twitter
    For Quick Alerts
    ALLOW NOTIFICATIONS  
    For Daily Alerts

    ಚೆನ್ನೈ ಮಳೆ: ಹೆದರಬೇಡಿ ನಿಮಗೆ ನಾವಿದ್ದೇವೆ ಎಂದ ಕಾಲಿವುಡ್ ಸ್ಟಾರ್ಸ್..!

    By Suneetha
    |

    ಆಕಾಶ ತೂತು ಬಿದ್ದಂತೆ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಜಲಪ್ರವಾಹಕ್ಕೆ ತುತ್ತಾಗಿರುವ ತಮಿಳುನಾಡಿನ ಜನತೆಗೆ ಕಾಲಿವುಡ್ ನ ಸ್ಟಾರ್ ನಟ-ನಟಿಯರು ಕೈಲಾದ ಮಟ್ಟಿಗೆ ಸಹಾಯ ಹಸ್ತ ಚಾಚಿದ್ದಾರೆ.

    ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ವಿಶಾಲ್ ಕೃಷ್ಣ, ನಟ ಧನುಷ್, ನಟ ಸೂರ್ಯ, ನಟ ಕಾರ್ತಿ ಮುಂತಾದವರು ದೇಣಿಗೆ ನೀಡಿ ಪ್ರವಾಹಕ್ಕೀಡಾದ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ.

    ನಟ ಸೂರ್ಯ ಮತ್ತು ನಟ ಕಾರ್ತಿ ಅವರು ಸುಮಾರು 25 ಲಕ್ಷ ರೂಪಾಯಿ ಹಾಗೂ ನಟ ವಿಶಾಲ್ ಕೃಷ್ಣ ರೆಡ್ಡಿ 10 ಲಕ್ಷ, ನಟ ಧನುಷ್ ಅವರು 5 ಲಕ್ಷ ಹಣವನ್ನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವ ಮೂಲಕ ಸಂತ್ರಸ್ತರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕೈ ಜೋಡಿಸಿದ್ದಾರೆ.

    ಅಂದಹಾಗೆ ಇನ್ನು ಕೆಲವು ಸ್ಟಾರ್ ನಟರು ತಮಿಳು ನಾಡಿನ ಜನತೆಗೆ ಸಹಾಯ ಹಸ್ತ ಚಾಚಿದರೆ, ಇನ್ನು ಕೆಲವರು ಟ್ವಿಟ್ಟರ್ ನಲ್ಲಿ ಪ್ರಾರ್ಥಿಸಿದ್ದಾರೆ. ಯಾವ ಯಾವ ಸ್ಟಾರ್ ನಟರು ಪ್ರಾರ್ಥಿಸಿದ್ದಾರೆ ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..

    ಸೂಪರ್ ಸ್ಟಾರ್ ರಜನಿಕಾಂತ್

    ಸೂಪರ್ ಸ್ಟಾರ್ ರಜನಿಕಾಂತ್

    ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರು 10 ಲಕ್ಷ ರೂಪಾಯಿಯನ್ನು ತಮಿಳುನಾಡು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದು, ರಕ್ಷಣಾ ಕಾರ್ಯಾಚರಣೆಗೆ ಸೂಪರ್ ಸ್ಟಾರ್ ಸಹಾಯ ಮಾಡಿದ್ದಾರೆ. ರಜನಿಕಾಂತ್ ನೇತೃತ್ವದ ಶ್ರೀ ರಾಘವೇಂದ್ರ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಿ.ಎಂ ಪರಿಹಾರ ನಿಧಿಗೆ ದೇಣಿಗೆ ನೀಡಲಾಗಿದೆ.

    ನಟ ಜಯಂ ರವಿ

    ಬ್ರೆಡ್, ಅನ್ನ ಮತ್ತು ಇನ್ನಿತರೇ ಆಹಾರ ಸಾಮಾಗ್ರಿಗಳನ್ನು, ಸಂತೋಮ್ ಮತ್ತು ಮರೀನಾ ಬೀಚ್ ದಂಡೆಗಳ ಕೊಳಚೆ ಪ್ರದೇಶಗಳಲ್ಲಿ ಹಂಚಲಾಗುತ್ತಿದೆ ದಯವಿಟ್ಟು ಈ ಸುದ್ದಿಯನ್ನು ಎಲ್ಲಾ ಕಡೆ ಹರಡಿ ಎಂದು ತಮಿಳು ನಟ ಜಯಂ ರವಿ ಅವರು ಟ್ವೀಟ್ ಮಾಡಿದ್ದಾರೆ.

    ನಟ ಶರತ್ ಕುಮಾರ್

    ಮನೆ ಕಳೆದುಕೊಂಡವರಿಗೆ ಹಾಗೂ ನಿರಾಶ್ರಿತರಿಗೆ ಬಾಗಲು ತೆಗೆದು ಆಶ್ರಯ ನೀಡಿದ ಸತ್ಯಂ ಚಿತ್ರಮಂದಿರ, ಎಜಿಎಸ್ ಮತ್ತು ಫಿನಿಕ್ಸ್ ಮಾಲ್ ನ ವರಿಗೆ ನಾನು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ನಟ ಶರತ್ ಕುಮಾರ್ ಅವರು ಟ್ವಿಟ್ಟರ್ ನಲ್ಲಿ ಧನ್ಯವಾದ ಅರ್ಪಿಸಿದ್ದಾರೆ.

    ನಟಿ ತ್ರಿಷಾ ಕೃಷ್ಣನ್

    ನನ್ನ ಹೃದಯ ಒಡೆದು ಚೂರು ಚೂರಾಗಿದೆ. ದಯವಿಟ್ಟು ಚೆನ್ನೈಗಾಗಿ ಪ್ರಾರ್ಥಿಸಿ ಎಂದು ನಟಿ ತ್ರಿಷಾ ಕೃಷ್ಣನ್ ಅವರು ಟ್ವೀಟ್ ಮಾಡಿದ್ದಾರೆ.

    ನಟ ಸಿದ್ದಾರ್ಥ್

    ಚೆನ್ನೈ ನ, ನಿರಾಶ್ರಿತರಿಗೆ ಆಹಾರದ ಪ್ಯಾಕೇಟ್ ಗಳನ್ನು ವಿತರಿಸುವವರು ಇದ್ದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ, ನಾವು ಸುಮಾರು 50 ರಿಂದ 100 ಆಹಾರದ ಪ್ಯಾಕೇಟ್ ಗಳನ್ನು ಕಳುಹಿಸಿಕೊಡುತ್ತೇವೆ ಎಂದು ನಟ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ.

    ತೆಲುಗು ನಟ ಮಹೇಶ್ ಬಾಬು

    ಚೆನ್ನೈ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿರುವವರಿಗೆ ವೈದ್ಯರುಗಳು ಸಹಾಯ ಹಸ್ತ ಚಾಚಿದ್ದು, ಎಲ್ಲೆಲ್ಲಿ, ಯಾವ ಯಾವ ವೈದ್ಯರು ಸಿಗುತ್ತಾರೆ ಎಂದು ತೆಲುಗು ನಟ ಮಹೇಶ್ ಬಾಬು ಲಿಸ್ಟ್ ಅನ್ನು ಟ್ವೀಟ್ ಮಾಡಿದ್ದಾರೆ.

    ನಟ ಇಳೆಯದಳಪತಿ ವಿಜಯ್

    ತಮಿಳು ನಟ ಇಳೆಯದಳಪತಿ ವಿಜಯ್ ಅವರ ಅಭಿಮಾನಿಗಳ ಸಂಘ ನಿರಾಶ್ರಿತರಿಗೆ ಆಹಾರವನ್ನು ಒದಗಿಸುವ ವ್ಯವಸ್ಥೆ ಮಾಡಿತ್ತು. ನಟ ವಿಜಯ್ ಅಭಿಮಾನಿಗಳ ಸಂಘ ಸುಮಾರು 1000 ಜನರಿಗೆ ತಂಬರಂ ಎಂಬ ಸ್ಥಳದಲ್ಲಿ ಆಹಾರ ವ್ಯವಸ್ಥೆ ಕಲ್ಪಿಸಿತ್ತು.

    ನಟ ವಿಜಯ್

    ಚೆನ್ನೈಯಲ್ಲಿರುವ ಕೆಲವು ಮಸೀದಿಗಳು ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯ ನೀಡಲು ಬಾಗಿಲು ತೆರೆದು ಸೇವೆಗಾಗಿ ನಿಂತಿದೆ, ಯಾರಾದರೂ ಇದ್ದಲ್ಲಿ ಇದನ್ನು ಬಳಸಿಕೊಳ್ಳಬಹುದು ಎಂದು ನಟ ವಿಜಯ್ ಟ್ವೀಟ್ ಮಾಡಿದ್ದಾರೆ.

    English summary
    After some days of respite, fresh downpour on Tuesday crippled life in Chennai, flooding numerous roads and neighbourhoods and causing traffic jams and power cuts. Southern stars too expressed their concerns for the safety of people in Chennai.
    Wednesday, December 2, 2015, 15:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X