ಚಿತ್ರಮಂದಿರದಲ್ಲಿ ನೂರು ಕೋಟಿ ಗಳಿಸುತ್ತೆ ಕೋಟಿಗೊಬ್ಬ 3: ಸೂರಪ್ಪ ಬಾಬು
ಲಾಕ್‌ಡೌನ್ ಇನ್ನೆಷ್ಟು ದಿನ ಮುಂದುವರೆಯುತ್ತೆ. ಲಾಕ್‌ಡೌನ್ ಅಂತ್ಯವಾದರೂ ಚಿತ್ರಮಂದಿರಗಳು ಮರಳಿ ಬಾಗಿಲು ತೆರೆಯಲು ಎಷ್ಟು ದಿನ ಆಗುತ್ತದೆಯೋ? ಬಾಗಿಲು ತೆಗೆದರೂ ಪೂರ್ಣ ಚಿತ್ರಮಂದಿರ ತುಂಬುವಂತೆ ಸರ್ಕಾರ ಆದೇಶಿಸುವುದು ಯಾವಾಗಲೊ ಇವೆಲ್ಲ ಅನಿಶ್ಚಿತತೆಗಳು ಚಂದನವನದ ನಿರ್ಮಾಪಕ, ನಟರನ್ನು ಕಾಡುತ್ತಿದೆ.
Recommended Video
ಸುದೀಪ್ ನಟನೆಯ 'ಕೋಟಿಗೊಬ್ಬ 3' ಸಿನಿಮಾ ಈಗಾಗಲೇ ಕೆಲವು ಬಾರಿ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಹೊರ ರಾಜ್ಯಗಳಲ್ಲಿಯೂ ಸುದೀಪ್‌ಗೆ ಮಾರುಕಟ್ಟೆ ಇರುವ ಕಾರಣ ಅವರ ಸಿನಿಮಾವನ್ನು ಒಟಿಟಿಗೆ ಕೊಟ್ಟುಬಿಡಿ ಎಂದು 'ಕೋಟಿಗೊಬ್ಬ 3' ನಿರ್ಮಾಪಕ ಸೂರಪ್ಪ ಬಾಬುಗೆ ಸಲಹೆ ನೀಡಿದ್ದಾರೆ. ಆದರೆ ಸಿನಿಮಾವನ್ನು ಸುತಾರಾಂ ಒಟಿಟಿಗೆ ಕೊಡುವುದಿಲ್ಲ ಎಂದಿದ್ದಾರೆ ಸೂರಪ್ಪ ಬಾಬು.
ಕೋಟಿಗೊಬ್ಬ 3 ಸಿನಿಮಾವನ್ನು ತಮಗೆ ಕೊಡುವಂತೆ ಒಟಿಟಿಯೊಂದು ಸೂರಪ್ಪ ಬಾಬು ಅವರನ್ನು ಸಂಪರ್ಕಿಸಿ 35 ಕೋಟಿ ಆಫರ್ ಕೂಡ ಕೊಟ್ಟಿತ್ತಂತೆ ಆದರೆ ಸೂರಪ್ಪ ಬಾಬು ಅವರು ಒಟಿಟಿಯ ಮನವಿಯನ್ನು ತಿರಸ್ಕರಿಸಿದ್ದಾರೆ.

ನಮ್ಮ ಸಿನಿಮಾ ಚಿತ್ರಮಂದಿರದಲ್ಲಿ 100 ಕೋಟಿ ಬಾಚಲಿದೆ ಹಾಗಿರುವಾಗ ನಾವ್ಯಾಕೆ ಒಟಿಟಿಗೆ ಕೊಡೋಣ ಎಂದಿದ್ದಾರೆ ಸೂರಪ್ಪ ಬಾಬು.
'ಕೋಟಿಗೊಬ್ಬ 3' ಸಿನಿಮಾವನ್ನು ತಮಿಳಿನ ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಕತೆ ಬರೆದಿರುವುದು ಸುದೀಪ್ ಅವರೆ. ಈ ಸಿನಿಮಾದಲ್ಲಿ ಮಲಯಾಳಂ ನಟಿ ಮಡೋನಾ ಸೆಬಾಸ್ಟಿಯನ್ ನಾಯಕಿಯಾಗಿ ನಟಿಸಿದ್ದಾರೆ.
'ಕೋಟಿಗೊಬ್ಬ 3' ಸಿನಿಮಾದ ಬಿಡುಗಡೆ ಬಳಿಕ ಸುದೀಪ್ ನಟನೆಯ 'ವಿಕ್ರಂ ರೋಣ' ಸಿನಿಮಾ ಸಹ ಬಿಡುಗಡೆ ಆಗಲಿದೆ. ಸಿನಿಮಾದ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇವೆ. ಸುದೀಪ್ ಈ ನಡುವೆ ಮಲಯಾಳಂ ಸಿನಿಮಾ ಒಂದರಲ್ಲಿಯೂ ಸಹ ನಟಿಸಲಿದ್ದಾರೆ.


Click it and Unblock the Notifications











