»   » ಮುಂಬೈ ಹುಡುಗಿ ಜೊತೆ ನಟ ವಿಶಾಲ್ ನಿಶ್ಚಿತಾರ್ಥ

ಮುಂಬೈ ಹುಡುಗಿ ಜೊತೆ ನಟ ವಿಶಾಲ್ ನಿಶ್ಚಿತಾರ್ಥ

Posted By:
Subscribe to Filmibeat Kannada
Kannada actor Vishal Hegde
ಕನ್ನಡ ಚಿತ್ರಗಳ ನಟ ವಿಶಾಲ್ ಹೆಗಡೆಗೆ ಕಂಕಣಬಲ ಕೂಡಿಬಂದಿದೆ. ಮುಂಬೈ ಮೂಲದ ಹುಡುಗಿ ಪ್ರಿಯಾ ಅವರನ್ನು ವರಿಸಲಿದ್ದಾರೆ ವಿಶಾಲ್. ಇಂದು (ಡಿಸೆಂಬರ್ 5) ವಿಶಾಲ್ ಹೆಗಡೆ ಅವರ ನಿಶ್ಚಿತಾರ್ಥ ಅವರ ಬಂಧು ಮಿತ್ರರ ಸಮ್ಮುಖದಲ್ಲಿ ನೆರವೇರಿತು.

ಇವರಿಬ್ಬರ ಮದುವೆ ಇನ್ನೊಂದು ವಾರದಲ್ಲಿ ಮುಂಬೈನಲ್ಲಿ ನೆರವೇರಲಿದೆ. ಮದುವೆ ಸಂಭ್ರಮ ಮುಂಬೈನಲ್ಲಾದರೆ ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 15ರಂದು ಚಿತ್ರೋದ್ಯಮದ ಗಣ್ಯರು ಹಾಗೂ ಬಂಧುಮಿತ್ರರಿಗೆ ಔತಣ ಕೂಟವನ್ನೂ ಏರ್ಪಡಿಸಿದ್ದಾರೆ ವಿಶಾಲ್.

ವಿಶಾಲ್ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಗುರುತಿಸಿಕೊಂಡಿದ್ದು 'ಹುಡುಗರು' ಚಿತ್ರದಲ್ಲಿ. ಇದಕ್ಕೂ ಮುನ್ನ ಅವರು ನಿನಗಾಗಿ ಕಾದಿರುವೆ, ಗಣೇಶ ಮತ್ತೆ ಬಂದ, ಅಣ್ಣತಂಗಿ, ಗ್ರೀನ್ ಸಿಗ್ನಲ್, ಮನೆಮಗಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ಕೇವಲ ಲವರ್ ಬಾಯ್ ಪಾತ್ರಗಳಲ್ಲಿ ಅಭಿನಯಿಸಿದರೆ ಸಾಲದು ಎಂಬಂತೆ ಈಗ ನೆಗೆಟೀವ್ ಶೇಡ್ ವುಳ್ಳ ಪಾತ್ರವನ್ನೂ ಒಪ್ಪಿಕೊಂಡಿದ್ದಾರೆ. 'ರಣತಂತ್ರ' ಚಿತ್ರದಲ್ಲಿ ಅವರದು ನೆಗೆಟೀವ್ ಶೇಡ್ ವುಳ್ಳ ಪಾತ್ರ. ವಿಜಯ ರಾಘವೇಂದ್ರ ಹಾಗೂ ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ.  ಆಲ್ ದ ಬೆಸ್ಟ್ ವಿಶಾಲ್ ಹೆಗಡೆ. (ಏಜೆನ್ಸೀಸ್)

English summary
Hudugaru fame Kannada actor Vishal Hegde all set to tie the knot in December 2012. The actor is all set to marry Mumbai-based Priya. Sources says the marriage will held in Mubai next week.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada