ಚಿತ್ರೋದ್ಯಮದ ನೈತಿಕ ಬೆಂಬಲದ ಅಗತ್ಯವಿಲ್ಲ: ವಾಟಾಳ್ ನಾಗರಾಜ್ ಗರಂ

ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನೀಡಿರುವ ಡಿಸೆಂಬರ್ 31ರ ಬಂದ್ ಕರೆಗೆ ಚಿತ್ರರಂಗದ ಅರೆಮನಸಿನ ಸ್ಪಂದನೆ ಬಗ್ಗೆ ಕನ್ನಡಪರ ಹೊರಾಟಗಾರ ವಾಟಾಳ್ ನಾಗರಾಜ್ ಅಸಮಾಧಾನ ಹೊರಹಾಕಿದ್ದಾರೆ.

''ಚಿತ್ರರಂಗಕ್ಕಾಗಿ ನಾವು ದಿನಾಂಕವನ್ನು ಬದಲಾಯಿಸಿಕೊಳ್ಳಲು ಆಗುವುದಿಲ್ಲ. ಕೊಡುವುದಾದರೆ ಪೂರ್ಣ ಬೆಂಬಲ ಕೊಡಲಿ ಇಲ್ಲವಾದರೆ ಅವರ ನೈತಿಕ ಬೆಂಬಲದ ಅವಶ್ಯಕತೆ ನಮಗಿಲ್ಲ'' ಎಂದು ಖಾರವಾಗಿಯೇ ನುಡಿದಿದ್ದಾರೆ ವಾಟಾಳ್ ನಾಗರಾಜ್.

ಡಿಸೆಂಬರ್ 31ರಂದು ಶುಕ್ರವಾರವಾಗಿದ್ದು ಅಂದು ಕನ್ನಡದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈಗಾಗಲೇ ಕೊರೊನಾದಿಂದ ತತ್ತರಿಸುವ ಚಿತ್ರರಂಗ ಬಂದ್ ಆಚರಿಸಿದರೆ ಇನ್ನಷ್ಟು ಕನ್ನಡ ಸಿನಿಮಾಗಳಿಗೆ ಸಮಸ್ಯೆ ಆಗಲಿದೆ ಎಂಬ ಕಾರಣದಿಂದ ಈಗಾಗಲೇ ಕೆಲವರು ಬಂದ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬಂದ್ ದಿನಾಂಕವನ್ನು ಬದಲಿಸುವಾದರೆ ಚಿತ್ರರಂಗವು ಸಂಪೂರ್ಣ ಬೆಂಬಲ ನೀಡಲಿದೆ ಎಂದಿದ್ದಾರೆ.

We Dont Want Sandalwoods Moral Support, We Want Full Support: Vatal Nagaraj

ಆದರೆ ಇದಕ್ಕೆ ತಕರಾರು ಎತ್ತಿದ ವಾಟಾಳ್ ನಾಗರಾಜ್, ''ಬೇರೆ ದಿನಾಂಕ ನೀಡಿ ಎಂಬುದು ಅರ್ಥಹೀನ ಬೇಡಿಕೆ. ಬೇರೆ ದಿನ ಬಂದ್ ಮಾಡಿದರೆ ರಾಜ್ಯದ ಸಮಸ್ಯೆ ಪರಿಹಾರವಾಗಿಬಿಡುತ್ತದೆಯೇ? ಇವರು ಬೇರೆ ದಿನಾಂಕ ಕೇಳುತ್ತಿರುವುದು ಯಾವ ಕಾರಣಕ್ಕೆ, ಇವರ ವೈಯಕ್ತಿಕ ಕಾರಣಕ್ಕಲ್ಲವೆ?'' ಎಂದು ವಾಟಾಳ್ ನಾಗರಾಜ್ ಪ್ರಶ್ನೆ ಮಾಡಿದ್ದಾರೆ.

''ಇದೀಗ ನೈತಿಕ ಬೆಂಬಲದ ಮಾತನ್ನಾಡುತ್ತಿರುವ ಕನ್ನಡ ಚಿತ್ರರಂಗ ನಾಳೆಯೇ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಹೋಗಿ ಎಲ್ಲರೂ ಸೇರಿ ಮನವಿ ಮಾಡಿ ಎಂಇಎಸ್‌ ನಿಷೇಧ ಮಾಡುವಂತೆ ಪಟ್ಟು ಹಿಡಿಯಲಿ, ಅವರಿಂದ ಸಕಾರಾತ್ಮಕ ಉತ್ತರ ಪಡೆಯಲಿ, ನಾವು ಕರ್ನಾಟಕ ಬಂದ್ ಕರೆ ಹಿಂಪಡೆಯುತ್ತೇವೆ'' ಎಂದಿದ್ದಾರೆ ವಾಟಾಳ್ ನಾಗರಾಜ್.

''ಡಬ್ಬಿಂಗ್ ಸಿನಿಮಾಗಳ ವಿರುದ್ಧ ಮೊದಲು ದನಿ ಎತ್ತಿದ್ದು ನಾನು, ನನ್ನೊಂದಿಗೆ ಇಡೀಯ ಚಿತ್ರರಂಗ ಬಂದಿತು. ಆದರೆ ಈಗ ನನ್ನ ವಿರುದ್ಧ ನಿಂತಿದೆ ಪರ್ವಾಗಿಲ್ಲ. ಡಬ್ಬಿಂಗ್ ವಿರುದ್ಧ ಹೊರಾಟ ಮಾಡಿದ್ದಕ್ಕೆ ನನ್ನ ವಿರುದ್ಧ ದೆಹಲಿಯಲ್ಲಿ ಕೇಸ್ ಹಾಕಲಾಯಿತು. ನನ್ನನ್ನು ಬಂಧಿಸಿ ಕರೆದೊಯ್ಯುತ್ತೇವೆ ಎಂದು ಕೆಲವು ದಿನಗಳ ಹಿಂದಷ್ಟೆ ನೊಟೀಸ್ ಸಹ ಬಂದಿದೆ. ನಾನು ರಾಜ್ಯದಲ್ಲಿ ಹಲವು ದಶಕಗಳಿಂದ ಕನ್ನಡಪರ ಹೋರಾಟ ಮಾಡುತ್ತಾ ಬಂದಿದ್ದೇನೆ'' ಎಂದು ಸಿಟ್ಟಿನಿಂದಲೇ ಹೇಳಿದರು ವಾಟಾಳ್ ನಾಗರಾಜ್.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಎಂಇಎಸ್ ಪುಂಡರು ಕರ್ನಾಟಕ ಧ್ವಜ ಸುಟ್ಟ ಘಟನೆ ರಾಜ್ಯದೆಲ್ಲೆಡೆ ಕಿಚ್ಚು ಎಬ್ಬಿಸಿದೆ. ಎಂಇಎಸ್ ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಬಂದ್ ಕರೆ ನೀಡಿದ್ದವು. ಇದಕ್ಕೆ ಚಿತ್ರರಂಗದ ಮುಖಂಡರಲ್ಲೊಬ್ಬರಾದ ಸಾ.ರಾ.ಗೋವಿಂದು ಚಿತ್ರರಂಗವು ಪೂರ್ಣ ಬೆಂಬಲ ನೀಡಿ ಶುಕ್ರವಾರ ಬಂದ್ ಆಚರಿಸುತ್ತದೆ ಎಂದಿದ್ದರು. ಆದರೆ ಈ ಏಕಪಕ್ಷೀಯ ನಿರ್ಣಯಕ್ಕೆ ಚಿತ್ರರಂಗದ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾಎರೆ.

ಅದೇ ದಿನ ತಮ್ಮ 'ಲವ್ ಯು ರಚ್ಚು' ಸಿನಿಮಾ ಬಿಡುಗಡೆ ಮಾಡುತ್ತಿರುವ ನಿರ್ಮಾಪಕ ಗುರು ದೇಶಪಾಂಡೆ ಬಂದ್ ವಿಚಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಂದ್ ನಡೆದರೆ ನಾವೆಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಿದ್ದಾರೆ. ಶಿವರಾಜ್ ಕುಮಾರ್, ಯಶ್, ಅಜಯ್ ರಾವ್ ಇನ್ನಿತರರು ಸಹ ನಮ್ಮವರಿಗೆ ಸಮಸ್ಯೆ ಕೊಟ್ಟು ಬೇರೆಯವರ ಮೇಲೆ ಹೋರಾಟ ಮಾಡುವುದು ಸರಿಯಲ್ಲವೆಂಬ ಸಮತೋಲಿತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡಪರ ಸಂಘಟನೆಗಳು ಸರ್ಕಾರಕ್ಕೆ ಡಿಸೆಂಬರ್ 29ರ ವರೆಗೆ ಕಾಲಾವಕಾಶ ನೀಡಿದ್ದು, ಆ ಬಳಿಕ ನಿರ್ಣಯವನ್ನು ಅಧಿಕೃತಗೊಳಿಸುವುದಾಗಿ ಹೇಳಿವೆ.

More from Filmibeat

English summary
Vatal Nagaraj said we don't want sandalwood's moral support. we want full support in this Kannada and Karnataka issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X