ಮುಹೂರ್ತ ಮುಗಿಸಿದ್ದ 'ಬೆಲ್ ಬಾಟಮ್ 2' ನಿಂತುಹೋಯ್ತಾ? ಬೆಳೆದ ರಿಷಬ್ ಶೆಟ್ಟಿ ಬಗ್ಗೆ ಜಯತೀರ್ಥ ಹೇಳಿದ್ದೇನು?

2007ರಲ್ಲಿ ಹಸಿವು ಎಂಬ ಕಿರುಚಿತ್ರ ನಿರ್ದೇಶಿಸಿ ಚಿತ್ರರಂಗದಲ್ಲಿ ನಿರ್ದೇಶಕನಾಗಬೇಕೆಂಬ ಕನಸನ್ನು ಹೊತ್ತಿದ್ದ ಜಯತೀರ್ಥ 2011ರಲ್ಲಿ ಒಲವೇ ಮಂದಾರ ಎಂಬ ಚಿತ್ರವನ್ನು ನಿರ್ದೇಶಿಸಿ ಕನ್ನಡ ಚಲನಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಒಂದೊಳ್ಳೆ ನವಿರಾದ ಪ್ರೇಮಕತೆಯನ್ನು ಹೊತ್ತುತಂದಿದ್ದ ಜಯತೀರ್ಥ ಫಸ್ಟ್ ಬಾಲ್ ಸಿಕ್ಸರ್ ಚಚ್ಚಿದ್ದರು. ಹೊಸ ಬಗೆಯ ಫೀಲ್ ಕೊಟ್ಟಿದ್ದ ಈ ಚಿತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು.

ಹೀಗೆ ಮೊದಲ ಚಿತ್ರದಲ್ಲಿ ಗೆದ್ದಿದ್ದ ಜಯತೀರ್ಥ ನಂತರ ಟೋನಿ, ಎಂದೆಂದಿಗೂ, ಬುಲೆಟ್ ಬಸ್ಯಾ, ಬ್ಯೂಟಿಫುಲ್ ಮನಸುಗಳು ಹಾಗೂ ವೆನಿಲ್ಲಾ ಎಂಬ ಚಿತ್ರಗಳನ್ನು ನಿರ್ದೇಶಿಸಿದರಾದರೂ ದೊಡ್ಡ ಮಟ್ಟದ ಹಿಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಹೀಗೆ ಸಾಲು ಸಾಲು ಸಾಮಾನ್ಯವೆನಿಸಿದ ಚಿತ್ರಗಳನ್ನು ನಿರ್ದೇಶಿಸಿದ ಜಯತೀರ್ಥ 2019ರಲ್ಲಿ ಬೆಲ್ ಬಾಟಂ ಎಂಬ ಚಿತ್ರವನ್ನು ನಿರ್ದೇಶಿಸಿದರು.

ಕ್ರೈಮ್ ಕಾಮಿಡಿ ಫಿಲ್ಮ್ ಕೆಟಗರಿಗೆ ಸೇರಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲೂ ಹಿಟ್ ಆಗಿತ್ತು ಹಾಗೂ ಸೂಪರ್ ಕನ್ನಡ ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿತ್ತು. ಹೀಗೆ ದೊಡ್ಡ ಮಟ್ಟದಲ್ಲಿ ಗೆದ್ದಿದ್ದ ಈ ಚಿತ್ರದ ಮುಂದುವರಿದ ಭಾಗ 'ಬೆಲ್ ಬಾಟಮ್ 2' ತಯಾರಿಸಲು ಚಿತ್ರತಂಡ ಮುಂದಾಗಿತ್ತು. ಈ ಸಲುವಾಗಿ ಮುಹೂರ್ತ ಕಾರ್ಯಕ್ರಮವನ್ನೂ ಸಹ ನಡೆಸಲಾಗಿತ್ತು. ಆದರೆ ಮುಹೂರ್ತ ನಡೆದು ಎರಡು ವರ್ಷಗಳು ಕಳೆದರೂ ಚಿತ್ರದ ಚಿತ್ರೀಕರಣದ ಕೆಲಸಗಳು ಮಾತ್ರ ಆರಂಭವಾಗಲಿಲ್ಲ. ಈ ಕುರಿತು ಕೆಲವರಲ್ಲಿ ಪ್ರಶ್ನೆಗಳೂ ಸಹ ಎದ್ದಿದ್ದವು. ಸದ್ಯ ಚಿತ್ರದ ಬಗ್ಗೆ ಸ್ವತಃ ನಿರ್ದೇಶಕ ಜಯತೀರ್ಥ ಮಾತನಾಡಿದ್ದು ಚಿತ್ರದ ಚಿತ್ರೀಕರಣ ಇನ್ನೂ ಆರಂಭವಾಗದಿರಲು ಕಾರಣವೇನೆಂಬುದನ್ನು ಬಿಚ್ಚಿಟ್ಟಿದ್ದಾರೆ.

ಚಿತ್ರಕತೆ ರೆಡಿ ಇದೆ, ಮುಹೂರ್ತ ಮಾಡಿದ್ವಿ, ಅಪ್ಪು ಸರ್ ಬಂದಿದ್ರು

ಚಿತ್ರಕತೆ ರೆಡಿ ಇದೆ, ಮುಹೂರ್ತ ಮಾಡಿದ್ವಿ, ಅಪ್ಪು ಸರ್ ಬಂದಿದ್ರು

ಸದ್ಯ ಜಯತೀರ್ಥ ನಿರ್ದೇಶನದ ಹೊಸ ಚಿತ್ರ ಬನಾರಸ್ ಕುರಿತಾಗಿ ಫಿಲ್ಮಿಬೀಟ್ ಕನ್ನಡ ಸಂದರ್ಶನವನ್ನು ನಡೆಸಿದ್ದು, ಈ ಸಂದರ್ಶನದಲ್ಲಿ ಮಾತನಾಡಿದ್ದ ಜಯತೀರ್ಥ 'ಬೆಲ್ ಬಾಟಂ 2 ಚಿತ್ರದ ಚಿತ್ರಕತೆ ಸಿದ್ಧವಾಗಿದೆ, ಮುಹೂರ್ತ ಮಾಡಿದ್ದೇವೆ, ಎರಡು ವರ್ಷ ಆಯಿತು ಮುಹೂರ್ತ ಮಾಡಿ, ಅಪ್ಪು ಸರ್ ಬಂದು ಅದಕ್ಕೆ ವಿಷ್ ಮಾಡಿದ್ರು, ಎಲ್ಲಾ ಆಗಿದೆ' ಎಂದು ತಿಳಿಸಿದರು.

ಚಿತ್ರೀಕರಣ ಶುರುವಾಗದಿರಲು ಎರಡು ಕಾರಣ

ಚಿತ್ರೀಕರಣ ಶುರುವಾಗದಿರಲು ಎರಡು ಕಾರಣ

ಹೀಗೆ ಮಾತು ಮುಂದುವರಿಸಿದ ಜಯತೀರ್ಥ ಬೆಲ್ ಬಾಟಂ 2 ಚಿತ್ರದ ಮುಹೂರ್ತ ಮುಗಿದ ನಂತರ ಕೊರೊನಾ ಬಂತು ಹಾಗೂ ಚಿತ್ರದ ನಟ ರಿಷಬ್ ಶೆಟ್ಟಿ ಕಾಂತಾರ ಚಿತ್ರದಲ್ಲಿ ನಿರತರಾದ ಕಾರಣ ಚಿತ್ರದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ ಎಂದರು. ಇನ್ನು ಸದ್ಯ ಕಾಂತಾರ ಚಿತ್ರದ ಸಂದರ್ಶನ ಹಾಗೂ ಇತರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ಅವರು ಈ ಕೆಲಸಗಳನ್ನೆಲ್ಲಾ ಮುಗಿಸಿ ಡೇಟ್ ಕೊಡ್ತಾ ಇದ್ದ ಹಾಗೆ ಬೆಲ್ ಬಾಟಮ್ 2 ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಜಯತೀರ್ಥ ತಿಳಿಸಿದರು.

ರಿಷಬ್ ಇಮೇಜ್ ಬದಲಾಗಿದೆ

ರಿಷಬ್ ಇಮೇಜ್ ಬದಲಾಗಿದೆ

ಕಾಂತಾರ ಹಿಂದಿನ ರಿಷಬ್ ಶೆಟ್ಟಿಗೂ ಕಾಂತಾರ ನಂತರದ ರಿಷಬ್ ಶೆಟ್ಟಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ನಾವು ನೀವೆಲ್ಲಾ ಒಪ್ಪಲೇಬೇಕು. ನೇಮ್, ಫೇಮ್ ಕುರಿತಾಗಿ ಅಲ್ಲ, ರಿಷಬ್ ಶೆಟ್ಟಿ ಮುಂದಿನ ಚಿತ್ರದಲ್ಲಿ ವೀಕ್ಷಕರು ಮತ್ತೊಂದು ಹಂತದ ಚಿತ್ರಕತೆ, ಮೇಕಿಂಗ್ ಅನ್ನು ನಿರೀಕ್ಷಿಸಲಿದ್ದಾರೆ, ಪರಭಾಷಾ ಸಿನಿ ಪ್ರೇಮಿಗಳ ಚಿತ್ತ ಕೂಡ ಚಿತ್ರದತ್ತ ಇದೆ. ಇದೇ ವಿಷಯದ ಬಗ್ಗೆ ಜಯತೀರ್ಥ ಸಹ ಮಾತನಾಡಿದ್ದು ಖಂಡಿತವಾಗಿ ರಿಷಬ್‌ಗೆ ಈಗಿರುವ ಇಮೇಜ್‌ಗೆ ತಕ್ಕಂತೆ ಚಿತ್ರಕತೆ ಮಾಡಬೇಕು, ಹಾಗೆಂದ ಮಾತ್ರಕ್ಕೆ ಪಾತ್ರವನ್ನು ಬದಲಿಸಲಾಗುವುದಿಲ್ಲ, ಡಿಟೆಕ್ಟರ್ ದಿವಾಕರ್ ಪಾತ್ರ ಹಾಗೇ ಇರಲಿದ್ದು, ರಿಷಬ್ ರೀಚ್‌ಗೆ ತಕ್ಕಂತ ಕಂಟೆಂಟ್ ತಯಾರಿಸುತ್ತೇವೆ ಎಂದರು. ಒಟ್ಟಿನಲ್ಲಿ ರಿಷಬ್ ಶೆಟ್ಟಿ ಅವರ ಡೇಟ್‌ ನಿರ್ದೇಶಕ ಜಯತೀರ್ಥಗೆ ಸಿಕ್ಕರೆ ಬೆಲ್ ಬಾಟಂ 2 ಬರುವುದು ಖಚಿತ ಎಂಬುದು ಖಾತರಿಯಾಗಿದೆ.

More from Filmibeat

English summary
We will start Bell Bottom 2 once we get Rishab Shetty's date says Jayatheertha. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X