ಸಿಲ್ಕ್ ಸ್ಮಿತಾ ಕುರಿತು ಮತ್ತೊಮ್ಮೆ ಬಯೋಪಿಕ್.!
80ರ ದಶಕದ ಖ್ಯಾತ ನಟಿ ಸಿಲ್ಕ್ ಸ್ಮಿತಾ ಕುರಿತು ಬಾಲಿವುಡ್ ನಲ್ಲಿ 'ಡರ್ಟಿ ಪಿಕ್ಚರ್' ಅಂತ ಸಿನಿಮಾ ಬಂತು. ಇದು ಸಿಲ್ಕ್ ಸ್ಮಿತಾ ಅವರ ಬಯೋಪಿಕ್ ಸಿನಿಮಾ ಆಗಿತ್ತು. ಆದ್ರೆ, ಈ ಚಿತ್ರದಲ್ಲಿ ಸಂಪೂರ್ಣವಾಗಿ ಸಿಲ್ಕ್ ಸ್ಮಿತಾ ಅವರ ಜೀವನವನ್ನ ತೋರಿಸಿರಲಿಲ್ಲ.
ಇದೀಗ, ಮತ್ತೆ ಸಿಲ್ಕ್ ಸ್ಮಿತಾ ಅವರ ಜೀವನದ ಮೇಲೆ ಚಿತ್ರರಂಗ ಕಣ್ಣಾಕಿದೆ. ಹೌದು, ಸಿಲ್ಕ್ ಸ್ಮಿತಾ ಅವರ ಬಗ್ಗೆ ಬಯೋಪಿಕ್ ಚಿತ್ರ ಮತ್ತೆ ಬರ್ತಿದೆ. ಈ ಬಾರಿ ಕಮರ್ಷಿಯಲ್ ಸಿನಿಮಾ ಅಲ್ಲ, ವೆಬ್ ಸೀರಿಸ್.
ಈ ಸಿನಿಮಾವನ್ನ ನಿರ್ಮಾಣ ಮಾಡಲಿರುವುದು ತಮಿಳಿನ ಯುವ ನಿರ್ದೇಶಕ ಪಾ ರಂಜಿತ್. ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ 'ಕಬಾಲಿ' ಮತ್ತು 'ಕಾಲಾ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಈಗ ಸಿಲ್ಕ್ ಸ್ಮಿತಾ ಕುರಿತ ವೆಬ್ ಸೀರಿಸ್ ಗೆ ಬಂಡವಾಳ ಹಾಕಲಿದ್ದಾರೆ.

80ರ ದಶಕದಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಸಿಲ್ಕ್ ಸ್ಮಿತಾ ಕಡಿಮೆ ಅವಧಿಯಲ್ಲಿ ಸುಮಾರು 450ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಸ್ಪೆಷಲ್ ನಂಬರ್ ಡ್ಯಾನ್ಸ್ ಗಳಿಂದ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿದ್ದರು.
ಕೊನೆಯ ದಿನಗಳಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಸಿಲ್ಕ್ ಸ್ಮಿತಾ ಅಪಾರ್ಟ್ ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ಮೂಲಕ ದುರಂತ ಅಂತ್ಯ ಕಂಡರು. ಹೀಗಾಗಿ, ಸಿಲ್ಕ್ ಸ್ಮಿತಾ ಅವರ ಬಾಲ್ಯದಿಂದ ಸಂಪೂರ್ಣವಾಗಿ ಈ ವೆಬ್ ಸೀರಿಸ್ ನಲ್ಲಿ ತೋರಿಸಲು ನಿರ್ಧರಿಸಿದ್ದಾರೆ.
ಸದ್ಯಕ್ಕೆ ಪಾ ರಂಜಿತ್ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ. ಆದ್ರೆ, ಯಾರು ಸಿಲ್ಕ್ ಸ್ಮಿತಾ ಅವರ ಕ್ಯಾರೆಕ್ಟರ್ ನಿರ್ವಹಿಸಲಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ.


Click it and Unblock the Notifications











