡೆ ಮಾಡಲಾಗುತ್ತಿಲ್ಲ.

    ಪುನೀತ್ ಧ್ವನಿಯನ್ನೇ ಉಳಿಸಿಕೊಳ್ಳಲಿದೆ ಚಿತ್ರತಂಡ

    ಪುನೀತ್ ಧ್ವನಿಯನ್ನೇ ಉಳಿಸಿಕೊಳ್ಳಲಿದೆ ಚಿತ್ರತಂಡ

    'ಜೇಮ್ಸ್' ಸಿನಿಮಾದಲ್ಲಿ ಪುನೀತ್ ಪಾತ್ರಕ್ಕೆ ಧ್ವನಿ ನೀಡುವ ಸಮಸ್ಯೆಗೆ ಚಿತ್ರತಂಡ ಪರಿಹಾರ ಕಂಡುಕೊಂಡಿದೆ. ''ಚಿತ್ರೀಕರಣದ ಸಮಯದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಪುನೀತ್ ರಾಜ್‌ಕುಮಾರ್ ಧ್ವನಿಯನ್ನು ನಾವು ಈಗಾಗಲೇ ಪುಣೆ, ಹೈದರಾಬಾದ್, ಮುಂಬೈ ಹಾಗೂ ಲಂಡನ್‌ಗೆ ಕಳುಹಿಸಿದ್ದೇವೆ. ಅವರು ಅದೇ ಧ್ವನಿಯನ್ನು ಪರೀಷ್ಕರಿಸಿ ಉತ್ತಮಗೊಳಿಸಿ ನೀಡುತ್ತಾರೆ. ಯಾರು ನೀಡುವ ಧ್ವನಿಯ ಗುಣಮಟ್ಟ ಚೆನ್ನಾಗಿರುತ್ತದೆಯೋ ಆ ಧ್ವನಿಯನ್ನು ನಾವು ಉಳಿಸಿಕೊಳ್ಳಲಿದ್ದೇವೆ'' ಎಂದಿದ್ದಾರೆ ನಿರ್ಮಾಪಕ ಕಿಶೋರ್.

    ಚೇತನ್ ಕುಮಾರ್ ನಿರ್ದೇಶನದ ಸಿನಿಮಾ

    ಚೇತನ್ ಕುಮಾರ್ ನಿರ್ದೇಶನದ ಸಿನಿಮಾ

    ಪುನೀತ್ ರಾಜ್‌ಕುಮಾರ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸಿದ ಕೊನೆಯ ಸಿನಿಮಾ 'ಜೇಮ್ಸ್'. ಈ ಸಿನಿಮಾವನ್ನು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಕಿಶೋರ್ ಪಾತಿಕೊಂಡ ನಿರ್ಮಾಣ ಮಾಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆನಂದ್ ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ತೆಲುಗಿನ ಶ್ರೀಕಾಂತ್, ನಟಿ ಅನು ಪ್ರಭಾಕರ್, ನಟ ಅವಿನಾಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ಸಿನಿಮಾದ ವಿಶೇಷ ಪೋಸ್ಟರ್ ನಾಳೆ (ಜನವರಿ 26) ಬಿಡುಗಡೆ ಆಗಲಿದೆ. ಈ ಸಿನಿಮಾದ ಬಳಿಕ ಪುನೀತ್ ಅತಿಥಿ ಪಾತ್ರದಲ್ಲಿ ನಟಿಸಿದ್ದ 'ಲಕ್ಕಿ ಮ್ಯಾನ್' ಬಿಡುಗಡೆ ಆಗಲಿದೆ. ಬಳಿಕ ಪುನೀತ್ ನಿರ್ಮಾಣ ಮಾಡಿ ತಾವೂ ಸಹ ಭಾಗಿಯಾಗಿದ್ದ ಟ್ರಾವೆಲ್ ಸಿನಿಮಾ 'ಗಂಧದ ಗುಡಿ' ಬಿಡುಗಡೆ ಆಗಲಿದೆ.

    English summary
    Producer Kishore said We are ready to release James movie on Puneeth Rajkumar's birthday. Hope COVID situation will be better in coming days.
    Wednesday, January 26, 2022, 22:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X