twitter
    For Quick Alerts
    ALLOW NOTIFICATIONS  
    For Daily Alerts

    ನ್ಯಾಯಾಲಯಕ್ಕೆ ಹಾಜರಾದ ರಕ್ಷಿತ್ ಶೆಟ್ಟಿ, ಇದು ಸುಲಿಗೆ ತಂತ್ರ ಎಂದ ಸಿಂಪಲ್ ಸ್ಟಾರ್

    |

    ಲಹರಿ ಆಡಿಯೋ ಸಂಸ್ಥೆ ದಾಖಲಿಸಿದ್ದ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ಕಿರಿಕ್ ಪಾರ್ಟಿ' ಸಿನಿಮಾ ತಂಡದ ವಿರುದ್ಧ ಬಂಧನ ವಾರೆಂಟ್‌ ಹೊರಡಿಸಲಾಗಿತ್ತು ಹಾಗಾಗಿ ಇಂದು (ಏಪ್ರಿಲ್ 12) ನಟ ರಕ್ಷಿತ್ ಶೆಟ್ಟಿ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.

    ನ್ಯಾಯಾಲಯದಲ್ಲಿ ಪ್ರಕರಣ ಮುಗಿಸಿ ಬಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಕ್ಷಿತ್ ಶೆಟ್ಟಿ, 'ಇದೊಂದು ಸುಲಿಗೆ ತಂತ್ರ ಅಷ್ಟೆ. ಹಿಂದೆಯೂ ಕೆಲವು ಸಿನಿಮಾಗಳಿಗೆ ಹೀಗೆ ಮಾಡಿದ್ದಾರೆ. ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಸರಿಯಾಗಿ ಬಂದು ಪ್ರಕರಣ ದಾಖಲಿಸುವುದು, ಬಿಡುಗಡೆಗೆ ತೊಂದರೆ ಮಾಡುವುದು ಮಾಡುತ್ತಾರೆ' ಎಂದು ಲಹರಿ ಸಂಸ್ಥೆಯ ಹೆಸರು ಹೇಳದೆ ವಾಗ್ದಾಳಿ ನಡೆಸಿದರು ರಕ್ಷಿತ್ ಶೆಟ್ಟಿ.

    'ನಮ್ಮ ಮೇಲೆ ಪ್ರಕರಣ ದಾಖಲಾದಾಗ ನಾವು ಚೆನ್ನೈಗೆ ಹೋಗಿ ಹಾಡನ್ನು ಕತ್ತರಿಸಿದೆವು, ನ್ಯಾಯಾಲಯದ ಆದೇಶ ಬಂದ ಬಳಿಕ ಹಾಡು ಬಿಡುಗಡೆ ಮಾಡಿದೆವು. ಆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಗೆದ್ದೆವು ಸಹ. ಮತ್ತೆ ಮೂರು ವರ್ಷಗಳ ನಂತರ ನನ್ನ ಮೇಲೆ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಪರಮ್ವಹ ಸ್ಟುಡಿಯೋ ಮೇಲೆ ಪ್ರಕರಣ ದಾಖಲಿಸಿದರು. ನಾನು ಮನೆ ಬದಲಿಸಿದ್ದೆ ಹಾಗಾಗಿ ನನಗೆ ಮಾಹಿತಿ ಇರಲಿಲ್ಲ. ಆದರೆ ಅಜನೀಶ್ ನೋಟಿಸ್ ಅನ್ನೂ ಸಹ ನನ್ನ ಹಳೆಯ ಮನೆಗೆ ಕಳಿಸಿದ್ದರು, ನಮಗೆ ನೋಟಿಸ್ ತಲುಪಬಾರದೆಂದೇ ಅವರು ಹೀಗೆ ಮಾಡಿದ್ದರು ಎಂಬುದು ಇದರಿಂದಲೇ ಗೊತ್ತಾಗುತ್ತದೆ' ಎಂದರು ರಕ್ಷಿತ್ ಶೆಟ್ಟಿ.

    We Did Not Violate Copyright Act: Rakshit Shetty

    'ನೋಟಿಸ್ ಬಗ್ಗೆ ನಮಗೆ ಗೊತ್ತಿಲ್ಲದಿರುವ ಕಾರಣ ನಾವು ಉತ್ತರಿಸಿರಲಿಲ್ಲ ಹಾಗಾಗಿ ವಾರೆಂಟ್ ಹೊರಡಿಸಲಾಗಿತ್ತು. ಹಾಗಾಗಿ ಈಗ ಬಂದು ಉತ್ತರ ನೀಡಿದ್ದೀವಿ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಾವು ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಿಲ್ಲ. ನಾವು ಹಂಸಲೇಖ ಅವರ ಹಾಡಿನ ರಿಧಮ್ ಅನ್ನು ಮಾತ್ರ ಫಾಲೋ ಮಾಡಿದ್ದೀವಿ. ನೋಟ್ಸ್ ಕಾಪಿ ಮಾಡಿಲ್ಲ. ಮೆಲೋಡಿ ಅಥವಾ ಸಾಹಿತ್ಯ ನಕಲು ಮಾಡಿದ್ದರೆ ಮಾತ್ರ ಹಕ್ಕುಸ್ವಾಮ್ಯ ಉಲ್ಲಂಘನೆ ಆಗುತ್ತದೆ. ಆದರೆ ನಾವು ಹಾಡನ್ನು ನಕಲು ಮಾಡಿಲ್ಲ' ಎಂದರು ರಕ್ಷಿತ್ ಶೆಟ್ಟಿ.

    Recommended Video

    Puneeth Rajumar, ಅಪ್ಪನ ಕಷ್ಟ ನೋಡಿ ತುಂಬಾ ಬೇಜಾರಾಗಿತ್ತು | Filmibeat Kannada

    'ಸಂಗೀತ ಹಕ್ಕುಸ್ವಾಮ್ಯ ನಿಯಮದಂತೆ ಯಾವುದೇ ಸಂಗೀತವನ್ನು 11 ಸೆಕೆಂಡ್ ಬಳಸಬಹುದಾಗಿದೆ ಆದರೆ ನಾವು ಅದನ್ನೂ ಸಹ ಮಾಡಿಲ್ಲ. ನಾವು ನಕಲು ಮಾಡಿದ್ದೇವೆ ಎಂದು ತೋರಿಸಿದರೆ ನಾನು ಒಪ್ಪಿಕೊಳ್ಳುತ್ತೇನೆ. ಅಹಂಗೆ ಬಿದ್ದು ಹೀಗೆ ನೋಟಿಸ್ ಕಳಿಸಿದ್ದಾರೆ ಅಷ್ಟೆ. ಆದರೆ ನನಗೆ ಇದು ಹೊಸ ಅನುಭವ, ನಾನು ಯಾವತ್ತೂ ನ್ಯಾಯಾಲಯಕ್ಕೆ ಹೋಗಿರಲಿಲ್ಲ. ಸಿನಿಮಾಗಳಲ್ಲಿ ನೋಡಿದ್ದೆ ಅಷ್ಟೆ. ಇನ್ನು ಮುಂದೆ ಯಾವಾಗಲಾದರೂ ಸಿನಿಮಾಕ್ಕಾಗಿ ಕೋರ್ಟ್ ದೃಶ್ಯಗಳನ್ನು ಬರೆಯಬೇಕಾದರೆ ಈ ಅನುಭವ ಬಳಸಿಕೊಳ್ಳುತ್ತೇನೆ' ಎಂದಿದ್ದಾರೆ ರಕ್ಷಿತ್ ಶೆಟ್ಟಿ.

    English summary
    Actor Rakshit Shetty said we did not violate copyright act. This is false case against us for extortion.
    Monday, April 12, 2021, 23:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X